ಬ್ಯಾಂಕ್ಗಳ ಮೂಲಕ ಸ್ವಸಹಾಯ ಗುಂಪುಗಳಿಗೆ ಸಾಲ ಸೌಲಭ್ಯ: ಬಿ.ಗಣೇಶ್
ಲೋಕದರ್ಶನ ವರದಿ
ಹೂವಿನಹಡಗಲಿ 17: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿಸಿಟ್ರಸ್ಟ್ ಮೂಲಕ 90ಸಾವಿರ ಕೋಟಿ ಹಣವನ್ನು ಸ್ವ-ಸಹಾಯ ಸಂಘದ ಪ್ರತಿನಿಧಿಗಳಿಗೆ ನಾನಾ ಬ್ಯಾಂಕ್ ಮೂಲಕ ಸಾಲ ಸೌಲಭ್ಯವನ್ನು ದೊರಕಿಸಿ ಕೊಡಲಾಗಿದೆ ಎಂದು ಕೊಪ್ಪಳ ವಿಭಾಗದ ನಿರ್ದೇಶಕ ಬಿ.ಗಣೇಶ ಹೇಳಿದರು.
ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿಸಿ ಟ್ರಸ್ಟ್ ,ಜ್ಞಾನವಿಕಾಸ ಕೇಂದ್ರಗಳು ಮತ್ತು ಪ್ರಗತಿಪರ ಬಂಧು-ಸ್ವ-ಸಹಾಯ ಸಂಘದ ಒಕ್ಕೂಟದಿಂದ ರಾಜಶ್ರೀ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಹಾಗೂ ಡಾ.ಹೇಮಾವತಿ ವಿ.ಹೆಗ್ಗೆಡೆ ದಂಪತಿಗಳ ಮಾರ್ಗದರ್ಶನದೊಂದಿಗೆ ನಡೆಯುವ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ತಾಯಿ ಶ್ರೇಷ್ಠ ಮಾತೆಯಾಗಿ ಮಕ್ಕಳ ಭವಿಷ್ಯವನ್ನು ರೂಪಿಸುತ್ತಾಳೆ ಎಂದ ಅವರು ಅತ್ತೆ-ಸೊಸೆ ತಾಯಿ-ಮಗಳಂತೆ ಜೀವನ ಸಾಗಿಸಬೇಕು ಎಂದರು.
ದಾವಣಗೆರೆ ರಾಜ್ಯ ಮಹಿಳಾ ಮತ್ತು ಮಕ್ಕಳ ಸಾಧನಾ ಅಭಿವೃದ್ದಿ ಚಾರಿಟೇಬಲ್ ಸಂಪನ್ಮೂಲ ವ್ಯಕ್ತಿ ಪುಷ್ಪಾಲತ ಮಾತನಾಡಿ ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆ ಪ್ರತಿಯೊಂದು ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾಳೆ ಜತೆಗೆ ವಿದೇಶದಲ್ಲಿ ನಮ್ಮ ಸಂಸ್ಕೃತಿ-ಸಂಸ್ಕಾರವನ್ನು ಗೌರವಿಸುತ್ತಾರೆ ಎಂದ ಅವರು ರಾಜಕಾರಣದಲ್ಲಿ ಮಹಿಳೆಯರಿಗೆ ಸ್ಥಾನಮಾನ ಸಿಗಬೇಕು ಎಂದರು.
ರಾಜ್ಯ ಸಾಹಿತ್ಯ ಸಾಂಸ್ಕೃತಿ ಟ್ರಸ್ಟ್ ಅಧ್ಯಕ್ಷೆ ಶೋಭಾ ಪ್ರಕಾಶ ಮಲ್ಕಿಒಡೆಯರ್ ಅವರು ಕುಟುಂಬ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರ ಕುರಿತು ಮಾತನಾಡಿದರು.ಸರ್ಕಾರಿ ವಕೀಲ ಅಜ್ಜಯ್ಯ,ಸಂತೋಷ ಜೈನ್,ಚನ್ನಬಸಯ್ಯ ಇದ್ದರು.ಪುರಸಭೆ ಅಧ್ಯಕ್ಷ ಜ್ಯೋತಿಮಲ್ಲಣ್ಣ ಅಧ್ಯಕ್ಷತೆ ವಹಿಸಿದ್ದರು.ಕ್ಷೇತ್ರ ಯೋಜನಾಧಿಕಾರಿ ತಿಲಕ್ ರಾಜ್ ಸ್ವಾಗತಿಸಿದರು. ತಾಲೂಕಿನ ಸ್ವ-ಸಹಾಯ ಸಂಘದ ಸದಸ್ಯರು ಭಾಗವಹಿಸಿದ್ದರು.ಜ್ಞಾನವಿಕಾಸ ಸಮನ್ವಯಾಧಿಕಾರಿ ಯಶೋಧ ಪಿ.ಕೊಎನಯಲ್ಲಿ ವಂದಿಸಿದರು. ಮಹಿಳಾ ಸಾಧಕರಿಗೆ ಸನ್ಮಾನಿಸಲಾಯಿತು