ಹೂವಿನ ಹಡಗಲಿ

ಶಿಕ್ಷಕರ ಬೋಧನೆ ಮಕ್ಕಳ ಮನಸ್ಸಲ್ಲಿ ಕುತೂಹಲ ಮೂಡಿಸುವಂತಿರಲಿ: ಡಾ. ಸೋಮಶೇಖರ

ಶಿಕ್ಷಕರ ಬೋಧನೆ ಮಕ್ಕಳ ಮನಸ್ಸಲ್ಲಿ ಕುತೂಹಲ ಮೂಡಿಸುವಂತಿರಲಿ: ಡಾ. ಸೋಮಶೇಖರ

ಹೂವಿನಹಡಗಲಿ 07: ವಿಜ್ಞಾನ ಶಿಕ್ಷಕರು ವಿಜ್ಞಾನ ಕಲಿಸುವ ಸಂದರ್ಭದಲ್ಲಿ ಮಕ್ಕಳಿಗೆ ವೈಜ್ಞಾನಿಕವಾದ ಸಿದ್ಧಾಂತಗಳ  ತಿಳಿಸುವುದರ ಜತೆಗೆ ವಿದ್ಯಾರ್ಥಿಗಳಿಗೆ ಕುತೂಹಲ ಮೂಡಿಸುವ ರೀತಿಯಲ್ಲಿ ಭೋದನೆ ಮಾಡಬೇಕು ಎಂದು ನಿವೃತ್ತ ಪ್ರಾಚಾರ್ಯ ಡಾ.ಎಸ್.ಸೋಮಶೇಖರ ಹೇಳಿದರು. 

ಪಟ್ಟಣದ ಜಿಬಿಆರ್ ಪದವಿ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರ ಮತ್ತು  ಆಂತರಿಕ ಗುಣಮಟ್ಟ ಭರವಸೆ ಕೋಶ ಸಹಯೋಗದಲ್ಲಿ  ಬುಧವಾರ ಕಾಲೇಜಿನ ಹಾನಗಲ್ಲ ಕುಮಾರೇಶ ಸಭಾಂಗಣದಲ್ಲಿ ಆಯೋಜಿಸಿದ್ದ 2023  ವಿಶೇಷ ಉಪನ್ಯಾಸ ಮಾಲಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು. 

ಮಕ್ಕಳಲ್ಲಿ ಅನೇಕ ವಿಚಾರಗಳ ಕುರಿತು ಆಲೋಚನೆಗಳಿರುತ್ತವೆ ಶಿಕ್ಷಕರಾದವರು ಅವುಗಳನ್ನ ಗ್ರಹಿಸಿ ಮಕ್ಕಳ ವಿಚಾರಗಳನ್ನು ಇನ್ನಷ್ಟು ಹೆಚ್ವಿಸಿ ಕಲಿಕೆಗೆ ಅಣಿಗೊಳಿಸಬೇಕು. ಚಿಕ್ಕ ಮಕ್ಕಳ ಆಲೋಚನೆಗಳು ವಿಶಿಷ್ಟವಾಗಿರುತ್ತವೆ. ಶಾಲೆಯಲ್ಲಿ ಕಲಿಯುವ ಕಲಿಕೆ ಮಕ್ಕಳ ಭವಿಷ್ಯವನ್ನು ನಿರ್ಮಾಣ ಮಾಡುತ್ತೆ. ವಿಜ್ಞಾನದಲ್ಲಿ  ಪರಿಸರ, ಶಕ್ತಿ,ಆರೋಗ್ಯ, ವೈಜ್ಞಾನಿಕತೆ, ಮಾಹಿತಿ ತಂತ್ರಜ್ಞಾನ ಹಾಗೂ ಇತರೆ ಅಮೂಲ್ಯ ಅಂಶಗಳನ್ನು ಅವಲೋಕಿಸಿ ಸತ್ಯಾ ಸತ್ಯತೆಗೆ ತಕ್ಕಂತೆ ಕಲಿಕೆ ಪ್ರಾರಂಭವಾಗುತ್ತೆ.  ವಿಜ್ಞಾನ ಕಲಿತವನು ಮೂಡಲನಂಬಿಕೆಯ ಆಚರಣೆಗಳನ್ನು ನಂಬುವುದಿಲ್ಲ. ಶಿಕ್ಷಕರು ವಿದ್ಯಾರ್ಥಿಗಳಿಗೆ  ವಿಷಯದ ಮಾಹಿತಿ ನೀಡುವುದರ ಜತೆಗೆ ಪ್ರಶ್ನೆ ಮಾಡುವ ಸ್ವಾತಂತ್ರ್ಯವನ್ನು  ನೀಡಬೇಕು ಎಂದರು. 

ಶಿಕ್ಷಕರು ಜೈಲರ್ ಆಗಬಾರದು ಮಕ್ಕಳ ಅನುಮಾನಗಳನ್ನು ಪರಿಹರಿಸುವ ಮೂಲಕ ಮಕ್ಕಳನ್ನು ಓದಿನ ಕಡೆಗೆ ವಾಲುವಂತೆ ಮಾಡಬೇಕು. ಪುಸ್ತಕದಲ್ಲಿರುವುದನ್ನು ಹೇಳುವುದಲ್ಲದೆ ಪ್ರಯೋಗಾತ್ಮಕವಾದ ಕಲಿಕೆಗೆ ಮುಂದಾಗಬೇಕು. ಮಕ್ಕಳಿಗೆ ಶಿಕ್ಷಕರು ಸರಿಯಾಗಿ ಭೋದಿಸದಿದ್ದರೆ ಅದಕ್ಕೆ ಶಿಕ್ಷಕರು ಕಾರಣರಲ್ಲ, ಶಿಕ್ಷಕರಿಗೆ ಸರಿಯಾದ ತರಬೇತಿಯ ಅವಶ್ಯಕತೆ ಇದೆ. ಪ್ರತಿ ತರಗತಿಯ ನಾಯಕ ಶಿಕ್ಷರರಾಗಬಾರದು ಮಕ್ಕಳೇ ಅಲ್ಲಿ ನಾಯಕತ್ವದ ಗುಣ ಬೆಳೆಸಿಕೊಳ್ಳುವ ಮೂಲಕ ಅವರೇ ನಾಯಕರಾಗಬೇಕು. ಆ ರೀತಿಯ ವಾತಾವರಣವನ್ನು ನಿಮರ್ಾಣ ಮಾಡಬೇಕು ಎಂದರು. 

ಬೆಂಗಳೂರು ವಿ.ವಿ. ನಿವೃತ್ತ ಪ್ರಾಧ್ಯಾಪಕ ಡಾ.ಬಸವರಾಜ ಕಾಗಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರಸ್ತುತ ವಿಜ್ಞಾನ ವಿಷಯದ ಅಧ್ಯಯನದಲ್ಲಿ ಇಂಗ್ಲೀಷ್ ಭಾಷೆಗೆ ಪ್ರಾಮುಖ್ಯತೆ ನೀಡಿ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಒತ್ತಡ ಹಾಕುತ್ತಿದ್ದೇವೆ. ಮಾತೃ ಭಾಷೆಯಲ್ಲಿ ಕಲಿತ  ವಿಜ್ಞಾನವು ಹೆಚ್ಚು ಪ್ರಭಾವವನ್ನುಂಟು ಮಾಡುತ್ತದೆ. ಮುಂದಿನ ದಿನಗಳಲ್ಲಿ ವಿಜ್ಞಾನದ ವಿಷಯಗಳನ್ನು ಕನ್ನಡದಲ್ಲಿಯೂ ಕಲಿಯುವಂತಾಗಲಿ.  ರಾಷ್ಟ್ರೀಯ ಶಿಕ್ಷಣ ವ್ಯವಸ್ಥೆಯಲ್ಲಿ ಪ್ರತಿ ಶಿಕ್ಷಣ ಸಂಸ್ಥೆ ಮತ್ತು ಕೇಂದ್ರಗಳಲ್ಲಿ  ಐಕ್ಯೂಎಸಿ ಒಳ್ಳೆಯ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಶಿಕ್ಷಣ ಸಂಸ್ಥೆಗಳು ತಮ್ಮ ಕಾರ್ಯವನ್ನು ಪ್ರಪಂಚದ ಮುಂದೆ ತೆರೆದಿಡುತ್ತಿವೆ. ಎಲ್ಲಾ ಶಿಕ್ಷಕರು ಮೊದಲು ಐಕ್ಯೂಎಸಿ ಕಾರ್ಯದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಹೊಂದಬೇಕು ಎಂದರು. 

ಪ್ರಾಚಾರ್ಯ ಎಸ್.ಎಸ್.ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಅಕ್ಕಿ ಶಿವಕುಮಾರ, ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಅಮರೇಗೌಡ ಎನ್.ಪಾಟೀಲ್, ರಸಾಯನಶಾಸ್ತ್ರ ವಿಭಾದ ಮುಖ್ಯಸ್ಥ ಎಂ.ಸದಾಶಿವಾ, ಕನ್ನಡ ವಿಭಾಗದ ಮುಖ್ಯಸ್ಥ ಡಾ.ವೈ.ಚಂದ್ರಬಾಬು, ವಾಣಿಜ್ಯ ವಿಭಾಗದ ಮುಖ್ಯಸ್ಥ ಬಿ.ಮಲ್ಲಿಕಾರ್ಜುನ,  ಸಹಾಯಕ ಪ್ರಧ್ಯಾಪಕಿಯರಾದ ಡಾ.ಮಹಿಮಾಜ್ಯೋತಿ, ಅನ್ನಪೂರ್ಣ, ಕುಸುಮಾ, ಶ್ವೇತಾ, ಕನ್ನಡ ವಿಭಾಗದ ಮುಖ್ಯಸ್ಥ ಡಾ.ವೈ.ಚಂದ್ರಬಾಬು, ವಾಣಿಜ್ಯ ವಿಭಾಗದ ಮುಖ್ಯಸ್ಥ ಬಿ.ಮಲ್ಲಿಕಾರ್ಜುನ, ಹಾಗೂ ತಾಲೂಕಿನ ಶಾಲಾ ಕಾಲೇಜುಗಳ ವಿಜ್ಞಾನ ಶಿಕ್ಷಕರು ಹಾಗೂ ಉಪನ್ಯಾಸಕರು ಭಾಗವಹಿಸಿದ್ದರು 

ಸುದ್ದಿ ಓದಿ