ಇಂಡಿ

ಕಲಿಕಾ ಚೇತರಿಕೆ ಪ್ರಗತಿ ಸಮಾಲೋಚನೆ

ಕಲಿಕಾ ಚೇತರಿಕೆ ಪ್ರಗತಿ ಸಮಾಲೋಚನೆ
ಇಂಡಿ: ತಾಲೂಕಿನ ಇಂಗಳಗಿ ಗ್ರಾಮದಲ್ಲಿ ಯುಬಿಎಸ್ ಶಾಲೆಯಲ್ಲಿ ಹಮ್ಮಿಕೊಂಡ ವಿಜ್ಞಾನ ಮತ್ತು ಗಣಿತ ವಸ್ತು ಪ್ರದರ್ಶನ ಹಾಗೂ

ಇಂಡಿ: ಇಂದಿನ ತಾಂತ್ರಿಕ ಯುಗದಲ್ಲಿ ಕೇವಲ ಪಠ್ಯ ಪುಸ್ತಕಗಳಿಗೆ ಮಕ್ಕಳನ್ನು ಸಿಮೀತ ಮಾಡದೆ ಇನ್ನೀತರ ಕಾರ್ಯ ಚಟುವಟಿಗಳಲ್ಲಿ ಮಕ್ಕಳನ್ನು ತೊಡಗಿಸಿದಾಗ ಮಾತ್ರ  ಅವರಲ್ಲಿ ಅಡಗಿರುವ ಸೂಕ್ತ ಪ್ರತಿಭೆಯನ್ನು ಹೊರ ಹಾಕಲು ಸಾಧ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಸಂತ ರಾಠೋಡ ಹೇಳಿದರು.

ತಾಲೂಕಿನ ಇಂಗಳಗಿ ಗ್ರಾಮದಲ್ಲಿ ಯುಬಿಎಸ್  ಶಾಲೆಯಲ್ಲಿ ಹಮ್ಮಿಕೊಂಡ ವಿಜ್ಞಾನ ಮತ್ತು ಗಣಿತ ವಸ್ತು ಪ್ರದರ್ಶನ ಹಾಗೂ ಕಲಿಕಾ ಚೇತರಿಕೆ ಪ್ರಗತಿ ಸಮಾಲೋಚನೆ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳಿಗೆ ಒಳ್ಳೆಯ ಗುಣಾತ್ಮಕ ಶಿಕ್ಷಣದ ಜೊತೆಗೆ ಕ್ರಿಯಾತ್ಮಕ ಮನೋಭಾವ ಬೆಳೆಸುವ ನಿಟ್ಟಿನಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಪೂರಕವಾಗಿದೆ ಎಂದರು.

ಕ್ಷೇತ್ರ ಸಮನ್ವಯಾಧಿಕಾರಿ ಎಸ್.ಆರ್. ನಡಗಡ್ಡಿ, ಪಿಕೆಪಿಎಸ್ ಅಧ್ಯಕ್ಷ ಪ್ರಭು ಹೊಸಮನಿ ಮಾತನಾಡಿದರು.  

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಪಂ ಅಧ್ಯಕ್ಷ ಮಲ್ಲಿಕಾರ್ಜುನ ಕುಂಬಾರ ವಹಿಸಿದ್ದರು.

ವೇದಿಕೆ ಮೇಲೆ ಧರ್ಮಗುರು ಜಿಯಾವುಲಹಕ್ ಉಮರಿ, ಮಾಜಿ ಗ್ರಾಪಂ ಅಧ್ಯಕ್ಷ ದಾದಾಸಾಹೇಬ ಪವಾರ, ಎಸ್ಡಿಎಮ್ಸಿ  ಅಧ್ಯಕ್ಷ ಬಾಬು ಅತ್ತಾರ, ಎಮ್.ಎಮ್. ಬಗಲಿ, ಬಿ.ಡಿ. ಛಪ್ಪರಬಂದ, ಫರ್ವಿ ಜ ಪಟೇಲ,  ಗ್ರಾಪಂ ಸದಸ್ಯ ಪೈಗಂಬರ ಮಣುರ, ಅಬ್ಲರಜಾಕ ಕೊಂಕಣಿ, ಯಲ್ಲಪ್ಪ ಪೂಜಾರಿ, ಶಕೀಲ ಮಣ್ಣೂರ, ಮುಖ್ಯಗುರು ಕಾಸಿಂ ಮಕಾನದಾರ, ಶಿಕ್ಷಕ ಮಹಿಬು ಪಟೇಲ, ಶಕ್ಷಕಿ ರಾಜೇಶ್ವರಿ ಘೊಡಕೆ, ಜಕರಿಯ ಹೋರ್ತಿ, ಜಾಸ್ಮಿನ ಹಸಿಮ ಅರಬ, ಹಸೇನಸಾಬ ನರವೆ, ಮುನ್ನಾ ಅಹಿರಸಂಗ, ಬಾಬು ಮಸಳಿ, ಮುನಿರ ಚಡಚಣಕರ ಸೇರದಂತೆ ಅನೇಕರು ಇದ್ದರು.


ಸುದ್ದಿ ಓದಿ