ರಾಣೆಬೆನ್ನೂರ

ಕೊನೆಯ ಶ್ರಾವಣ ಶನಿವಾರ ಅದ್ಧೂರಿಯಾಗಿ ನಡೆದ ಶ್ರೀ ಮಾರುತಿ ದೇವರ ಕಾರ್ಯಕ್ರಮ

ಕೊನೆಯ ಶ್ರಾವಣ ಶನಿವಾರ ಅದ್ಧೂರಿಯಾಗಿ ನಡೆದ ಶ್ರೀ ಮಾರುತಿ ದೇವರ ಕಾರ್ಯಕ್ರಮ

ಲೋಕದರ್ಶನ ವರದಿ

ರಾಣೇಬೆನ್ನೂರು  09: ಇಲ್ಲಿನ ಮಾರುತಿ ನಗರದ ಇತಿಹಾಸ ಪ್ರಸಿದ್ಧ ಮಾರುತಿ ದೇವರ ಶ್ರಾವಣ ಮಾಸದ ಧಾರ್ಮಿಕ ಕಾರ್ಯಕ್ರಮವು ತಿಂಗಳ ಕಾಲ ಅತ್ಯಂತ ಧಾರ್ಮಿಕವಾಗಿ ನಡೆದು ಕಡೇ ಶ್ರಾವಣ ಶನಿವಾರವಾದ ಇಂದು ಅತ್ಯಂತ ಸಡಗರ-ಸಂಭ್ರಮದೊಂದಿಗೆ ಹತ್ತಾರು ಸಾವಿರ ಭಕ್ತಾಧಿಗಳ ಮಧ್ಯೆ ಸಾಂಗಮಂಗಲಗೊಂಡಿತು.

ಕೊನೆಯ ದಿನವಾದ ಇಂದು ಸಾರ್ವಜನಿಕವಾಗಿ ಶ್ರೀ ಮಾರುತಿ ದೇವಸ್ಥಾನ ಸೇವಾ ಸಮಿತಿಯು ಸಾಮೂಹಿಕವಾಗಿ ಮಹಾ ಪ್ರಸಾದ ವಿತರಣಾ ಕಾರ್ಯಕ್ರಮವನ್ನು ಆಯೋಜಿಸಿತ್ತು. ಇಂದು ನಗರಸಭಾ ಸದಸ್ಯರಾದ ಪುಟ್ಟಪ್ಪ ಮರಿಯಮ್ಮನವರ, ಶೇಖಪ್ಪ ಹೊಸಗೌಡ್ರ,  ಚೋಳಪ್ಪ ಕಸವಾಳ, ಬಸವರಾಜ ಲಕ್ಷ್ಮೇಶ್ವರ, ಕರಬಸಪ್ಪ ಜಾಡರ ಸೇರಿದಂತೆ ನೂರಾರು ಗಣ್ಯರು, ಸಾವಿರಾರು ಭಕ್ತರು ಶ್ರೀ ಮಾರುತಿ ದೇವರ ದರ್ಶನಾಶೀರ್ವಾದ ಪಡೆದರು.

ವ್ಯವಸ್ಥಾಪನೆಯ ಮುಂಚೂಣಿಯಲ್ಲಿ ದೇವಸ್ಥಾನ ಸಮಿತಿಯ ಅಧ್ಯಕ್ಷ ಬಸವರಾಜಪ್ಪ ಕೋಳೂರ, ಉಪಾಧ್ಯಕ್ಷ ಹನುಮಂತಪ್ಪ ಕದರಮಂಡಲಗಿ, ಕಾರ್ಯದರ್ಶಿ ಹನುಮಂತಪ್ಪ ಕೋಳೂರ, ಕರಬಸಪ್ಪ ಕೋಗಳೆ, ಖಜಾಂಚಿ ಲಕ್ಷ್ಮಣ ಕದರಮಂಡಲಗಿ, ಸದಸ್ಯರಾದ ಕರಬಸಪ್ಪ ನೀಲಗುಂದ, ರಾಮಣ್ಣ ನ್ಯಾಮತಿ, ಪಿತಾಂಬರಪ್ಪ ಬಜ್ಜಿ, ಹನುಮಂತಪ್ಪ ಬಂಟನೂರ, ವಿಜಯಕುಮಾರ ಕ್ಯಾದಿಗಿ, ವೆಂಕಟೇಶ ಪೆನಗೊಂಡಲ, ಪ್ರಶಾಂತ ಮೇಡಂ, ಹನುಮಂತಪ್ಪ ಕ್ಯಾಣಿ, ನಿಂಗಪ್ಪ ವಿಭೂತಿ, ರಮೇಶ್ ಅಮಾಸಿ ಸೇರಿದಂತೆ ಮತ್ತಿತರ ಗಣ್ಯರು ಪದಾಧಿಕಾರಿಗಳು, ಭಕ್ತರು ಪಾಲ್ಗೊಂಡಿದ್ದರು 

ಸುದ್ದಿ ಓದಿ