ಖನ್ನೂರು ವಿದ್ಯಾನಿಕೇತನ ಶಾಲೆಯಲ್ಲಿ ಕಾರ್ಗಿಲ್ ವಿಜಯ ದಿವಸ್ ಆಚರಣೆ
ರಾಣೇಬೆನ್ನೂರು :ನಾಡು ನುಡಿ ದೇಶ ಭಾಷೆ ನಮ್ಮೆಲ್ಲರ ಉಸಿರಾದಾಗ ಮಾತ್ರ ಭಾರತ ದೇಶದ ಕೀರ್ತಿ ಪತಾಕೆ ವಿಶ್ವದ ಮುಗಿಲೆತ್ತರಕ್ಕೆ ಹಾರಲಿದೆ ಎಂದು ಖನ್ನೂರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಂ. ಎಂ.ಖನ್ನೂರ ಹೇಳಿದರು.
ಸೋಮವಾರ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಆಯೋಜಿಸಿದ್ದ ಕಾರ್ಗಿಲ್ ವಿಜಯ ದಿವಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಭಾರತೀಯರು ಇಂದು ದೇಶದಾದ್ಯಂತ ಅತ್ಯಂತ ಸುಖ, ಶಾಂತಿ, ನೆಮ್ಮದಿ ಮತ್ತು ಸುರಕ್ಷತೆಯಿಂದ ಬದುಕಿ ಬಾಳುತ್ತಿರುವುದಕ್ಕೆ, ನಮ್ಮ ಭಾರತೀಯ ಯೋಧರೇ ಕಾರಣರಾಗಿದ್ದಾರೆ. ಅವರು ಕಾವಲು ತಾಯರೇ ನಿದ್ದೆ ಮಾಡುತ್ತಿದ್ದರೆ, ದೇಶ ಯಾವುದೇ ಕಾರಣಕ್ಕೂ ಸುರಕ್ಷಿತ ವಾಗಿರುತ್ತಿರಲಿಲ್ಲ ಎನ್ನುವ ವಾಸ್ತವ್ಯ ಸತ್ಯವನ್ನು, ಭವಿಷ್ಯದ ಯುವ ಜನಾಂಗ ಅರಿತುಕೊಳ್ಳಬೇಕು ಎಂದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ನಿವೃತ್ತ ಯೋಧ ಸಮಿವುಲ್ಲಾ ತಹಸೀಲ್ದಾರ್ ಆವರು, ಭಾರತ ದೇಶದಲ್ಲಿ ಜನ್ಮ ತಾಳುವ ಪ್ರತಿಯೊಬ್ಬರೂ ಪುಣ್ಯ ಮತ್ತು ಭಾಗ್ಯಶಾಲಿಗಳು, ಭಾರತದ ಇತಿಹಾಸ ಎಲ್ಲ ರಾಷ್ಟ್ರಗಳಿಗಿಂತಲೂ ಬಹು ವಿಶೇಷವಾಗಿದೆ. ದೇಶಕ್ಕಾಗಿ ಭಾರತೀಯ ಯೋಧರರು ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ. ಯೋಧರಾಗಿ ಸೇವೆ ಸಲ್ಲಿಸುವುದು ಪುಣ್ಯ ವಿಶೇಷವಾಗಿದೆ. ಎಂದ ಅವರು ವಿದ್ಯಾರ್ಥಿಗಳು, ಭಾರತೀಯರಾಗಿ ಭವಿಷ್ಯದಲ್ಲಿ ಯುದ್ಧ ಭೂಮಿಯಲ್ಲಿ ಸೇವೆ ಸಲ್ಲಿಸುವ ಸಂಕಲ್ಪ ಮಾಡಬೇಕಾದ ಇಂದಿನ ಅಗತ್ಯವಿದೆ ಎಂದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೆ ಶಾಲೆಯ ನೂರಾರು ವಿದ್ಯಾರ್ಥಿಗಳು ಯುದ್ಧ ಭೂಮಿ ಮತ್ತು ಭಾರತೀಯ ಯೋಧರ ಕುರಿತು ತಮ್ಮದೇ ಆದ ವಿವೇಚನೆಯಲ್ಲಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಶಾಲೆಯ ಪ್ರಾಂಶುಪಾಲೆ ಸಮೀರ್ ಫರ್ನಾಂಡಿಸ್, ಆಡಳಿತ ಮಂಡಳಿಯ, ಡಾ. ಪ್ರವೀಣ್ ಖನ್ನೂರ್, ಡಾ: ಶೈಲ ಶ್ರೀ ಖನ್ನೂರ್, ಉಷಾ, ತನುಶ್ರೀ ಚೇತನ್ ಕುಡುಪಲಿ, ಕರಿ ಬಸವನ ಗೌಡ ಸುಂಕಾಪುರ್, ಗಾಯಿತ್ರಿ ಸೇರಿದಂತೆ, ಶಾಲೆಯ ಶಿಕ್ಷಕರು, ಉಪನ್ಯಾಸಕರು, ಆಡಳಿತ ಮಂಡಳಿಯ ಸದಸ್ಯರು ಮತ್ತಿತರರು ಕಾರ್ಗಿಲ್ ದಿವಸ ಪುರಿತು ಮಾತನಾಡಿದರು. ಸೃಷ್ಟಿ ಸಿ.ಜಿ, ಸ್ವಾಗತಿಸಿದರು. ಪ್ರಕಾಶ್ ಕೆಂಪಳ್ಳೇರ ಪರಿಚಯಿಸಿದರು. ಶ್ರೇಯಾ ಅಪ್ಪಾಜಿ ಮತ್ತು ಲಕ್ಷ್ಮಿ ಆಡೂರ ನಿರೂಪಿಸಿದರು ಶ್ರೇಯಾ ಉಜ್ಜಮ್ಮನವರ್ ವಂದಿಸಿದರು