ದಲ್ಲಾಳಿಗಳ ಹಾವಳಿ ತಪ್ಪಿಸುವಂತೆ ಕರವೇ ಕಾರ್ಯಕರ್ತರು ತಹಶೀಲ್ದಾರಗೆ ಮನವಿ
ಇಂಡಿ: ಇಂಡಿ ಉಪ ನೋಂದಣಿ ಕಛೇರಿಯಲ್ಲಿ ಅನಧಿಕೃತ ಸಿಬ್ಬಂದಿಗಳು ಕಛೇರಿಯಲ್ಲಿ ಕುಳಿತುಕೊಂಡು ಸರಕಾರಿ, ಹೊರಗುತ್ತಿಗೆ ಸಿಬ್ಬಂದಿಯಂತೆ ಕಾರ್ಯನಿರ್ವಹಿಸುತ್ತಿದ್ದು. ಇ.ಸಿ. ಹಾಗೂ ದಸ್ತಾವೇಜು ನಕಲು ಪ್ರತಿ ಕೇಳಿ ಬರುವ ಸಾರ್ವಜನಿಕರಿಂದ ಸರಕಾರ ನಿಗಧಿಪಡಿಸಿದ ದರಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಹಣವನ್ನು ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕರವೇ ಪದಾಧಿಕಾರಿಗಳು ಬುಧವಾರ ಕಂದಾಯ ಉಪವಿಭಾಗಾಧಿಕಾರಿಗಳ ಕಾರ್ಯಾಲಯದ ಗ್ರೇಡ್ 2 ತಹಶೀಲ್ದಾರ ವಿರೂಪಾಕ್ಷಯ್ಯ ಬಣಗಾರ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಸರಕಾರ ನಿಗದಿಪಡಿಸಿದ ಶುಲ್ಕ ಎಷ್ಟೆಂದು ಕೇಳಿದರೆ ಇಲ್ಲಿ ಎಲ್ಲಾ ಕೆಲಸಕ್ಕೆ ಮೇಲಾಧಿಕಾರಿಗಳಿಗೆ ಹಣವನ್ನು ನೀಡಬೇಕಾಗುತ್ತದೆ. ಇಲ್ಲವಾದರೆ ಕೆಲಸ ವಿಳಂಬವಾಗುತ್ತದೆ ಎಂದು ಬೆದರಿಕೆ ಹಾಕುತ್ತಾರೆ. ಸಾಕಷ್ಟು ಬಾರಿ ಉಪ ನೋಂದಣಾಧಿಕಾರಿಗಳ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ.್ಲ ರೈತರ ಹಾಗೂ ಸಾರ್ವಜನಿಕರ ಪ್ರತಿಯೊಂದು ಕೆಲಸಕ್ಕೆ ಅನಧಿಕೃತ ಸಿಬ್ಬಂದಿಗಳು ಹಣವನ್ನು ವಸೂಲಿ ಮಾಡುತ್ತಿದ್ದಾರೆ ಎಂದು ಕರವೇ ಕಾರ್ಯಕರ್ತರು ಆರೋಪಿಸಿದ್ದಾರೆ.
ಖರೀದಿ, ಮಾರ್ಟಗೇಜ, ಕರಾರು ಪತ್ರ, ಪೇಡಿಪತ್ರ ಹಾಗೂ ಇತರೆ ನೋಂದಣಿ ಕೆಲಸಕ್ಕೆ ಬರುವ ಸಾರ್ವಜನಿಕರು ಉಪ ನೋಂದಣಾಧಿಕಾರಿಗಳಿಗಿಂತ ಮೊದಲು ಕಛೇರಿಯಲ್ಲಿ ಇರುವ ಅನಧಿಕೃತ ಸಿಬ್ಬಂದಿಗೆ ಭೇಟಿಯಾಗವಂತಹ ಪರಿಸ್ಥಿತಿ ಎದುರಾಗಿದೆ. ಅಷ್ಟೇ ಅಲ್ಲದೇ, ಸರಕಾರಿ ಫೀ ಭರಣಾ ಮಾಡಿದರು ಸಾಹೇಬರ ಫೀ ಅಂತಾ ಎಲ್ಲ ದಸ್ತು ಬರಹುಗಾರು ಹೆಚ್ಚಿನ ಹಣವನ್ನು ಪಡೆಯುತ್ತಿದ್ದಾರೆ. ಯಾಕೆ ಅಂತಾ ಕೇಳಿದರೆ ಸಾಹೇಬರಿಗೆ ಕೇಳ್ರಿ ಇಲ್ಲ ಅಂದರೆ ನಾವು ದಸ್ತನ್ನು ಹಾಕುವದಿಲ್ಲವೆಂದು ಅಂಜಿಕೆ ಹಾಕುತ್ತಾರೆ ಮುಂದಿನ ದಿನಮಾನಗಳಲ್ಲಿ ಉಪ ನೋಂದಣಿ ಅಧಿಕಾರಿಗಳು ಸರಿಪಡಿಸದಿದ್ದರೆ ಇಂಡಿ ಉಪ ನೋಂದಣಿ ಕಛೇರಿಗೆ ಬೀಗ ಮುದ್ರೆ ಹಾಕಿ ಪ್ರತಿಭಟನೆ ಮಾಡಬೇಕಾದ ಎಂದರು.
ಪ್ರತಿಭಟನೆಯಲ್ಲಿ ಸುನೀಲಗೌಡ ಬಿರಾದಾರ, ಮಹೇಶ ಹೂಗಾರ, ದಾದು ಕೋಣಸಿರಸಗಿ, ರಾಚು ಬಡಿಗೇರ, ಸುನೀ ಮಠ, ಸದು ಕಂಬಾರ, ಶಿವಕುಮಾರ ಮಡಿವಾಳ, ವಿನಾಯಕ ಕೋರಚಗಾಂವ, ಅಶೋಕ ಪಾಟೀಲ, ನಿಖಿಲ್ ಶೆಟಗಾರ, ಪ್ರಶಾಂತ ಲಾಳಸಂಗಿ, ಶ್ರೀಕಾಂತ ಬಡಿಗೇರ ಸೇರಿದಂತೆ ಕರವೇ ಕಾರ್ಯಕರ್ತರು ಇದ್ದರು.