ಸಮಸ್ಯೆಗಳ ಆಗರವಾಗಿರುವ ಗಡಿಭಾಗದ ಕನ್ನಡ ಶಾಲೆಗಳು
ಲೋಕದರ್ಶನ ವರದಿ
ಮಕ್ಕಳಿಗೆ ವ್ಯವಸ್ಥಿತ ಕಟ್ಟಡ ಕೋಣೆಗಳಿಲ್ಲ*, ನೂರೈವತ್ತು ಮಕ್ಕಳಿಗೆ ಇಬ್ಬರು ಶಿಕ್ಷಕರು* ಕನ್ನಡಿಗರಿಂದ ಹೋರಾಟದ ಎಚ್ಚರಿಕೆ
ಸುಭಾಷ ಕಾಂಬಳೆ
ಸಂಬರಗಿ 02: 2023-24 ಶೈಕ್ಷಣಿಕ ವರ್ಷ ಪ್ರಾರಂಭವಾಯಿತು ಆದರೆ ಗಡಿಭಾಗದ ಹಲವಾರು ಗ್ರಾಮಗಳಲ್ಲಿ ಶಾಲೆ ಕೋಣೆ ನೆಲಸಮ ಮಾಡಿದ್ದಾರೆ. ಇನ್ನು ಕಟ್ಟಡ ಪ್ರಾರಂಭವಿಲ್ಲ. ಶಾಲಾ ಮಕ್ಕಳಿಗೆ ಮರದ ಕೆಳಗೆ ಕುಂತು ಪಾಠ ಕಲಿಯಬೇಕಾದ ಪರಿಸ್ಥಿತಿ ಇದೆ. ಗಡಿ ಭಾಗದ ಕನ್ನಡ ಶಾಲೆಗಳು ವಿವಿಧ ಸಮಸ್ಯೆಯಿಂದ ಮುಚ್ಚುವ ಸ್ಥಿತಿಯಲ್ಲಿ ಬಂದಿವೆ. ರಾಜ್ಯ ಸಕರ್ಾರ ಗಡಿ ಭಾಗದ ಕನ್ನಡ ಶಾಲೆಗಳಿಗೆ ಗಮನ ಹರಿಸಬೇಕು. ಇಲ್ಲವಾದಲ್ಲಿ ಕನ್ನಡಿಗರು ಬೀದಿಗಿಳಿದು ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ರಾಜ್ಯದಲ್ಲಿ ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೆ ಗಡಿ ಭಾಗದ ಕನ್ನಡ ಶಾಲೆಗಳ ಯಾವುದೇ ಸಮಸ್ಯೆ ಪರ್ಯಾಯಗೊಳಿಸಿಲ್ಲ. ಅಧಿಕಾರಿಗಳು ಕೇವಲ ಆಶ್ವಾಸನೆ ನೀಡಿ ಜಾರಿಕೊಳ್ಳುತ್ತಿದ್ದಾರೆ. ಆ ಕಾರಣ ಗಡಿ ಭಾಗದ ಶಾಲೆಗಳು ಸಮಸ್ಯೆ ಇದ್ದಾಂಗೆ ಇರುತ್ತವೆ. ಆಜೂರ ಗ್ರಾಮದ ಹಿರಿಯ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಮೂರು ಕೋಣೆ ಒಂದು ನೂರಾ ಐವತ್ತು ಮಕ್ಕಳ ಸಂಖ್ಯೆ ಶಿಕ್ಷಕರ ಸಂಖ್ಯೆ ಎರಡು ಅದರಲ್ಲಿ ಒಬ್ಬರು ಪ್ರಧಾನ ಗುರುಗಳು ಒಂದರಿಂದ ಏಳು ತರಗತಿ ಇದ್ದು ಒಬ್ಬ ಶಿಕ್ಷಕರು ಇದ್ದು ಏಳು ತರಗತಿಯ ಪಾಠ ಕಲಿಸುವುದು ಹೇಗೆ? ಇಲ್ಲವಾದರೆ ಪ್ರತಿ ವರ್ಷ ಎರಡು ಅತಿಥಿ ಶಿಕ್ಷಕರು ಹಾಗೂ ಎರಡು ಕಾಯಂ ಶಿಕ್ಷಕರು ಮೂರು ಶಿಕ್ಷಕರ ಮೇಲೆ ಶಾಲೆ ನಡಿತಾ ಇದೆ. ಅತಿಥಿ ಶಿಕ್ಷಕ ಇಲ್ಲವಾದರೆ ಎರಡು ಶಿಕ್ಷಕ ಮೇಲೆ ಶಾಲೆ ನಡಿತಾ ಇದೆ. ಈ ಭಾಗದಲ್ಲಿ ಕನ್ನಡ ಶಾಲೆಯ ಪರಿಸ್ಥಿತಿ ಗಂಭೀರವಾಗಿದೆ
ಈ ಶಾಲೆಗೆ ಒಟ್ಟು ಐದು ಕೋಣೆ ಇದ್ದು ಅದರಲ್ಲಿ ಎರಡು ಶಿಥಿಲಗೊಂಡಿವೆ. ಒಂದು ಕೊಠಡಿ ನೆಲಸಮ ಮಾಡಿದ್ದಾರೆ. ಕೋಣೆಗೆ ಕಟ್ಟಡ ಪೂಜೆ ಮಾಡಿ ಮೂರು ತಿಂಗಳ ಆದರೂ ಇನ್ನುವರೆಗೆ ಕಟ್ಟಡ ಪ್ರಾರಂಭವಿಲ್ಲ, ಯಾರೂ ಗುತ್ತಗೆದಾರರು ಇದ್ದಾರೆ ಎಂದು ಗೊತ್ತಾಗುತ್ತಿಲ್ಲ. ಕಟ್ಟಡ ಪ್ರಾರಂಭವಿಲ್ಲ. ಮಕ್ಕಳಿಗೆ ಕೂಡಲು ಕೊಠಡಿ ಇಲ್ಲ. ಇದೆ ಪರಿಸ್ಥಿತಿ ಪಾಂಡೆಗಾವ, ಖೋತವಾಡಿ, ಶಿರೂರ, ಬೇವನೂರ, ಅನಂತಪೂರ, ಸಂಬರಗಿ, ತಾಂವಶಿ, ಶಿವನೂರ, ಅಬಿಯಾಳ ಸೇರಿದಂತೆ ಗಡಿಭಾಗದ ಎಲ್ಲ ಶಾಲೆಗಳಲ್ಲಿ ಕಾಯಂ ಸಮಸ್ಯೆ ಇದ್ದು ಕೊಠಡಿ ಕೊರತೆ ಎದ್ದು ಕಾಣುತ್ತಾ ಇದೆ. ಈ ಭಾಗಕ್ಕೆ ರಾಜ್ಯದಲ್ಲಿ ಬಂದಿರುವ ನೂತನ ಸರ್ಕಾರ ಗಮನಹರಿಸಿ ಈ ಭಾಗದ ಕನ್ನಡ ಶಾಲೆಗಳ ಸಮಸ್ಯೆಗಳನ್ನು ಶೀಘ್ರ ಪರ್ಯಾಯಗೊಳಿಸದೇ ಹೋದರೆ ಭವಿಷ್ಯದಲ್ಲಿ ಶಾಲೆಗಳು ಮುಚ್ಚವ ಸಾಧ್ಯತೆ ಇದೆ.
ಈ ಕುರಿತು ಆಜೂರ ಗ್ರಾಮದ ಎಸ್ಡಿಎಮ್ಸಿ ಉಪಾಧ್ಯಕ್ಷ ಆಕಾರಾಮ ಮಹಂಕಾಳೆ ಇವರನ್ನು ಸಂಪರ್ಕಿಸಿದಾಗ ನಮ್ಮ ಗ್ರಾಮದ ಕನ್ನಡ ಶಾಲೆ ಎರಡು ಕೊಠಡಿ ಶಿಥಿಲಗೊಂಡಿದ್ದು ಒಂದು ನೆಲ ಸಮಾನ ಮಾಡಿದ್ದಾರೆ ಒಂದು ಕೊಠಡಿ ಕಟ್ಟಡ ಪೂಜೆ ಮಾಡಿ ಮೂರು ತಿಂಗಳಾಯಿತು. ಇನ್ನುವರೆಗೆ ಕಾಮಗಾರಿ ಪ್ರಾರಂಭವಿಲ್ಲ. ಶೀಘ್ರದಲ್ಲಿ ಪ್ರಾರಂಭ ಮಾಡಬೇಕು ಇಲ್ಲವಾದರೆ ಹೋರಾಟ ಮಾಡಲಾಗುವುದು ಎಂದು ಹೇಳಿದರು.
ಕ್ಷೇತ್ರ ಶಿಕ್ಷಣ ಅಧಿಕಾರಿ ಬಸವರಾಜ ತಳವಾರ ಇವರನ್ನು ಸಂಪರ್ಕಿಸಿದಾಗ ಶೀಘ್ರದಲ್ಲಿ ಗಡಿಭಾಗದ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಲಾಗುವುದು ಹಾಗೂ ಗಡಿಭಾಗದಲ್ಲಿ ಹೆಚ್ಚು ಅತಿ ಶಿಕ್ಷಕರ ನೇಮಕಾತಿ ಮಾಡಿ ಒಳ್ಳೆಯ ಗುಣಮಟ್ಟದ ಶಿಕ್ಷಣ ನೀಡಲಾಗುವುದು ಎಂದರು.
ಲೋಕೊಪಯೋಗಿ ಅಭಿಯಂತರ ಜಯಾನಂದ ಹಿರೇಮಠ ಇವರನ್ನು ಸಂಪಕರ್ಿಸಿದಾಗ ಆ ಗ್ರಾಮಕ್ಕೆ ಭೇಟಿ ನೀಡಿ ಯಾರು ಗುತ್ತಿಗೆದಾರರು ಇದ್ದಾರೆ ಅವರಿಂದ ಕೊಠಡಿ ಕಾಮಗಾರಿ ಪ್ರಾರಂಭ ಮಾಡುತ್ತೇನೆ ಎಂದು ಹೇಳಿದರು