ಪ್ರಪಂಚದ ಶ್ರೇಷ್ಠ ಭಾಷೆಗಳಲ್ಲಿ ಕನ್ನಡವೂ ಒಂದು ; ಡಾ, ಎಚ್,ವಿ, ಬೆಳಗಲಿ
ಪ್ರಪಂಚದ ಶ್ರೇಷ್ಠ ಭಾಷೆಗಳಲ್ಲಿ ಕನ್ನಡವೂ ಒಂದು ; ಡಾ, ಎಚ್,ವಿ, ಬೆಳಗಲಿ
ಹುಬ್ಬಳ್ಳಿ 03; ಪ್ರಪಂಚದಲ್ಲಿರುವ ಭಾಷೆಗಳಲ್ಲಿ ಕನ್ನಡ ಭಾಷೆಯು ವಿಶಿಷ್ಟ ಶೈಲಿಯನ್ನು ಹೊಂದಿರುವ ಏಕೈಕ ಶ್ರೇಷ್ಠ ಭಾಷೆಯಾಗಿದೆ ಎಂದು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಡಾ, ಎಚ್,ವಿ, ಬೆಳಗಲಿ ಯವರು ತಿಳಿಸಿದರು. ಹುಬ್ಬಳ್ಳಿಯ ಕರ್ನಾಟಕ ಕಾನೂನು ವಿಶ್ವವಿದ್ಯಾಲಯದ 69ನೇ ಕರ್ನಾಟಕ ರಾಜ್ಯೋತ್ಸವದ ಆಚರಣೆಯ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಗೋದಾವರಿಯಿಂದ ಕಾವೇರಿಯವರಿಗೆ ಚಾಮರಾಜನಗರದಿಂದ ಬಿದರದವರೆಗೆ ಪ್ರತಿ 30 ಕಿಲೋಮೀಟರ್ ಗೆ ವಿಶೇಷತೆ ಯನ್ನು ಹೊಂದಿರುವ ಪ್ರಪಂಚದ ಶ್ರೇಷ್ಠ ಭಾಷೆಗಳಲ್ಲಿ ಕನ್ನಡವೂ ಒಂದಾಗಿದೆ ಎಂದು ತಿಳಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಕುಲ ಸಚಿವರಾದ ಅನುರಾಧ ವಸ್ತ್ರದ ವಹಿಸಿದ್ದರು. ವಿಶ್ರಾಂತ ಕುಲ ಸಚಿವರಾದ ಡಾ, ಜಿ,ಬಿ ಪಾಟೀಲ್, ಮೌಲ್ಯಮಾಪನ ಕುಲ ಸಚಿವರಾದ ಡಾ, ಶ್ರೀಮತಿ, ರತ್ನಾ-ಭರಮಗೌಡರ್ , ನಿವೃತ್ತ ನ್ಯಾಯಾಧೀಶ ಶ್ರೀ ದುರ್ಗಪ್ಪ, ಮುಂತಾದವರು ಉಪಸ್ಥಿಪರಿದ್ದರು. ಪ್ರೂ,ಗೀರಿಶ ಪಾಟೀಲ್ ನಿರೂಪಿಸಿ ವಂದಿಸಿದರು.