ಧಾರವಾಡ - ಹುಬ್ಬಳ್ಳಿ

69ನೇ ಕರ್ನಾಟಕ ರಾಜ್ಯೋತ್ಸವ ನಿಮಿತ್ತ ಕರ್ನಾಟಕ ವಿಧ್ಯಾವರ್ಧಕ ಸಂಘವು ಕನ್ನಡ ಧ್ವಜಾರೋಹಣ ಕಾರ್ಯಕ್ರಮ

69ನೇ ಕರ್ನಾಟಕ ರಾಜ್ಯೋತ್ಸವ ನಿಮಿತ್ತ ಕರ್ನಾಟಕ ವಿಧ್ಯಾವರ್ಧಕ ಸಂಘವು ಕನ್ನಡ ಧ್ವಜಾರೋಹಣ ಕಾರ್ಯಕ್ರಮ

69ನೇ ಕರ್ನಾಟಕ ರಾಜ್ಯೋತ್ಸವ ನಿಮಿತ್ತ ಕರ್ನಾಟಕ ವಿಧ್ಯಾವರ್ಧಕ ಸಂಘವು ಕನ್ನಡ ಧ್ವಜಾರೋಹಣ ಕಾರ್ಯಕ್ರಮ

ಧಾರವಾಡ 04 : ಕನ್ನಡ ನಮ್ಮಎದೆಯ ಭಾಷೆಯಿದು. ನಮ್ಮಮಾತೃ ಭಾಷೆಯನ್ನು ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳಿಸಿಕೊಂಡು ಹೊಗುವ ಜವಾಬ್ದಾರಿ ಮುಂದಿನ ಯುವಪೀಳಿಗೆಯ ಮೇಲೆ ಇದೆ.ಈ ದಿಶೆಯಲ್ಲಿ ಸಂಘವು ಮಾರ್ಗದರ್ಶನ ಮಾಡಬೇಕು ಮತ್ತುಜಾಗೃತಿ ಮೂಡಿಸಬೇಕುಎಂದುಸಂಘದಉಪಾಧ್ಯಕ್ಷೆ ಪ್ರೊ. ಮಾಲತಿ ಪಟ್ಟಣಶೆಟ್ಟಿಹೇಳಿ  ಕರ್ನಾಟಕರಾಜ್ಯೊತ್ಸವದ ನಿಮಿತ್ತಎಲ್ಲರಿಗೂ ಶುಭಾಶಯಗಳನ್ನು ಕೋರಿದರು.  

69ನೇ ಕರ್ನಾಟಕರಾಜ್ಯೋತ್ಸವ ನಿಮಿತ್ತಕರ್ನಾಟಕ ವಿಧ್ಯಾವರ್ಧಕ ಸಂಘವು ಕನ್ನಡಧ್ವಜಾರೋಹಣಕಾರ್ಯಕ್ರಮದಲ್ಲಿಕನ್ನಡತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕನ್ನಡಧ್ವಜಾರೋಹಣ ಮಾಡಿ ಮಾತನಾಡುತ್ತಿದ್ದರು.ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಕೋಶಾಧ್ಯಕ್ಷರಾದ ಸತೀಶತುರಮರಿಕನ್ನಡ ಪರ ಘೋಷಣೆಗಳನ್ನು ಕೂಗಿದರು. ಶಂಕರ ಕುಂಬಿ ಆರಂಭದಲ್ಲಿ ಕನ್ನಡ ಧ್ವಜಕಂಬಕ್ಕೆ ಪೂಜೆ ಸಲ್ಲಿದರು.ಜಾನಪದ ಸಂಶೋಧನಾ ಕೇಂದ್ರದಮಹಿಳಾ ಘಟಕದವರು ನಾಡಗೀತೆ ಮತ್ತು ರಾಷ್ಟ್ರಗೀತೆಗಳನ್ನು ಹಾಡಿದರುಸಂಘದ ಸಂಸ್ಥಾಪಕರಾದ ರಾ. ಹ. ದೇಶಪಾಂಡೆಮತ್ತುಡಾಽಽ ಪಾಟೀಲ ಪುಟ್ಟಪ್ಪ ಪುತ್ಥಳಿಗೆ ಕರ್ನಾಟಕರಾಜ್ಯೋತ್ಸವ ನಿಮಿತ್ತಮಾಲಾರೆ​‍್ಣ ಮಾಡಲಾಯಿತು.ಡಾ. ಬಿ.ಆರ್‌.ಅಂಬೇಡ್ಕರ್, ಜಗಜ್ಯೋತಿ ಬಸವೇಶ್ವರರು, ಡಾ.ದ. ರಾ. ಬೇಂದ್ರೆ, ಪ್ರೊ.ಕೆ. ಜಿ. ಕುಂದಣಗಾರ, ಡೆಪ್ಯೂಟಿಚನ್ನಬಸಪ್ಪ, ಆಲೂರ ವೆಂಕಟರಾವ, ಲಾಲಬಹದ್ದೂರ ಶಾಸ್ತ್ರಿ, ಡಾ. ವಿ. ಕೃ.ಗೋಕಾಕ, ರೊದ್ದ ಶ್ರೀನಿವಾಸರಾಯರು, ಸರ್‌.ಸಿದ್ದಪ್ಪ ಕಂಬಳಿ, ಶ್ರೀ ಅರಟಾಳ ರುದ್ರಗೌಡರು, ಶ್ರೀ ಸ್ವಾಮಿ ವಿವೇಕಾನಂದರು, ಶ್ರೀ ಜಗಜ್ಯೋತಿ ಬಸವೇಶ್ವರರು, ಶ್ರೀ ಚೆನ್ನಬಸವೇಶ್ವರರು, ಮಹಾತ್ಮಾಗಾಂಧೀಜಿ, ಸರ್ ಎಂ. ವಿಶ್ವೇಶ್ವರಯ್ಯಶ್ರೀ ಎಸ್‌.ಜಿ. ಬಾಳೇಕುಂದ್ರಿ, ರೆವರೆಂಡ್‌ಎಫ್‌.ಕಿಟೆಲ್‌ಪುತ್ಥಳಿಗಳಿಗೆ ಮತ್ತುಕನ್ನಡದ ಮೊದಲ ಶಾಸನ ‘ಹಲ್ಮಿಡಿ ಶಾಸನ ಪ್ರತಿಕೃತಿ’ಗೆ ಸಂಘದಿಂದ ಮಾಲಾರೆ​‍್ಣ ಮಾಡಿಗೌರವ ಸಲ್ಲಿಸಲಾಯಿತು.ಸಂಘದ ಕಾ.ಕಾ.ಸಮಿತಿ ಸದಸ್ಯರಾದಡಾ.ಶೈಲಜಾಅಮರಶೆಟ್ಟಿ,ಗುರು ಹಿರೇಮಠ,ಡಾಽಽ ಶ್ರೀಶೈಲ ಹುದ್ದಾರ, ವಿಶ್ವೇಶ್ವರಿ ಬ. ಹಿರೇಮಠ,ಡಾಽಽ ಧನವಂತ ಹಾಜವಗೋಳ, ಶಿವಾನಂದ ಭಾವಿಕಟ್ಟಿ, ವಸಂತ ಮುರ್ಡೇಶ್ವರ, ರಮಜಾನ್‌ದರ್ಗಾ, ನಿಂಗಣ್ಣಕುಂಟಿ ಸೇರಿದಂತೆ ಸಂಘದ ಸಿಬ್ಬಂದಿಗಳು ಸೇರಿದಂತೆ ಮುಂತಾದವರಿದ್ದರು. 


ಸುದ್ದಿ ಓದಿ