ಕನ್ನಡ ಸಂಸ್ಕೃತಿಗೆ ಬಹು ದೊಡ್ಡ ಇತಿಹಾಸವಿದೆ: ಪೂಜಾರ್
ರಾಣೆಬೆನ್ನೂರು 03: ಕನ್ನಡ ನಾಡು ನುಡಿ ಸಂಸ್ಕೃತಿಗೆ ಬಹು ದೊಡ್ಡ ಇತಿಹಾಸ ಪರಂಪರೆ ಇದೆ ಎಂದು ಶಾಸಕ ಅರುಣ್ ಕುಮಾರ್ ಪೂಜಾರ್ ಹೇಳಿದರು.
ಮಂಗಳವಾರ ಗುಡ್ಡದ ಸ್ಮಾರಕ ಭವನದಲ್ಲಿ ತಾಲೂಕ ಆಡಳಿತ, ನಗರಸಭೆ, ಜಿ.ಪಂ, ತಾಪಂ, ಎಪಿಎಂಸಿ ಮತ್ತಿತರ ಸಂಘಟನೆಗಳು ಆಯೋಜಿಸಿದ್ದ, 67ನೇ ಕನ್ನಡ ರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಕನ್ನಡ ನಾಡು ಕಲೆಗಳ ತವರೂರು, ಸಾಹಿತ್ಯ ಸಂಸ್ಕೃತಿಯ ಬೀಡು ಇಂತಹ ನಾಡಿನಲ್ಲಿ, ಕನ್ನಡದ ಕಂಪು ಪಸರಿಸುವ ಕೆಲಸವಾಗಬೇಕು. ಎಂದ ಅವರು ಕನ್ನಡಿಗರು ನಿರಾಭಿಮಾನಿಗಳಾಗದೆ, ಸ್ವಾಭಿಮಾನಿಗಳಾಗಿ ಕನ್ನಡ ಸಂಸ್ಕೃತಿಯನ್ನು ಮತ್ತಷ್ಟು ಪುನರುತ್ಥಾನ ಗೊಳಿಸುವ ಕಾಯಕದಲ್ಲಿ ಪ್ರತಿಯೊಬ್ಬರು ಮುಂದಾಗಬೇಕು ಎಂದರು. ದಿವ್ಯ ಸಾನಿಧ್ಯ ವಹಿಸಿದ್ದ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ಶ್ರೀ ಪ್ರಕಾಶಾನಂದಜಿ ಮಹಾರಾಜ್ ಅವರು, ಇತಿಹಾಸದ ರಾಜ ಮಹಾರಾಜರು ತಮ್ಮ ಆಡಳಿತ ಉದ್ದಕ್ಕೂ ಕನ್ನಡ ಸಂಸ್ಕೃತಿ, ಸಾಹಿತ್ಯ, ಸಂಗೀತ, ನಾಟ್ಯ ಮತ್ತಿತರ ಕಲೆಗಳ ಮೂಲಕ ನಾಡಿನ ಪರಂಪರೆಯನ್ನು ಜೀವಂತವಾಗಿರಿಸಿದ್ದಾರೆ, ಅಂತಹ ಭವ್ಯ ಸಂಸ್ಕೃತಿ ಹೊಂದಿರುವ ನಾಡಿನಲ್ಲಿ, ಕನ್ನಡದ ಸಂಸ್ಕೃತಿ ಮರೆಯಾಗುತ್ತಿರುವುದು ಅತ್ಯಂತ ವಿಷಾಧಕರ ಸಂಗತಿ ಎಂದರುಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ಶಂಕರ್ ಜಿ.ಎಸ್. ಸರ್ವಧರ್ಮಗಳ ಸಾಮರಸ್ಯದ, ಭಾವೈಕ್ಯತೆಯ ತಾಣ ಹಾವೇರಿ ಜಿಲ್ಲೆ, ಎಲ್ಲವೂ ಇದೆ.
ಆದರೆ, ಪಾಚ್ಚಿಮಾತ್ಯ ಸಂಸ್ಕೃತಿಯ ಭರಾಟೆಯಲ್ಲಿ,, ಕನ್ನಡಿಗರಾದ ನಾವುಗಳು, ನಮ್ಮನ್ನು ನಾವು ಕಳೆದುಕೊಳ್ಳುತ್ತಿದ್ದೇವೆ, ಇನ್ನಾದರೂ ಕನ್ನಡತನವನ್ನು ಮೈಗೂಡಿಸಿಕೊಂಡು ನಮ್ಮತನವನ್ನು ನಾವು ಉಳಿಸಿ ಬೆಳೆಸಿಕೊಳ್ಳಬೇಕಾದ ಅಗತ್ಯವಿದೆ ಎಂದರು. ಸಮಾರಂಭಕ್ಕೂ ಮುನ್ನ ಕನ್ನಡತನವನ್ನು ಪ್ರತಿಬಿಂಬಿಸುವ ಭಾರಿ ವಿದ್ಯಾಥರ್ಿಗಳ ಮೆರವಣಿಗೆ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ನಗರಸಭೆ ಪೌರಾಯುಕ್ತ ಉದಯಕುಮಾರ್ ಬಿ.ಟಿ. ಅಧ್ಯಕ್ಷ ರೂಪ ಚಿನ್ನಿಕಟ್ಟಿ, ಉಪಾಧ್ಯಕ್ಷ ಪ್ರಭಾವತಿ ತಿಳುವಳ್ಳಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ್ ನರಸಗೊಂಡರ್, ಮಾಜಿ ಅಧ್ಯಕ್ಷ ಚೋಳಪ್ಪ ಕಸವಾಳ,ಪ್ರಕಾಶ ಪೂಜಾರ್, ಸ್ವಾಕರವೇ ಅಧ್ಯಕ್ಷ ನಿತ್ಯಾನಂದ ಕುಂದಾಪುರ, ಉಪಾಧ್ಯಕ್ಷ ಕೊಟ್ರೇಶಪ್ಪ ಎಮ್ಮೆ, ಕಾರ್ಯದಶರ್ಿ ಸಿದ್ಧಾರೂಢ ಗುರುಠ, ಕೆ ಎಮ್ ಪಿ ಮಣಿ, ಜಟ್ಟಪ್ಪ ಕರೆಗೌಡ್ರು, ಶಿವಕುಮಾರ್ ಜಾದವ್, ಪಾಲಾಕ್ಷಪ್ಪ ಕಡೆಮನಿ,ಸೇರಿದಂತೆ ಮತ್ತಿತರ.ಗಣ್ಯರು, ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಪಾಲ್ಗೊಂಡಿದ್ದರು. ನಂತರ ನಡೆದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಸಾರ್ವಜನಿಕರ ಗಮನ ಸೆಳೆದವು. ಪ್ರಕಾಶ್ ಗಚ್ಚಿನ ಮಠ ಪ್ರಾರ್ಥಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಹೆಚ್ಪಾಟೀಲ್ ಸ್ವಾಗತಿಸಿದರು. ಕಾಂತೇಶ್ ಅಂಬಿಗೇರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಗುಡ್ಡಪ್ಪ ಮಾಳಗುಡ್ಡಪ್ಪನವರ್ ನಿರೂಪಿಸಿ, ವಂದಿಸಿದರು. ನಾಡಿನ ಖ್ಯಾತ ಕಲಾವಿದರಾದ, ವೀಣಾ ಭೂಸ್ಲೆ, ಅನುಸೂಯಾ ರಾಥೋಡ್, ಪ್ರಕಾಶ್ ಗಚ್ಚಿನ ಮಠ, ಬಸವರಾಜ ಸಾವ ಕ್ಕನವರ್ ತಂಡದವರ, ನಾಡು ನುಡಿ ಸಂಸ್ಕೃತಿ ಬಿಂಬಿತ ಸಾಂಸ್ಕೃತಿಕ ಕಾರ್ಯಕ್ರಮಗಳು ಕಣ್ಮನ ಸೆಳೆದವು