ಕನ್ನಡ ಪರ ಸಂಘಟನೆಗಳ ಕನ್ನಡ ರಾಜ್ಯೋತ್ಸವ: ವಿಜೃಂಭಿಸಿದ ಕನ್ನಡ ಗಾನ ಸಂಸ್ಕೃತಿ
ರಾಣೇಬೆನ್ನೂರು 22: ಕನ್ನಡ ನಾಡು, ನುಡಿ, ನೆಲ, ಜಲ,ಭಾಷೆ ಸಂಸ್ಕೃತಿಗೆ ಧಕ್ಕೆ ಬಂದಾಗ, ಕನ್ನಡಿಗರು ನಿರಾಭಿಮಾನಿಗಳಾಗದೆ, ಸ್ವಾಭಿಮಾನಿಗಳಾಗಬೇಕಾದ ಇಂದಿನ ಬಹು ಅಗತ್ಯವಿದೆ ಎಂದು. ಜೇಕಿನ ಕಟ್ಟಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಬಾಲ ಪ್ರತಿಭೆ, ಕನ್ನಡದ ಅಭಿಮಾನಿ ಅನುಷಾ ಕ. ಹಿರೇಮಠ ಕರೆ ನೀಡಿದರು.
ಸೋಮವಾರ ರಾತ್ರಿ, ಪ್ರಧಾನ ಅಂಚೆ ಕಚೇರಿ ಬಳಿ, ಕನ್ನಡ ಪರ ಸಂಘಟನೆಗಳ ಒಕ್ಕೂಟ"" ಕನ್ನಡ ಧ್ವನಿ "" ಆಯೋಜಿಸಿದ್ದ 68ನೇ ಕನ್ನಡ ರಾಜ್ಯೋತ್ಸವ, ಸ್ವಯಂ ಪ್ರೇರಣಾ ರಕ್ತದಾನ ಶಿಬಿರ ಹಾಗೂ ಭದ್ರಾವತಿ ಜಾನು ಮೆಲೋಡಿ ಆರ್ಕೆಸ್ಟ್ರಾ ಅವರ ಮನೋರಂಜನಾ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
ನಮ್ಮ ಇತಿಹಾಸಕಾರರು ಅಖಂಡ ಕರ್ನಾಟಕದ ಕನಸನ್ನು ಕಂಡವರು, ಕನ್ನಡ ಭಾಷೆ, ನೆಲ,ಜಲ. ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಳ್ಳಬೇಕಾದ ಅಗತ್ಯವಿದೆ. ತಾಯಿ ಭಾಷೆಗೆ ಧಕ್ಕೆ ಬಂದಾಗ ಯಾವ ತಾಯಿಯೂ ಕೊಳ್ಳುವುದಿಲ್ಲ, ತಾಯಿ ಭಾಷೆ ಮಾತೃಭಾಷೆ. ದಿನ ನಿತ್ಯದ ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ಕನ್ನಡ, ಕನ್ನಡತನ, ಕನ್ನಡಿಗರು ಸ್ವಾಭಿಮಾನಿಗಳಾಗಿ ಬದುಕಲು ಸಾಧ್ಯವಾಗುವುದು ಎಂದರು.
ಕನ್ನಡತನ, ಉಳಿಸಿಕೊಂಡು, ಇತರೆ ಭಾಷೆಗಳನ್ನು ಪ್ರೀತಿಸಬೇಕು. ಕಡ್ಡಾಯವಾಗಿ ಪ್ರಾಥಮಿಕ ಶಿಕ್ಷಣವನ್ನು ಮಾತೃಭಾಷೆಯಲ್ಲಿ ಹೊಂದಬೇಕು ಇದರಿಂದ ಎಲ್ಲ ಭಾಷೆಗಳಲ್ಲಿ, ಪ್ರಬುದ್ಧತೆಯನ್ನು ಸಾಧಿಸಲು ಸಾಧ್ಯವಾಗುವುದು ಎಂದು ಅನುಷಾ ಸಾರ್ವಜನಿಕರಿಗೆ ಕರೆ ನೀಡಿದರು. ಸಿದ್ಧತೆ,ಬದ್ಧತೆ ಮತ್ತು ಸಾವಿರಾರು ವರ್ಷಗಳ ಭವ್ಯ ಇತಿಹಾಸ ಹೊಂದಿರುವ, ಕನ್ನಡ ಸಂಸ್ಕೃತಿಯ ಬಗ್ಗೆ, ಬಹು ಪ್ರಬುದ್ಧತೆಯೊಂದಿಗೆ ವಿಶ್ಲೇಷಿಸಿ ಕನ್ನಡ ಭಾಷೆ ನೆಲ ಜಲ ಜಾಗೃತಿ, ಕುರಿತು ಮಾತನಾಡಿ ಸಾರ್ವಜನಿಕರ ಗಮನ ಸೆಳೆದರು. ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ, ಜೆಡಿಎಸ್ ಯುವ ಮುಖಂಡ ಮಂಜುನಾಥ ಗೌಡ ಶಿವಣ್ಣನವರ್ ಅವರು, ಕರ್ನಾಟಕದ ಏಕೀಕರಣಕ್ಕಾಗಿ ಅಂದು ಸಾವಿರಾರು, ಕವಿಗಳು, ಸಾಹಿತಿಗಳು ಕಲಾವಿದರು ತಮ್ಮದೇ ಆದ ರೀತಿಯಲ್ಲಿ ಹೋರಾಟ ಮಾಡಿ ಅಖಂಡ ಕರ್ನಾ ಟಕವನ್ನು ಕಟ್ಟಿ ಬೆಳೆಸಿದ್ದಾರೆ, ಪ್ರಾದೇಶಿಕವಾರು ಅನೇಕ ಸಮಸ್ಯೆಗಳು ಕಾಣುತ್ತಿದ್ದೇವೆ. ಸರಕಾರಗಳು ಎಚ್ಚೆತ್ತುಕೊಂಡು ಸಮಗ್ರ ಕನರ್ಾಟಕದ ಅಭಿವೃದ್ಧಿಗಾಗಿ ವಿಶೇಷ ಕ್ರಿಯಾ ಯೋಜನೆಗಳನ್ನು ರೂಪಿಸುವುದರ ಮೂಲಕ ಸಮಾನತೆಯನ್ನು ಕಂಡುಕೊಳ್ಳಲು ಮುಂದಾಗಬೇಕು ಎಂದರು.
ಇನ್ನೋರ್ವ ಅತಿಥಿ, ನ್ಯಾಯವಾದಿ ರಂಗಭೂಮಿ ಕಲಾವಿದ ನಾಗರಾಜ ಕುಡುಪಲಿ ಅವರು ವೀರ ಮದಕರಿ ನಾಯಕನ ಪಾತ್ರದಲ್ಲಿ ಅಭಿನಯಿಸಿ, ನಾಡಿನ ಇತಿಹಾಸ ಕುರಿತು ಸಾಧ್ಯಂತವಾಗಿ ಮಾತನಾಡಿದರು. ಸೇವಾ ಅಂದರೆ ಸಂಸ್ಥೆಯ ಅಂದ ಮಕ್ಕಳು, ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿ, ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹೆಚ್. ಶಿವರಾಮೇಗೌಡರ ಕರವೇ ಜಿಲ್ಲಾಧ್ಯಕ್ಷ ಗಣೇಶ್ ಗೋಣಿಬಸಮ್ಮನವರ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಮುಖಂಡರಾದ ಮಂಜುನಾಥ ದುಗ್ಗತ್ತಿ, ರೇಣುಕಾ ಎಂ, ಪ್ರೇಮಾ ಕೆ. ನಾರಾಯಣಸ್ವಾಮಿ, ಗುರುರಾಜ್ ಗೂಜನೂರ್, ತಾಲೂಕ ಅಧ್ಯಕ್ಷ ಮಾರುತಿ ಮುಂಡರಗಿ, ಕಾರ್ಯದರ್ಶಿ ಉಜ್ಜಪ್ಪ ಕೆ.ಹೆಚ್., ಜಿಂಜಪ್ಪ ಆಡೂರ, ಸಿದ್ದಪ್ಪ ನಿಟ್ಟೂರು, ನಿಯಾಜ್, ಹನುಮಂತಪ್ಪ ದೊಡ್ಡಮನಿ, ಮಂಜುಳಾ ನಿಲ್ಲಿ, ಲಕ್ಷ್ಮಿ ಕಲಾಲ್, ಸೇರಿದಂತೆ ಮತ್ತಿತರ ಗಣ್ಯರು, ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಅಂದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಸತೀಶ್ ಯಾದವ್ ಸ್ವಾಗತಿಸಿದರು. ಕನ್ನಡ ಜಾಗೃತಿ ವೇದಿಕೆಯ ರಾಜ್ಯ ಮಹಿಳಾ ಮುಖಂಡೆ ಕವಿತಾ ಎಸ್. ಪೇಟೆಮಠ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಜಿ.ಬಿ. ಮಾಳಗುಡ್ಡಪ್ಪನವರ ನಿರೂಪಿಸಿ, ಕಾರ್ಯದರ್ಶಿ ಮಂಜುನಾಥ ಎ.ವಿ, ವಂದಿಸಿದರು. ನಂತರ ನಡೆದ ಭದ್ರಾವತಿ ಜಾನು ಮೆಲೋಡಿ ಆಕರ್ೆಸ್ಟ್ರಾ ಕಲಾವಿದರ, ನೃತ್ಯ ಸಂಗೀತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಸಾರ್ವಜನಿಕರ ಗಮನ ಸೆಳೆದವ