ರಾಣೆಬೆನ್ನೂರ

ಕನ್ನಡ ರಾಜ್ಯೋತ್ಸವ ಕನ್ನಡಿಗರ ಪಾಲಿನ ಅತ್ಯಂತ ಸಂಭ್ರಮ ಸಡಗರದ ದಿನವಾಗಿದೆ: ಆರ್‌.ಬಿ.ತೋಟಿಗೇರ

ಕನ್ನಡ ರಾಜ್ಯೋತ್ಸವ ಕನ್ನಡಿಗರ ಪಾಲಿನ ಅತ್ಯಂತ ಸಂಭ್ರಮ ಸಡಗರದ ದಿನವಾಗಿದೆ: ಆರ್‌.ಬಿ.ತೋಟಿಗೇರ

ಕನ್ನಡ ರಾಜ್ಯೋತ್ಸವ ಕನ್ನಡಿಗರ ಪಾಲಿನ ಅತ್ಯಂತ ಸಂಭ್ರಮ ಸಡಗರದ ದಿನವಾಗಿದೆ: ಆರ್‌.ಬಿ.ತೋಟಿಗೇರ 

ರಾಣಿಬೆನ್ನೂರ 03:  ಕನ್ನಡಿಗರ ಪಾಲಿನ ಅತ್ಯಂತ ಸಂಭ್ರಮ ಸಡಗರದ ಈ ದಿನವಾಗಿದೆ ಎಂದು ಸ್ಥಳೀಯ ಸಲಹಾ ಸಮಿತಿಯ ಉಪಾಧ್ಯಕ್ಷ ಆರ್‌.ಬಿ.ತೋಟಿಗೇರ ತಿಳಿಸಿದರು. 

     ತಾಲೂಕಿನ ಸುಣಕಲ್ಲಬಿದರಿ ಗ್ರಾಮದ ಶ್ರೀ ಸದ್ಗುರು ಶಿವಾನಂದ ಸಂಯುಕ್ತ ಪಪೂ ಕಾಲೇಜಿನಲ್ಲಿ 69ನೇ ಕನ್ನಡ ರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸ ಮಾತನಾಡಿದ ಅವರು,  ಕರುನಾಡು ಉದಯವಾದ ದಿನದ ಸಡಗರ ಹೆಮ್ಮೆ ಸ್ವಾಭಿಮಾನದ ಸಂಕೇತವೆ ನವೆಂಬರ್ ಒಂದರ ಕನ್ನಡ ರಾಜ್ಯೋತ್ಸವದ ಸಂಭ್ರಮ ಈ ಸಂಭ್ರಮ ನಾಡಿನ ಎಲ್ಲಾ ಕಡೆ ವೈಭವದಿಂದ ಆಚರಿಸಿ ತಾಯಿ ಭುವನೇಶ್ವರಿಗೆ ನಮಿಸಲಾಗುತ್ತದೆ ಎಂದರು.  

    ಉಪನ್ಯಾಸಕ ಹೆಚ್‌.ಶಿವಾನಂದ ಮಾತನಾಡಿ, ಕರ್ನಾಟಕ ತನ್ನದೆಯಾದ ಶ್ರೀಮಂತ ಪರಂಪರೆ, ಸಂಸ್ಕೃತಿ ಇತಿಹಾಸ ಹೊಂದಿರುವ ಪವನಭೂಮಿ ಕಲೆ ಸಾಹಿತ್ಯಕ್ಕೆ ತವರೂರು ಕನ್ನಡ ಬರೆ ಭಾಷೆಯಲ್ಲ ಅದು ನಮ್ಮಲ್ಲರ ಉಸಿರಾಗಬೇಕು. ಈ ದಿನ ಸಂತೋಷದಾಯಕವಾದ ಸಮೃದ್ಧ ಇತಿಹಾಸ ಭವ್ಯ ಪರಂಪರೆ ಸಂಸ್ಕೃತಿ ಹೊಂದಿರುವ ಪವನಭೂಮಿ ಕರುನಾಡು. ಈ ನೆಲೆದಲ್ಲಿ ಜನ್ಮವೆತ್ತಿದ ನಾವೆ ಪುಣ್ಯವಂತರು ಎಂದರು.  

   ಶಿಕ್ಷಕರಾದ. ರವಿ.ಕೆ.ಎಸ್‌. ಪ್ರಕಾಶ.ಸಿ. ರೂಪಾ.ಎಂ. ಕುಮಾರ ಆರ್‌. ಪ್ರವೀಣ್‌ಕುಮಾರ್, ಮಕಂದರ್‌.ಎಸ್‌.ಎಂ, ಜಗದೀಶ ಕೊರವರ ಮತ್ತಿತರರು ಇದ್ದರು.  


ಫೋಟೊ:3ಆರ್‌ಎನ್‌ಆರ್07ರಾಣಿಬೆನ್ನೂರ: ತಾಲೂಕಿನ ಸುಣಕಲ್ಲಬಿದರಿ ಗ್ರಾಮದ ಶ್ರೀ ಸದ್ಗುರು ಶಿವಾನಂದ ಸಂಯುಕ್ತ ಪಪೂ ಕಾಲೇಜಿನಲ್ಲಿ 69ನೇ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. 


ಸುದ್ದಿ ಓದಿ