ರಾಣೆಬೆನ್ನೂರ

ಖನ್ನೂರ ವಿದ್ಯಾನಿಕೇತನ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ

ಖನ್ನೂರ ವಿದ್ಯಾನಿಕೇತನ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ

ರಾಣೆಬೆನ್ನೂರು 3 ನಾಡಿನ ಸಂಸ್ಕೃತಿಗೆ ಮತ್ತು ಇಲ್ಲಿನ ಕಲೆ ಸಾಹಿತ್ಯ ಸಂಗೀತ ನೃತ್ಯ ನಾಟಕ ಕಲೆಗಳು ಸಾಂಸ್ಕೃತಿಕ ಪರಂಪರೆ ಹೊಂದಿವೆ ಇದರಿಂದಲೇ ಕನ್ನಡದ ಸಂಸ್ಕೃತಿಗೆ ಬಹುದೊಡ್ಡ ಇತಿಹಾಸವಿದೆ ಎಂದು ಶಿಕ್ಷಣ ಪ್ರೇಮಿ ಎಂ.ಎಂ.ಖನ್ನೂರ ಹೇಳಿದರು. 

ಮಂಗಳವಾರ ಖನ್ನೂರ್ ವಿದ್ಯಾನಿಕೇತನ ಹೈ ಸ್ಕೂಲ್ ಆವರಣದಲ್ಲಿ ನಡೆದ 67ನೇ ಕನ್ನಡ ರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ವಿದ್ಯಾರ್ಥಿಗಳು ನಾಡಿನ ಜನಪದ ಸಾಹಿತ್ಯ, ಸಂಗೀತ  ಮತ್ತು ಕೃತಿಯನ್ನು ಉಳಿಸಿ ಬೆಳೆಸಬೇಕಾದರೆ, ಶಿಕ್ಷಣಕ್ಕೆ ಪೂರಕವಾಗಿ, ಪಟ್ಟೆತರ  ಚಟುವಟಿಕೆಯಲ್ಲಿ, ಅಳವಡಿಸಿಕೊಂಡು  ವ್ಯಕ್ತಿತ್ವವನ್ನು ನಿರ್ಮಿಸಿಕೊಳ್ಳಬೇಕಾದ ಇಂದಿನ ಬಹು ಅಗತ್ಯವಿದೆ ಎಂದರು. 

ಚೇರ್ಮನ್ ಡಾ.ಪ್ರವೀಣ್ ಖನ್ನೂರ್ ಅವರು ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಉಪಾಧ್ಯಕ್ಷ ಸುಲೋಚನಾ ಖನ್ನೂರ್, ವ್ಯವಸ್ಥಾಪಕ  ಡಾ. ಶೈಲ ಶ್ರೀ ಖನ್ನೂರ್, ಪ್ರಾಂಶುಪಾಲೆ ಸಮೀರಾ ಫರ್ನಾಂಡಿಸ್, ಕಾಲೇಜು ಪ್ರಾಂಶುಪಾಲರು. ಸೇರಿದಂತೆ ಉಪನ್ಯಾಸಕರು, ಅಧ್ಯಾಪಕರು, ಶಿಕ್ಷಕರು ಉಪಸ್ಥಿತರಿದ್ದರು. 

ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು, ಸಂಸ್ಕೃತಿ  ಹುಳ್ಳಿ ಸ್ವಾಗತಿಸಿದರು. ದೀಪಾ ಬಣಕಾರ್ ಪ್ರಾಸ್ತಾವಿಕ ಮಾತುಗಳಾಡಿದರು. ಚೇತನ್ ಕುಮಾರ್ ಕುಡುಕಲಿ  ಶ್ರೇಯಾ ಅಪ್ಪಾಜಿ ನಿರೂಪಿಸಿ, ಲಕ್ಷ್ಮಿ ಆಡೂರ ವಂದಿಸಿದರು. ನಂತರ ನಡೆದ ಶಾಲೆಯ ನೂರಾರು ಮಕ್ಕಳ ವೈವಿಧ್ಯಮಯ ನಾಡು ನುಡಿ ಸಂಸ್ಕೃತಿಯನ್ನು ಬಿಂಬಿಸುವ  ಸಾಂಸ್ಕೃತಿಕ ಕಾರ್ಯಕ್ರಮಗಳು ಸಾರ್ವಜನಿಕರ ಗಮನ ಸೆಳೆದವು 

ಸುದ್ದಿ ಓದಿ