ಧಾರವಾಡ - ಹುಬ್ಬಳ್ಳಿ

ಕನಕಾಪೂರ ರಾಷ್ಟ್ರೀಯ ಸಂಗೀತೋತ್ಸವದ ಸಮಾರೋಪ

ಕನಕಾಪೂರ ರಾಷ್ಟ್ರೀಯ ಸಂಗೀತೋತ್ಸವದ ಸಮಾರೋಪ

ಕನಕಾಪೂರ ರಾಷ್ಟ್ರೀಯ ಸಂಗೀತೋತ್ಸವದ ಸಮಾರೋಪ

ಧಾರವಾಡ 13: ಗಂಧರ್ವ ಲೋಕಕ್ಕೆ ತಮ್ಮದೇ ಆದ ವಿಶಿಷ್ಠ ಕೊಡುಗೆಯನ್ನು ನೀಡಿದ ಇಬ್ಬರು ಮಹನೀಯರನ್ನು ನಾವಿಂದು ಸ್ಮರಿಸುತ್ತಿದ್ದೇವೆ.  ಅವರಲ್ಲಿ ಪಂ.ಬೆಂಡಿಗೇರಿಯವರು ನಮ್ಮ ನಾಡಿನ ಬಹುದೊಡ್ಡ ತಬಲಾ ಕಲಾವಿದರು, ಅವರು ಧಾರವಾಡ ಆಕಾಶವಾಣಿಯ ಮೊಟ್ಟ ಮೊದಲ ‘ಎ’ ಗ್ರೇಡ್ ಕಲಾವಿದರಾಗಿದ್ದರು.  ಅವರಷ್ಟೇ ದೊಡ್ಡ ಎತ್ತರಕ್ಕೆ ಏರೀದವರು ಪಂ.ಕನಕಾಪೂರ ಅವರು.  ಪ್ರಪಂಚದಲ್ಲಿಯೇ ಅತ್ಯಂತ ತ್ವರಿತವಾಗಿ ಹಾರ್ಮೊನಿಯಂ ಕಲಾವಿದರಾಗಿದ್ದರು ಎಂದು ಹಿರಿಯ ನಟ, ನಿರ್ದೇಶಕ ಡಾ.ಶಶಿಧರ ನರೇಂದ್ರ ಅಭಿಪ್ರಾಯ ಪಟ್ಟರು.      

ನವೆಂಬರ್ 9 ಹಾಗೂ 10ರ ಎರಡು ದಿನಗಳ ಕಾಲ ನಗರದ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಕುಮಾರೇಶ್ವರ ಕಲ್ಚರಲ್ ಸೊಸೈಟಿಯು ಭಾರತ ಸರಕಾರದ ಸಂಸ್ಕೃತಿ ಮಂತ್ರಾಲಯದ ಆಶ್ರಯದಲ್ಲಿ ಪಂ. ವಸಂತ ಕನಕಾಪೂರ ಹಾಗೂ ಪಂ. ಬಸವರಾಜ ಬೆಂಡಿಗೇರಿ ಅವರ ಸ್ಮರಣೆಯಲ್ಲಿ ಏರಿ​‍್ಡಸಿದ್ದ ರಾಷ್ಟ್ರೀಯ ಸಂಗೀತೋತ್ಸವದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ನರೇಂದ್ರ ಅವರು ಹಂಸಭಾವಿ ಶ್ರೀನಿವಾಸ ಕುಲಕರ್ಣಿ ಅವರು ಈ ಭಾಗದ ಮೊದಲ ನೃತ್ಯ ಸಂಯೋಜಕರಾಗಿ ವಿದ್ವಾನ್ ವೆಂಕಟರಾಮನ ಉಪಾಧ್ಯೆ ಅವರ ಮೂಲಕ ಬಹುದೊಡ್ಡ ತಳಪಾಯವನ್ನು ಗಟ್ಟಿಯಾಗಿ ಹಾಕಿಕೊಟ್ಟಿದ್ದಾರೆ, ಆ ಪರಂಪರೆಯು ಇಂದು ಬೆಳೆದು ಹೆಮ್ಮೆರವಾಗಿದೆ ಎಂದರು.   

ಮುಖ್ಯ ಅತಿಥಿಗಳಾಗಿ ಡಾ.ದ.ರಾ.ಬೇಂದ್ರೆ ಟ್ರಸ್ಟ್‌ನ ಸದಸ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ ಸೊಲಗಿ, ಮೈಸೂರಿನ ಧ್ವನಿ ಫೌಂಡೇಶನ ಅಧ್ಯಕ್ಷೆ ಡಾ.ಶ್ವೇತಾ ಮಡಪ್ಪಾಡಿ ಭಾಗವಹಿಸಿದ್ದರು. ಸೊಸೈಟಿ ಅಧ್ಯಕ್ಷ ಮಲ್ಲಿಕಾರ್ಜುನ ಚಿಕ್ಕಮಠ ಅಧ್ಯಕ್ಷತೆ ವಹಿಸಿದ್ದರು.   

ನೃತ್ಯ ಪರಂಪರೆಯನ್ನು ಗೌರವಿಸುವ ನಿಟ್ಟಿನಲ್ಲಿ ಧಾರವಾಡದ ವಿದುಷಿ ರೋಹಿಣಿ ಇಮಾರತಿ, ವಿದುಷಿ ಪ್ರಮೋದಾ ಉಪಾಧ್ಯೆ, ವಿದುಷಿ ಡಾ.ಸೀಮಾ ಉಪಾಧ್ಯಾಯ ಹಾಗೂ ವಿದುಷಿ ಸವಿತಾ ಹೆಗಡೆ ಅವರನ್ನು ಸನ್ಮಾನಿಸಲಾಯಿತು.    

ಪಂ.ವಸಂತ ಕನಕಾಪೂರ ಅವರ ಹಾರ್ಮೊನಿಯಂ ಸೋಲೋ ಮ್ಯೂಜಿಕ್‌ಗೆ ಅವರ ಜೀವನಾಧಾರಿತ ನೃತ್ಯ ರೂಪಕವನ್ನು ಡಾ.ಸೀಮಾ ಉಪಾಧ್ಯಾಯ ಅವರ ಅಭಿನಯ ಸ್ಕೂಲ್ ಆಫ್ ಡಾನ್ಸ್‌ನ ಕಲಾವಿದರ ಪ್ರದರ್ಶನವು ಅತ್ಯಂತ ಆಕರ್ಷಕವಾಗಿತ್ತು.   

ನೃತ್ಯೋತ್ಸವದಲ್ಲಿ ಶ್ರೀ ಗಣೇಶ ನೃತ್ಯ ಶಾಲೆ, ಧಾರವಾಡ, ಉಪಾಧ್ಯೆ ನೃತ್ಯ ವಿಹಾರ, ಧಾರವಾಡ, ಭರತ ನೃತ್ಯ ಅಕಾಡೆಮಿ, ಧಾರವಾಡ ಅಭಿನಯ ಸ್ಕೂಲ್ ಆಫ್ ಡಾನ್ಸ್‌, ಹುಬ್ಬಳ್ಳಿ ಹಾಗೂ ಕಲಾರ​‍್ಣ ಟ್ರಸ್ಟ್‌ನ ಉದಯೋನ್ಮುಖ ಕಲಾವಿದರು ನೃತ್ಯ ಪ್ರದರ್ಶಿಸಿದರು.   

ರವಿ ಕುಲಕರ್ಣಿ ನಿರೂಪಿಸಿದರು. ಸಂಯೋಜಕ ಪ್ರಕಾಶ ಬಾಳಿಕಾಯಿ ಸ್ವಾಗತಿಸಿದರು.   ಡಾ.ಎ.ಎಲ್‌.ದೇಸಾಯಿ ವಂದಿಸಿದರು.   

ಗಣ್ಯರಾದ ಎಂ.ಜಿ. ಸಿಂದಗಿ, ರಾಜೇಶ ಕೋನರೆಡ್ಡಿ, ಬಸವರಾಜ ಡಾ. ವಿಶಾಲ ದೂದಿಹಳ್ಳಿ, ಲತಾ ಶಿವಾನಂದ, ಡಾ.ಬಸವರಾಜ ಕಲೆಗಾರ, ಡಾ. ಗೋಪಿಕೃಷ್ಣ ಕೆ.ಜಿ, ಬಸವರಾಜ ಹೂಗಾರ, ಅನಿತಾ ಚಿಕ್ಕಮಠ ಮತ್ತಿತರರು ಇದ್ದರು. 


ಸುದ್ದಿ ಓದಿ