ಧಾರವಾಡ - ಹುಬ್ಬಳ್ಳಿ

ಕನಕದಾಸರು ಶ್ರೇಷ್ಠ ವಿಶ್ವದ ತತ್ವಜ್ಞಾನಿಗಳು: ಡಾ. ಬೆಳಗಲಿ

ಕನಕದಾಸರು ಶ್ರೇಷ್ಠ ವಿಶ್ವದ ತತ್ವಜ್ಞಾನಿಗಳು: ಡಾ. ಬೆಳಗಲಿ

ಕನಕದಾಸರು ಶ್ರೇಷ್ಠ ವಿಶ್ವದ ತತ್ವಜ್ಞಾನಿಗಳು: ಡಾ. ಬೆಳಗಲಿ 

ಹುಬ್ಬಳ್ಳಿ 19:  ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಆಶ್ರಯದಲ್ಲಿ ನಡೆದ ದಾಸವೇರಣ್ಣೆ ಭಕ್ತ ಕನಕದಾಸರ ಜಯಂತಿಯ ಆಚರಣೆಯ ಸಮಾರಂಭವನ್ನು ಉದ್ದೇಶಿ ಮಾತನಾಡಿದ ಕಾನೂನು ವಿಶ್ವವಿದ್ಯಾಲಯದ  ಸಿಂಡಿಕೇಟ್ ಸದಸ್ಯರಾದ ಡಾ ಎಚ್, ವಿ ,ಬೆಳಗಲಿ ಇವರು 15ನೇ ಶತಮಾನವನ್ನು ಮೌಲ್ಯಯುತಗೊಳಿಸಿದ ಮಾನವೀಯ ಮೌಲ್ಯಗಳನ್ನು ಧಾರ್ಮಿಕ ಸಹಿಷ್ಣುತೆಗಳನ್ನು ತಾತ್ವಿಕ ಮೌಲ್ಯಗಳನ್ನು ತಮ್ಮ ಕೀರ್ತನ ಮತ್ತು ಮಂಡಿಗೆಗಳ ಮೂಲಕ ದಾಸ ಸಾಹಿತ್ಯ ಹಾಗೂ ಕನ್ನಡ ಸಾಹಿತ್ಯದ ಮೆರಗನ್ನು ಹೆಚ್ಚಿಸಿರುವ ಭಕ್ತ ಕನಕದಾಸರು ಈ ವಿಶ್ವದ ಶ್ರೇಷ್ಠ ತತ್ವಜ್ಞಾನಿಗಳಾಗಿದ್ದಾರೆ ಎಂದು ತಿಳಿಸಿದರು. 

 ಕನಕದಾಸರ ಸಾಹಿತ್ಯವು ಕನಕನನ್ನ ಕೆಣಕಬೇಡ ಕೆಣಕಿ ತಿಣಕಬೇಡ ಎನ್ನುವ ರೀತಿಯಲ್ಲಿ ಶ್ರೇಷ್ಠ ಸಾಹಿತ್ಯವನ್ನು ನೀಡಿರುವ ಕೀರ್ತಿ ಭಕ್ತ ಕನಕದಾಸರದಾಗಿದೆ ಎಂದರು,  ಇನ್ನೋರ್ವಸಿಂಡಿಕೇಟ್ ಸದಸ್ಯರಾದ ಶ್ರೀ ಪರಾಂಡೆ ಅವರು ಕನಕದಾಸರು ಜೀವನ ಮೌಲ್ಲ್ಯಗಳನ್ನು ಧಾರ್ಮಿಕ ಕೀರ್ತನ ಮೂಲಕ ತಿಳಿಸಿ ದಾಸರಲ್ಲಿಯೇ ಶ್ರೇಷ್ಠರಾಗಿದ್ದಾರೆ ಎಂದರು.  ಕಾರ್ಯಕ್ರಮದಲ್ಲಿ ವಿವಿಧ ವಿಭಾಗದ ಮುಖ್ಯಸ್ಥರುಗಳಾದ ಡಾ, ಗೀರೀಶ್ ಗೌಡ ಪಾಟೀಲ್, ಡಾ. ಸುನಿಲ್ ಬಗಾಡೆ, ರಾಜೂರ ಮುಂತಾದವರು ಉಪಸ್ಥಿತರಿದ್ದರು. 


ಸುದ್ದಿ ಓದಿ