ಧಾರವಾಡ - ಹುಬ್ಬಳ್ಳಿ

ಸಮಸ್ಯೆಗಳಿಗೆ ಕನಕದಾಸರ ಕೀರ್ತನೆಗಳು ಅನ್ವಯಿಕವಾಗಿವೆ : ಡಾ. ಬಸವರಾಜ ಎಚ್ ನಾಗೂರ,

ಸಮಸ್ಯೆಗಳಿಗೆ ಕನಕದಾಸರ ಕೀರ್ತನೆಗಳು ಅನ್ವಯಿಕವಾಗಿವೆ :  ಡಾ. ಬಸವರಾಜ ಎಚ್ ನಾಗೂರ,

ಸಮಸ್ಯೆಗಳಿಗೆ ಕನಕದಾಸರ ಕೀರ್ತನೆಗಳು ಅನ್ವಯಿಕವಾಗಿವೆ :  ಡಾ. ಬಸವರಾಜ ಎಚ್ ನಾಗೂರ, 

ಧಾರವಾಡ 19 : ಕೃಷಿ ವಿಶ್ವವಿದ್ಯಾಲಯ, ಧಾರವಾಡದಲ್ಲಿ ದಾಸ ಶ್ರೇಷ್ಠ ಶ್ರೀ ಕನಕದಾಸರ 525 ನೇ ಜಯಂತಿ ಆಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಬಸವರಾಜ ಎಚ್ ನಾಗೂರ, ಪ್ರಾಧ್ಯಾಪಕರು, ಅರ್ಥಶಾಸ್ತ್ರ ವಿಭಾಗ, ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಇವರು ಸಮಕಾಲೀನ ಸಮಸ್ಯೆಗಳಿಗೆ ಕನಕದಾಸರ ಕೀರ್ತನೆಗಳು ಅನ್ವಯಿಕವಾಗಿವೆ ಎಂದರು. ಬೀರ​‍್ಪನಾಯಕ ಮತ್ತು ಬಚ್ಚಮ್ಮ ದಂಪತಿಗಳ ಮಗನಾಗಿ 1509 ರಲ್ಲಿ ಶಿಗ್ಗಾಂವ ತಾಲೂಕಿನ ಬಾಡ ಗ್ರಾಮದಲ್ಲಿ ಜನಿಸಿದ ತಿಮ್ಮಪ್ಪ ದಂಡನಾಯಕನಾಗಿ ಹಾಗೂ ಅಪಾರ ಸಂಪತ್ತು ಲಭಿಸಿದ್ದರಿಂದ ಕನಕನಾಗಿ ಪರಿವರ್ತನೆಯಾಗಿ ನಂತರ ಯುದ್ಧದಲ್ಲಿ ಪರಾಜಯ ಹೊಂದಿ, ವ್ಯಾಸತೀರ್ಥರ ಆಶ್ರಯಕ್ಕೆ ಬಂದು ದ್ವೈತ ಸಿದ್ದಾಂತ ಅನುಯಾಯಿಯಾಗಿ ಹಲವಾರು ಕೀರ್ತನೆಗಳನ್ನು ರಚಿಸಿ ಜನಸಮುದಾಯಕ್ಕೆ ತಿಳಿಸಿಹೇಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು. ಕನಕದಾಸರ ಬಹಳಷ್ಟು ಕೀರ್ತನೆಗಳು, ಒಗಟಿನ ಪದ್ಯಗಳು, ನಳಚರಿತ್ರೆ, ಮೋಹನ ತರಂಗಿಣಿ, ಹರಿಭಕ್ತಿ ಸಾರ, ಉಗಾಭೋಗಗಳ ರಚನೆ, ರಾಮಧ್ಯಾನ ಚರಿತೆ ಇತ್ಯಾದಿ ಕಾವ್ಯಗಳನ್ನು ರಚಿಸಿದ್ದಾರೆ. ಆಧ್ಯಾತ್ಮಿಕತೆ, ವೈಚಾರಿಕ ಪ್ರಜ್ಞೆ, ಭಕ್ತಿರಸ, ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಆಡಳಿತದಲ್ಲಿ ಅನುಭವ ಹೊಂದಿ ಆ ಅನುಭವವನ್ನು ದಾಸ ಸಾಹಿತ್ಯದ ಮೂಲಕ ಜನರಿಗೆ ತಿಳಿಯುವ ರೀತಿಯಲ್ಲಿ ಬರೆದು ಹಾಡಿದ ದಾಸ ಶ್ರೇಷ್ಠ ಕನಕದಾಸರು ಎಂದು ಹೇಳಿದರು. 

ಅಧ್ಯಕ್ಷತೆ ವಹಿಸಿದ್ದ ಕುಲಪತಿ ಡಾ. ಪಿ. ಎಲ್‌. ಪಾಟೀಲ ಇವರು ಮಾತನಾಡುತ್ತ ಮನುಕುಲದ ಒಳಿತಿಗಾಗಿ ಹೋರಾಡಿದ ಕಾವ್ಯ ಪ್ರಜ್ಞೆಯನ್ನು ಮೆರೆದ ದಾಸವರೇಣ್ಯರನ್ನು ಸ್ಮರಿಸುತ್ತ ಶ್ರೀಯುತ ಕೀರ್ತನೆಗಳು ಇಂದಿಗೂ ಸಕಾಲಿಕವಾಗಿವೆ ಎಂದರು. ಶ್ರೀ ವ್ಯಾಸತೀರ್ಥರ 250 ಹರಿದಾಸ ಸಾಹಿತಿಗಳಲ್ಲಿ ಶ್ರೀ ಕನಕರು ಅಗ್ರಗಣ್ಯರು ಅವುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಾರ್ಥಕತೆ ಮೆರೆಯಬೇಕೆಂದರು. ಕೊನೆಗೆ ಹೆಚ್ಚಿನ ಪ್ರಮಾಣದ ಶಿಕ್ಷಕರು, ವಿದ್ಯಾರ್ಥಿದಳು ಇಂಥಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಉಪಯೋಗ ಪಡೆಯಬೇಕೆಂದರು. 

ಆಡಳಿತಾಧಿಕಾರಿಗಳಾದ ಡಾ. ಎಂ. ವಿ. ಮಂಜುನಾಥರವರು ಸರ್ವರನ್ನೂ ಸ್ವಾಗಿತಿಸಿ ಅತಿಥಿಗನ್ನು ಪರಿಚಯಿಸಿ ಪ್ರಸ್ತಾವಣೆಯನ್ನು ಮಂಡಿಸಿದರು. ಡಾ. ಸರೋಜನಿ ಕರಕಣ್ಣವರ, ಡೀನ ವಿದ್ಯಾರ್ಥಿ ಕಲ್ಯಾಣ, ಕೃ.ವಿ.ವಿ.,ಧಾರವಾಡ ಇವರು ವಂದಿಸಿದರು. ಡಾ. ಗೀತಾ ತಮಗಾಳೆ ಕಾರ್ಯಕ್ರಮವನ್ನು ನಿರೂಪಿಸಿದರು. ವಿದ್ಯಾರ್ಥಿಗಳು, ವಿಶ್ವವಿದ್ಯಾಲಯದ ಎಲ್ಲ ಅಧಿಕಾರಿಗಳು, ಎಲ್ಲ ವಿಭಾಗದ ಮುಖ್ಯಸ್ಥರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಸಿಬ್ಭಂದಿ ವರ್ಗದವರು ಭಾಗವಹಿಸಿದರು. 


ಸುದ್ದಿ ಓದಿ