ಇಂಡಿ

ಸಾರ್ವಜನಿಕ ಆಸ್ಪತ್ರೆಗೆ ನ್ಯಾಯಾಧೀಶ ದೇವರಾಜು ಹೆಚ್.ಆರ್ ಧಿಡೀರ್ ಭೇಟಿ

ಸಾರ್ವಜನಿಕ ಆಸ್ಪತ್ರೆಗೆ ನ್ಯಾಯಾಧೀಶ ದೇವರಾಜು ಹೆಚ್.ಆರ್ ಧಿಡೀರ್ ಭೇಟಿ
ಇಂಡಿ ಪಟ್ಟಣದ ತಾಲೂಕಾ ಸಾರ್ವಜನಿಕ ಆಸ್ಪತ್ರೆಗೆ ತಾಲೂಕಾ ಜೆ.ಎಂ.ಎಫ್.ಸಿ ನ್ಯಾಯಾಲಯದ ದಿವಾಣಿ ನ್ಯಾಯಾಧೀಶ ಈಶ್ವರ ಎಸ್.ಎಮ್

ಇಂಡಿ: ಪಟ್ಟಣದ ತಾಲೂಕಾ ಸಾರ್ವಜನಿಕ ಆಸ್ಪತ್ರೆಗೆ ಶನಿವಾರರಂದು ತಾಲೂಕಾ ಜೆ.ಎಂ.ಎಫ್.ಸಿ ನ್ಯಾಯಾಲಯದ ದಿವಾಣಿ ನ್ಯಾಯಾಧೀಶ ಈಶ್ವರ ಎಸ್.ಎಮ್ರವರು, ಹೆಚ್ಚುವರಿ ದಿವಾಣಿ ನ್ಯಾಯಾಧೀಶ ದೇವರಾಜು ಹೆಚ್.ಆರ್ ರವರು ಧಿಡೀರ್ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆ ಆಲಿಸಿ ಕುಂದು ಕೊರತೆಗಳ ಬಗ್ಗೆ ಚರ್ಚಿಸಿದರು.

ಆಸ್ಪತ್ರೆಯ ರೋಗಿಗಳೊಂದಿಗೆ ಚರ್ಚಿಸಿ ಆಸ್ಪತ್ರೆಯ ಅವ್ಯವಸ್ಥೆ ಸರಿಪಡಿಸಲು ಮುಖ್ಯ ವೈದ್ಯಾಧಿಕಾರಿಗಳಿಗೆ ಸೂಚಿಸಿದರು.

ಆಸ್ಪತ್ರೆಯ ಪ್ರಯೋಗಾಲಯ, ಊಟದ ಕೋಣೆ, ವೈದ್ಯರ ಕೊಣೆ ಸೇರಿದಂತೆ ಆಸ್ಪತ್ರೆಯ ಆವರಣವನ್ನೂ ವೀಕ್ಷಿಸಿದರು.

ಮುಖ್ಯವೈದ್ಯಾಧಿಕಾರಿ ಡಾ. ಜಗದೀಶ ಬಿರಾದಾರ, ಡಾ. ರಾಜೇಶ್ ಕೋಳೆಕರ್,  ಡಾ. ಅಮಿತ್ ಕೋಳೆಕರ್, ಸಂತೋಶ ಹೂಗಾರ, ರವಿ ಹಾದಿಮನಿ, ರವಿ ಕೊಟ್ಟಲಗಿ, ಬಸವರಾಜ ಢವಳಗಿ, ಕೃಷ್ನಾ ಸಲಗೊಂಡ, ಸಂತೋಶ ನಾವಿ ಸೇರಿದಂತೆ ಇನ್ನಿತರರು ಇದ್ದರು.



ಸುದ್ದಿ ಓದಿ