ರಾಣೆಬೆನ್ನೂರ

ಶಿವಯೋಗಿಗಳವರ ಜಯಂತೋತ್ಸವ ವೀರಶೈವ ಲಿಂಗಾಯತ ಧರ್ಮ ಜಾತಿ ಸೂಚಕವಲ್ಲ : ಶ್ರೀಗಳು

ಶಿವಯೋಗಿಗಳವರ ಜಯಂತೋತ್ಸವ ವೀರಶೈವ ಲಿಂಗಾಯತ ಧರ್ಮ ಜಾತಿ ಸೂಚಕವಲ್ಲ : ಶ್ರೀಗಳು

ಶಿವಯೋಗಿಗಳವರ ಜಯಂತೋತ್ಸವ ವೀರಶೈವ ಲಿಂಗಾಯತ ಧರ್ಮ ಜಾತಿ ಸೂಚಕವಲ್ಲ : ಶ್ರೀಗಳು  

 ರಾಣೇಬೆನ್ನೂರು 11 : ವೀರಶೈವ ಲಿಂಗಾಯತ ಧರ್ಮದ  ನೆಲೆಗಟ್ಟು ಆದಿ ಜಗದ್ಗುರು ಶ್ರೀ ರೇಣುಕಾದಿ ಪಂಚಾಚಾರ್ಯರಿಂದ ಸ್ಥಾಪಿತಗೊಂಡು ಬಸವಾದಿ ಶಿವ ಶರಣರಿಂದ ಬೆಳಕನ್ನು ಕಂಡಿರುವಂತಹ ನಮ್ಮ ಧರ್ಮದ ಕೊಡುಗೆ ಕುಲ ಹದಿನೋರೊಂದು ಜಾತಿಯ ಮತ ಭೇದಗಳನ್ನು ಮರೆತು ಒಟ್ಟಾರೆ ಮಾನವ ಸಂಕುಲಕ್ಕೆ ಮಠ - ಪೀಠಗಳ ಅಡಿಯಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿಯೇ, ಆದಿಯಿಂದಲೂ ಧಾರ್ಮಿಕ ನೆಲಗಟ್ಟಿನ ಮೇಲೆ ಸಾಮಾಜಿಕ ಸ್ವಾಸ್ಥ ಬದುಕನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಗೌರವಾಧ್ಯಕ್ಷ ಶ್ರೀ ಷ.ಬ್ರ. ಓಂಕಾರ ಶಿವಾಚಾರ್ಯ ಮಹಾ ಸ್ವಾಮಿಗಳವರು ನುಡಿದರು. ಅವರು, ರವಿವಾರ ಇಲ್ಲಿನ ಶ್ರೀ ಆದಿಶಕ್ತಿ ದೇವಸ್ಥಾನದ ಸಮುದಾಯ ಭವನದಲ್ಲಿ, ತಾಲೂಕ ಘಟಕವು ಆಯೋಜಿಸಿದ್ದ, ಹಾನಗಲ್ಲ ಗುರು ಕುಮಾರ ಶಿವಯೋಗಿಗಳವರ,157 ಜಯಂತೋತ್ಸವ, ನೂತನ ಪದಾಧಿಕಾರಿಗಳ  ಸೇವಾ ದೀಕ್ಷಾ, ಸಾಧಕ ಗಣ್ಯರ, ಅಭಿನಂದನಾ ಸನ್ಮಾನ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.  ವೀರಶೈವ ಧರ್ಮ ಅಕ್ಷರ, ಅನ್ನ, ಆಶ್ರಯ ಮತ್ತು ಜ್ಞಾನ  ನೀಡುವುದರ ಮುಖಾಂತರ ಇಡೀ ಮನುಕುಲಕ್ಕೆ ಕಲ್ಯಾಣವನ್ನು ಬಯಸಿರುವ ಅತ್ಯಂತ ಶ್ರೇಷ್ಠ ಧರ್ಮವಾಗಿದೆ, ಎಂದು ವಿವರಿಸಿ ಮಾತನಾಡಿದ ಶ್ರೀಗಳು , ಇಡೀ ಮನುಕುಲಕ್ಕೆ ಒಳಿತನ್ನು ಬಯಸುತ್ತಾ, ಬಂದಿರುವಂತಹ ವೀರಶೈವ ಲಿಂಗಾಯತ ಧರ್ಮವನ್ನು ಕಡೆಗಣಿಸಿ, ವೀರಶೈವ ಲಿಂಗಾಯತರಿಗೆ ಓಬಿಸಿ  ಅಡಿಯಲ್ಲಿ ಅವಕಾಶವನ್ನು ಕಲ್ಪಿಸದೆ ಇರುವುದು ಖೇದಕರ ಸಂಗತಿ ಎಂದು ವಿಷಾದಿಸಿದರು. ಇಂದು ಸಮಾಜದ ಸಂಘಟನೆಯಾಗುವ ಬದಲು ಅಳಿವಿನಂಚಿನಲ್ಲಿರುವ ನಮ್ಮ ವೀರಶೈವ ಲಿಂಗಾಯತ ಸಂಸ್ಕಾರಗಳು, ಮತ್ತು ಲಾಂಛನಗಳು ಧರಿಸುವುದರ ಮುಖಾಂತರ ಸಂಸ್ಕಾರದಿಂದ ವಂಚಿತರಾಗಿರುವುದು ಬಹಳ ನಿರಾಶೆಯ ವಿಷಯ. ಈ ಕೂಡಲೇ ಶ್ರೇಷ್ಠ ಧರ್ಮದ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಸಮಾಜದ ಬಂಧುಗಳು ತಿರಸ್ಕರಿಸದೇ, ಪರಂಪರೆಯನ್ನು ಉಳಿಸಿ ಬೆಳೆಸಬೇಕು ಎಂದರು.ವೀರಶೈವ ಲಿಂಗಾಯತ ಧರ್ಮ ಜಾತಿ ಸೂಚಕವಲ್ಲ ಅದು ತತ್ವ ಸಿದ್ಧಾಂತ ಸೂಚಕವಾಗಿದೆ. ಸಂಸ್ಕಾರ ಮತ್ತು ಶಿಷ್ಟಾಚಾರವನ್ನು ಬಯಸಿ ಬಂದಿರುವಂತಹ, ಎಲ್ಲ ಮನುಕುಲಕ್ಕೆ ಆಸರೆಯನ್ನು ಕೊಟ್ಟಿದೆ. ಇಂತಹ ಪವಿತ್ರ ಶ್ರೇಷ್ಠ ಧರ್ಮದ ಸಂಸ್ಕಾರ ಸಂಸ್ಕೃತಿಯನ್ನು ತಿರಸ್ಕರಿಸುವುದು ಸರಿಯಲ್ಲ ರಾಜ್ಯ ಮತ್ತು ಕೇಂದ್ರ ಸರ್ಕಾರ ಕೂಡಲೇ ವೀರಶೈವ ಲಿಂಗಾಯತ ಸಮುದಾಯಕ್ಕೆ ಅವಕಾಶ ಕಲ್ಪಿಸಿಕೊಡಲು ಮುಂದಾಗಬೇಕು  ಎಂದರು.        

    ಜಂಗಮ ಸುಕ್ಷೇತ್ರ ಲಿಂಗ ನಾಯಕನಹಳ್ಳಿಯ, ಮ. ನಿ. ಪ್ರ. ಚನ್ನವೀರ ಮಹಾಸ್ವಾಮಿಗಳು  ಮಾತನಾಡಿ, ಸಮಾಜವನ್ನು ನಮ್ಮ ರಾಜಕಾರಣಿಗಳು, ಬುದ್ಧಿಜೀವಿಗಳು ತಮ್ಮ ಸ್ವಾರ್ಥಕ್ಕಾಗಿ  ಬಳಸಿಕೊಂಡು ಸಾಗಿದ್ದಾರೆ ಹೊರತು, ಸಮಾಜದ ಅಭಿವೃದ್ಧಿ ಮತ್ತು ಸಂಘಟನೆಗೆ ಯಾರು ಗಮನ ನೀಡುತ್ತಿಲ್ಲ ಇದು ಅತ್ಯಂತ ವಿಷಾಧಕರ ಸಂಗತಿಯಾಗಿದೆ ಎಂದರು. ಸಮಾಜ ಸಂಘಟನೆಗಾಗಿ ಅಂದೇ, ಹಾನಗಲ್ಲ ಕುಮಾರ ಶ್ರೀಗಳವರು  ಚಿಂತನೆ ನಡೆಸಿ, ಗ್ರಾಮೀಣ ಪ್ರದೇಶದ ಬಡ ಮಕ್ಕಳ, ಶಿಕ್ಷಣ, ಆಚಾರ, ವಿಚಾರ, ಸಂಸ್ಕೃತಿಯ  ರಕ್ಷಣೆಗಾಗಿ ತಮ್ಮನ್ನೇ ತಾವು ತೊಡಗಿಸಿಕೊಂಡು, ಸಮರಾ​‍್ಣ ಮನೋಭಾವದಲ್ಲಿ ಸೇವೆ ಸಲ್ಲಿಸಿದವರು. ಅವರ ಕನಸು ನನಸಾಗಬೇಕಾಗಿದೆ, ಅದಕ್ಕಾಗಿ ಭವಿಷ್ಯದ ಯುವ ಜನಾಂಗ ಮನೆ ಮನೆಗೆ ತೆರಳಿ ಸದಸ್ಯತ್ವ ಅಭಿಯಾನದ ಮೂಲಕ ಸಂಘಟನೆ ಮಾಡಲು ಮುಂದಾಗಬೇಕು ಎಂದು ಕರೆ ನೀಡಿದರು.  ದೊಡ್ಡಪೇಟೆ ವಿರಕ್ತ ಮಠದ ಮ. ನಿ. ಪ್ರ. ಗುರುಬಸವ ಸ್ವಾಮಿಗಳವರು, ಇಂದಿನ ಎಲ್ಲಾ  ಗುರು ಪರಂಪರೆಗೆ, ಶಿವ ಯೋಗ ಮಂದಿರ ಸಾಕ್ಷಿಯಾಗಿದೆ. ಇತಿಹಾಸ ಹೊಂದಿದ ಗುರು ಪರಂಪರೆಗೆ  ನಾವೆಲ್ಲರೂ, ಅವರ ಆಶಯಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ನಿರಂತರ ಪ್ರಯತ್ನಿಸಬೇಕಾಗಿದೆ. ಅಂದಾಗ ಮಾತ್ರ ಜಯಂತೋತ್ಸವ ಆಚರಣೆ ಮಾಡಿರುವುದಕ್ಕೆ ಅರ್ಥ ಬರಲಿದೆ ಎಂದರು.           ತಾಲೂಕ ಘಟಕದ ನೂತನ ಪದಾಧಿಕಾರಿಗಳಿಗೆ, ಅಧ್ಯಕ್ಷ ಮಹಾಂತೇಶ ಕೋರಿಶೆಟ್ಟರ ಅವರು, ಸೇವೆಗಾಗಿ ಪ್ರತಿಜ್ಞಾವಿಧಿ ಬೋಧಿಸಿ, ಶುಭ ಹಾರೈಸಿದರು.   ಅಧ್ಯಕ್ಷತೆ ವಹಿಸಿದ್ದ ನೂತನ ಅಧ್ಯಕ್ಷ, ನ್ಯಾಯವಾದಿ ಕೆ.ಎನ್‌. ಕೋರಧಾನ್ಯಮಠ ಅವರು, ಸಮಾಜ ಸಂಘಟನೆಗಾಗಿ ಹತ್ತು ಹಲವು ಕ್ರಿಯಾ ಯೋಜನೆಗಳನ್ನು  ರೂಪಿಸಲಾಗಿದೆ. ಯುವ ಜನಾಂಗದ ಜಾಗೃತಿ ಗಾಗಿ, ಸದಸ್ಯತ್ವ ಅಭಿಯಾನ ಯೋಜನೆ ಮಾಡಿದೆ. ಒಟ್ಟಾರೆ ಭವಿಷ್ಯದ ದಿನಗಳಲ್ಲಿ ಸಮಾಜದ ಅಭಿವೃದ್ಧಿ ಮತ್ತು ಸಂಘಟನೆಗಾಗಿ ನಿರಂತರ ಕ್ರಿಯಾಯೋಜನೆ  ಮೂಲಕ, ಸಾಗಬೇಕಾಗಿದೆ, ಎಲ್ಲರ ಸಹಕಾರ ತಮಗೆ ಬೇಕಾಗಿದೆ ಎಂದರು.  ನಿವೃತ್ತ ಉಪನ್ಯಾಸಕ ಪ್ರೊ, ಹೆಚ್‌.ಎ.ಭಿಕ್ಷಾವರ್ತಿಮಠ ಅವರು ಹಾನಗಲ್ಲ  ಕುಮಾರ ಶ್ರೀಗಳವರ ಜೀವನ, ಸಮಾಜ ಸಂಘಟನೆ, ಮತ್ತು ಸಾಧನೆ ಏನು? ಎತ್ತಾ? ಮುಂದೇನು?. ಸಮಾಜ ಮಾಡಬೇಕಾದ ಕರ್ತವ್ಯಗಳೇನು?. ವಿಷಯಗಳ ಕುರಿತು  ಉಪನ್ಯಾಸ ನೀಡಿದರು ಇದೇ ಸಂದರ್ಭದಲ್ಲಿ ಮಾಜಿ ಅಧ್ಯಕ್ಷರಾದ ಕೆ ಎಂ ಬಂದಮ್ಮನವರ,ವ್ಹಿ. ವಿ. ಹರಪನಹಳ್ಳಿ ಮೊದಲಾದವರನ್ನು ಸನ್ಮಾನಿಸಿ ಗೌರವಿಸಲಾಯಿತು.    ವೇದಿಕೆಯಲ್ಲಿ, ಕೋಶಾಧ್ಯಕ್ಷ ಮಲ್ಲೇಶಪ್ಪ ಅರಿಕೇರಿ, ಉಪಾಧ್ಯಕ್ಷ ಚನ್ನಬಸಪ್ಪ  ಕಲ್ಯಾಣಿ, ಗಾಯಿತ್ರಮ್ಮ ಕುರುವತ್ತಿ, ಕಾರ್ಯದರ್ಶಿ ಪರಮೇಶ ಯಡಿಯಾಪುರ, ನಗರ ಘಟಕ ಅಧ್ಯಕ್ಷ ವಿನಯ ಪಾಟೀಲ್, ಮಹಿಳಾ ಘಟಕದ ಅಧ್ಯಕ್ಷ ಸರೋಜಾ ಹುಲಿಹಳ್ಳಿ, ಪುಷ್ಪಾ ಬದಾಮಿ, ಕವಿತಾ ಕುರಗುಂದಮಠ, ಜಿಲ್ಲಾ ಉಪಾಧ್ಯಕ್ಷ ಶಂಕರಗೌಡ ಪಾಟೀಲ್, ಹಾನಗಲ್ ದೇಶಮುಖ, ಬ್ಯಾಡಗಿ ಅಂಕಲಕೋಟಿ, ಕೊಟ್ರೇಶಪ್ಪ ಎಮ್ಮಿ,ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಗಾಯತ್ರಮ್ಮ ಸಂಗಡಿಗರು  ಪ್ರಾರ್ಥಿಸಿದರು. ಪ್ರಕಾಶ ಗಚ್ಚಿನ ಮಠ ಸಂಗೀತ ಸೇವೆ ಸಲ್ಲಿಸಿದರು,ಪ್ರಭುಲಿಂಗಪ್ಪ ಹಲಗೇರಿ  ಸ್ವಾಗತಿಸಿ, ಚಂದ್ರಣ್ಣ ಸೊಪ್ಪಿನ ಪ್ರಾಸ್ತಾವಿಕವಾಗಿ ಮಾತನಾಡಿದರು. ಇಂದಿರಾ ಕೊಪ್ಪದ ಕಸ್ತೂರಮ್ಮ ಪಾಟೀಲ್ ನಿರೂಪಿಸಿ, ವಿನೋದ ಜಂಬಿಗಿ ವಂದಿಸಿದರು. 


ಸುದ್ದಿ ಓದಿ