ಜೆಎಸ್ಎಸ್. ಪಬ್ಲಿಕ್ ಶಾಲೆ : ಸತತ 9ನೇವರ್ಷ ಶೇ 100ರ ಫಲಿತಾಂಶ
ಹೂವಿನಹಡಗಲಿ : ಜೆಎಸ್ಎಸ್ ಮಹಾವಿದ್ಯಾಪೀಠ ಮೈಸೂರು ಇವರ ಆಶ್ರಯದಲ್ಲಿ ನಡೆಯುತ್ತಿರುವ ಜೆ.ಎಸ್.ಎಸ್. ಪಬ್ಲಿಕ್ ಶಾಲೆಯ ಸಿ.ಬಿ.ಎಸ್.ಇ. 10ನೇ ತರಗತಿಯ 2023ನೇ ಸಾಲಿನ ಫಲಿತಾಂಶವು ಶೇಕಡ 100ರಷ್ಟು ಪಡೆಯುವುದರ ಮೂಲಕ ನಿರಂತರ 9ನೇ ವರ್ಷವು ಶೇಕಡ 100 ಫಲಿತಾಂಶ ಲಭಿಸಿದೆ.
ಶೈಕ್ಷಣಿಕ ವರ್ಷ 2022-23ನೇ ಸಾಲಿನಲ್ಲಿ 10ನೇ ತರಗತಿಯಲ್ಲಿ ಒಟ್ಟು 39 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಹಾಜರಾಗಿದ್ದು, ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗುರುತ್ತಾರೆ. ಹಾಜರಾದ 39 ವಿದ್ಯಾರ್ಥಿಗಳ ಪೈಕಿ 20 ವಿದ್ಯಾರ್ಥಿಗಳು ಡಿಸ್ಟಿಂಕ್ಷನಲ್ಲಿ, 12 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಹಾಗೂ 07 ವಿದ್ಯಾರ್ಥಿಗಳು ದ್ವಿತೀಯ ದರ್ಜೆ ಯಲ್ಲಿ ಉತ್ತೀರ್ಣರಾಗಿದ್ದಾರೆ.
ಕುಮಾರಿ. ಸಹನಾ. ಎನ್.ಎಚ್ 93% ಅಂಕಗಳನ್ನುಗಳಿಸಿ ಶಾಲೆಗೆ ಪ್ರಥಮ ಸ್ಥಾನ, ಹೇಮಂತ್.ಸಿ 90% ಅಂಕಗಳಿಸಿ ದ್ವಿತೀಯ ಸ್ಥಾನ ಹಾಗೂ ಮೊಹಮ್ಮದ್ ಊರ್ವ ಎಪ್.ಜಿ ಹಾಗೂ ಅಭಿಷೇಕ್.ಹೆಚ್ ಶೇ.89% ಅಂಕಗಳನ್ನುಗಳಿಸಿ ತೃತೀಯ ಸ್ಥಾನ ಪಡೆಯುವುದರ ಮೂಲಕ ಶಾಲೆಗೆ ಕೀರ್ತಿತಂದಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಪಬ್ಲಿಕ್ ಶಾಲೆಯ ಆಡಳಿತ ಮಂಡಳಿ ಮತ್ತು ಪ್ರಾಚಾರ್ಯರಾದ ಎನ್.ಗುರುಸ್ವಾಮಿ, ಹಾಗೂ ಶಿಕ್ಷಕ ಮತ್ತು ಶಿಕ್ಷೇತರ ವೃಂದ ಹಾಗೂ ಪಾಲಕರು, ಶಿಕ್ಷಣ ಪ್ರೇಮಿಗಳು ಅಭಿನಂದನೆ ಸಲ್ಲಿಸಿದ್ದಾರೆ