ಜೆ.ಎಸ್.ಎಸ್ ಮಂಜುನಾಥೇಶ್ವರ ಸೆಂಟ್ರಲ್ ಶಾಲೆಗೆ ಸಮಗ್ರ ವೀರಾಗ್ರಣಿ ಪ್ರಶಸಿ
ಜೆ.ಎಸ್.ಎಸ್ ಮಂಜುನಾಥೇಶ್ವರ ಸೆಂಟ್ರಲ್ ಶಾಲೆಗೆ ಸಮಗ್ರ ವೀರಾಗ್ರಣಿ ಪ್ರಶಸಿ
ಧಾರವಾಡ 30: ಸ್ಟೇರ್ಸ ರಾಷ್ಟ್ರೀಯ ಕ್ರೀಡಾ ಪ್ರಚಾರ ಸಂಸ್ಥೆ ಅವರಿಂದ ಯುವ ರಾಜ್ಯ ಕ್ರೀಡಾಕೂಟವನ್ನು ಧಾರವಾಡದ ಆರ್.ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ ಅಕ್ಟೋಬರ 6 ಮತ್ತು 7ರಂದು ಆಯೋಜಿಸಲಾಗಿತ್ತು.
ಪಂದ್ಯಾವಳಿಯಲ್ಲಿ ಭಾಗವಹಿಸಿದ ಜೆ.ಎಸ್.ಎಸ್ ಮಂಜುನಾಥೇಶ್ವರ ಸೆಂಟ್ರಲ್ ಶಾಲೆಯ ಮಕ್ಕಳು ರನ್ನಿಂಗ್, ಲಾಂಗ್ ಜಂಪ್, ಡಿಸ್ಕಸ್ ಥ್ರೋ ಮುಂತಾದ ಕ್ರೀಡೆಗಳಲ್ಲಿ ವಿಜೇತರಾಗಿ 186 ಅಂಕ ಗಳಿಸುವ ಮೂಲಕ ಸಮಗ್ರ ವೀರಾಗ್ರಣಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಒಟ್ಟು 31 ಬಂಗಾರದ ಪದಕ, 15 ಬೆಳ್ಳಿ ಪದಕ ಹಾಗೂ 8 ರಜತ ಪದಕಗಳನ್ನು ಗಳಿಸಿರುತ್ತಾರೆ.
ಸಿ.ಬಿ.ಎಸ್.ಸಿ-8ನೇ ಕ್ಲಸ್ಟರಿನ ರಾಜ್ಯಮಟ್ಟದ ಅಥ್ಲೆಟಿಕ್ ಪಂದ್ಯಾವಳಿಯಲ್ಲಿ ಭಾಗವಹಿಸಿದ ಜೆ.ಎಸ್.ಎಸ್ ಶ್ರೀಮಂಜುನಾಥೇಶ್ವರ ಸೆಂಟ್ರಲ್ ಶಾಲೆಯ ಮಕ್ಕಳು 4*100 ಮೀಟರ್ ರಿಲೇ ಪಂದ್ಯಾವಳಿಯಲ್ಲಿ 2ನೇ ಸ್ಥಾನಗಳಿಸುವ ಮೂಲಕ ಬೆಳ್ಳಿ ಪದಕಗಳಿಸಿರುತ್ತಾರೆ.
ಪದಕಗಳಿಸಿದ ಎಲ್ಲಾ ಮಕ್ಕಳು, ತಂಡದ ತರಬೇತುದಾರ ಮೀನಾಕ್ಷಿ ಹೊಸಮನಿ ಹಾಗೂ ಗೀರೀಶ್ ಹಾವನೂರು ಇವರನ್ನು ಜೆ.ಎಸ್.ಎಸ್ ಆಡಳಿತ ಮಂಡಳಿಯ ಕಾರ್ಯದರ್ಶಿ ಡಾ. ಅಜಿತ್ ಪ್ರಸಾದ, ಜೆ.ಎಸ್.ಎಸ್. ಐ.ಟಿ.ಐ ಕಾಲೇಜಿನ ಪ್ರಾುಂಶುಪಾಲ ಮಹಾವೀರ ಉಪಾಧ್ಯಾಯ ಹಾಗೂ ಶಾಲೆಯ ಪ್ರಾಂಶುಪಾಲ ಸಾಧನಾ ಎಸ್ ಇವರು ತಂಡಕ್ಕೆ ಅಭಿನಂದಿಸಿದ್ದಾರೆೆ.
ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ 5ನೇ ಸ್ಥಾನ
ಜೆ.ಎಸ್.ಎಸ್ ಮಂಜುನಾಥೇಶ್ವರ ಸೆಂಟ್ರಲ್ ಶಾಲೆಯ ಗ-17 ಬಾಲಕಿಯರ ಕಬಡ್ಡಿ ತಂಡವು ದಾವಣಗೆರೆಯ ಬಾಪೂಜಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಸಿ.ಬಿ.ಎಸ್.ಸಿ ಕ್ಲಸ್ಟರ್ 8ರ ಕಬಡ್ಡಿ ಚಾಂಪಿಯನ್ಶಿಪ್ ಪಂದ್ಯಾವಳಿಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನಗಳಿಸಿ ಹರಿಯಾಣದ ಗ್ರೀನ್ ಲ್ಯಾಂಡ್ ಪಬ್ಲಿಕ್ ಶಾಲೆಯಲ್ಲಿ ಅಕ್ಟೋಬರ್ 17 ರಿಂದ 20ನೇ ತಾರೀಕಿನವರೆಗೆ ನಡೆದ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ 5ನೇ ಸ್ಥಾನವನ್ನು ಗಳಿಸಿರುತ್ತಾರೆ.
ತಂಡದ ಸದಸ್ಯರಾದ ಸಿಂಚನ ಹಿರೇಮಠ (ತಂಡದ ನಾಯಕಿ), ನಿಶಿತಾ ಕವಲೂರು, ಸೃಷ್ಟಿ ಬೇವಿನಕಟ್ಟಿ, ಪ್ರತೀಕ್ಷಾ ಅನಗೌಡರ್, ಪ್ರಾಪ್ತಿ ಜೈನ್, ಸಾಕ್ಷಿ ತುಡ್ಡಿಗೇರಿ, ಶಿವಾನಿ ಮಾಸಾಳ, ಶ್ರೇಯಾ ಶೀಲನ್ನವರ್, ಸಾನ್ವಿ ಕೋಟೂರ್, ಪ್ರತೀಕ್ಷಾ ಟಿಕಾರೆ, ಅಮೃತ ಮೈಟಿ, ವೈಷ್ಣವಿ ಪಾಟೀಲ್, ತಂಡದ ತರಬೇತುದಾರರಾದ ಮೀನಾಕ್ಷಿ ಹೊಸಮನಿ ಹಾಗೂ ಗೀರೀಶ್ ಹಾವನೂರು ಇವರನ್ನು ಜೆ.ಎಸ್.ಎಸ್ ಆಡಳಿತ ಮಂಡಳಿಯ ಕಾರ್ಯದರ್ಶಿ ಡಾ. ಅಜಿತ್ ಪ್ರಸಾದ ಜೆ.ಎಸ್.ಎಸ್. ಐ.ಟಿ.ಐ ಕಾಲೇಜಿನ ಪ್ರಾುಂಶುಪಾಲ ಮಹಾವೀರ ಉಪಾಧ್ಯಾಯ ಹಾಗೂ ಶಾಲೆಯ ಪ್ರಾಂಶುಪಾಲ ಸಾಧನಾ ಎಸ್ ಇವರು ತಂಡಕ್ಕೆ ಅಭಿನಂದಿಸಿದ್ದಾರೆೆ.