ಜಿಲ್ಲಾಡಳಿತ ಉಪಚುನಾವಣೆಗೆ ಕೊಟ್ಟಷ್ಟು ಆಧ್ಯತೆಯನ್ನು ರೈತಾಪಿ ವರ್ಗಕ್ಕೆ ಕೊಡದೆ ಇರುವುದು ವಿಷಾದನೀಯ, ಬೆಳೆವಿಮೆ ಬಾಕಿ ಹಣಕ್ಕೆ ಒತ್ತಾಯ
ಜಿಲ್ಲಾಡಳಿತ ಉಪಚುನಾವಣೆಗೆ ಕೊಟ್ಟಷ್ಟು ಆಧ್ಯತೆಯನ್ನು ರೈತಾಪಿ ವರ್ಗಕ್ಕೆ ಕೊಡದೆ ಇರುವುದು ವಿಷಾದನೀಯ, ಬೆಳೆವಿಮೆ ಬಾಕಿ ಹಣಕ್ಕೆ ಒತ್ತಾಯ
ರಾಣೇಬೆನ್ನೂರು 11: ಜಿಲ್ಲಾಡಳಿತ ಶಿಗ್ಗಾಂವ-ಸವಣೂರ ವಿಧಾನಸಭೆಯ ಉಪ ಚುನಾವಣೆಯಲ್ಲಿಯೇ ಮಗ್ನವಾಗಿದ್ದು ಈ ಚುನಾವಣೆಗೆ ಪೂರ್ಣ ಸಮಯವನ್ನು ನೀಡಿ ಅತೀ ಹೆಚ್ಚಿನ ಆದ್ಯತೆ ನೀಡಿ ರೈತಾಪಿ ವರ್ಗವನ್ನು ಸಂಪೂರ್ಣವಾಗಿ ಕಡೆಗಣಿಸಿದೆ ಎಂದು ರೈತ ಮುಖಂಡ ರವೀಂದ್ರಗೌಡ ಎಫ್. ಪಾಟೀಲ ಆರೋಪಿಸಿದರು.
ಅವರು ಇಂದು ಬೆಳೆವಿಮೆ ಬಾಕಿ ಹಣಕ್ಕೆ ಒತ್ತಾಯಿಸಿ ರಿಲಾಯನ್ಸ್ ಇನ್ಸೂರನ್ಸ್ ಕಂಪನಿಯ ವಿರುದ್ಧವಾಗಿ ಜಿಲ್ಲೆಯಾದ್ಯಂತ ಹಮ್ಮಿಕೊಂಡಿರುವ ಸರದಿ ಗ್ರಾಮ ಪಂಚಾಯಿತಿಗೆ ಬೀಗ ಜಡಿಯುವ ಕಾರ್ಯಕ್ರಮದ ಅಂಗವಾಗಿ ಅಂತರವಳ್ಳಿ ಗ್ರಾಮ ಪಂಚಾಯಿತಿಗೆ ಬೀಗ ಜಡಿದು ಮುತ್ತಿಗೆ ಹಾಕಿ ಪ್ರತಿಭಟನೆ ಮೂಲಕ ಮನವಿ ಕೊಡುವ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದ ಅವರು ರೈತರ ಮೇಲಿನ ಜಿಲ್ಲಾಡಳಿತದ ಈ ರೀತಿಯ ನಿರ್ಲಕ್ಷ್ಯ ಸಲ್ಲದು ಇದೇ ರೀತಿ ರೈತರನ್ನು ಕಡೆಗಣಿಸುತ್ತಾ ಹೋದರೆ ಮುಂದಿನ ದಿನಗಳಲ್ಲಿ ಬಹುದೊಡ್ಡ ಪರಿಣಾಮವನ್ನು ಜಿಲ್ಲಾಡಳಿತ ಎದುರಿಸಬೇಕಾಗುತ್ತದೆ ಎಂದ ಪಾಟೀಲರು, ಬೆಳೆವಿಮೆ ಬಾಕಿ ಹಣಕ್ಕಾಗಿ ಈ ರೀತಿ ಪ್ರತಿಭಟನೆ ದಿನದಿಂದ ದಿನಕ್ಕೆ ಕಾವು ಪಡೆಯುತ್ತಿದ್ದರೂ ಜಿಲ್ಲಾಡಳಿತ ನಮಗೆ ಸಂಬಂಧವೇ ಇಲ್ಲಾ ಎನ್ನುವಂತೆ ವರ್ತಿಸುತ್ತಿರುವುದು ಅದು ಅವರ ಕರ್ತವ್ಯಕ್ಕೆ ಲೋಪ ಅಷ್ಟೇ ಅಲ್ಲಾ ರೈತಾಪಿ ವರ್ಗಕ್ಕೆ ಬಗೆದ ದ್ರೋಹವಾಗಿದೆ ಎಂದರು.
ಇದಕ್ಕೂ ಮೊದಲು ಅಂತರವಳ್ಳಿ ಗ್ರಾಮದ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಸಭೆ ಸೇರಿದ ಅಂತರವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಆಲದಕಟ್ಟೆ, ನಂದಿಹಳ್ಳಿ ಗ್ರಾಮಗಳ ರೈತರು ಈ ಬಗ್ಗೆ ಸಭೆ ನಡೆಸಿ ಅಲ್ಲಿಂದ ಪ್ರತಿಭಟನಾ ಮೆರವಣಿಗೆಯ ಮೂಲಕ ಗ್ರಾಮ ಪಂಚಾಯಿತಿ ಕಛೇರಿಗೆ ತೆರಳಿ ಅಲ್ಲಿ ರೈತ ಮುಖಂಡರನೇಕರು ಮಾತನಾಡಿದ ಮೇಲೆ ಸ್ಥಳಕ್ಕೆ ಹಾಜರಿದ್ದ ಕಂದಾಯ ಇಲಾಖೆಯ ಎಸ್.ಎನ್. ಪ್ರಭಾಕರ, ಕೃಷಿ ಇಲಾಖೆಯ ಭಾಷಾಸಾಬ ಅಧಿಕಾರಿಗಳ ಮುಖಾಂತರ ಮನವಿ ನೀಡಿ ನಂತರ ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿ ಕಛೇರಿಗೆ ಬೀಗ ಜಡಿದ ರೈತರು ರಿಲಾಯನ್ಸ್ ಇನ್ಸೂರನ್ಸ್ ಕಂಪನಿಗೆ ಜಿಲ್ಲಾಡಳಿತಕ್ಕೆ ದಿಕ್ಕಾರ ಹೇಳಿದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ನಾಗಪ್ಪ ಕರಡಿ, ಚಂದ್ರ್ಪ ಕೂಸಗೂರ, ನಾಗನಗೌಡ ಜೀವನಗೌಡ್ರ, ಶಂಕ್ರಗೌಡ ಗೊಂಬಿಗೌಡ್ರ, ಕುಬೇರ್ಪ ಹೂಲಿಹಳ್ಳಿ, ವೀರನಗೌಡ ಮತ್ತೂರು, ಉಜ್ಜನಗೌಡ ಮುದಿಗೌಡ್ರ, ನಾಗರಾಜ ಕುರುಬರ, ಬಸವರಾಜ ನಿಟ್ಟೂರು, ಮಲ್ಲೇಶ ಕುರುಬರ, ಚಂದ್ರ್ಪ ಏಡಗೋಡಿ, ಇಬ್ರಾಹಿಂಸಾಬ ಕಿಲ್ಲೇದಾರ, ಮೌನೇಶ ಕರೂರು, ಕೃಷ್ಣಪ್ಪ ದೇಶಿ, ಪಾಂಡಪ್ಪ ಸುಂಕಾಪುರ, ಪಿ.ಎನ್. ಓದೇಗೌಡ್ರ, ಚಂದ್ರ್ಪ ಎಡಗೋಡಿ, ರಾಜು ಜೀವನಗೌಡ್ರ, ಬಸವರಾಜ ಮುಗದೂರ, ಮಹೇಶ್ವರ್ಪ ಮುಗನೂರ, ಯಂಕಪ್ಪ ಹೊಸಳ್ಳಿ, ಯಂಕಪ್ಪ ತಳವಾರ, ವೆಂಕಪ್ಪ ನಾಗರಡ್ಡಿ, ಹನುಮಂತಗೌಡ ಓಲೇಕಾರ, ಮಲಕಪ್ಪ ಲಿಂಗದಹಳ್ಳಿ ಮುಂತಾದ 500 ಕ್ಕೂ ಹೆಚ್ಚು ರೈತರು ಪಾಲ್ಗೊಂಡಿದ್ದರು.