ಕ್ಷೇತ್ರದ ಕಾಂಗ್ರೆಸ್ ಸೋಲಿನ ಆತ್ಮಾವಲೋಕನ ಸಭೆ
ಲೋಕದರ್ಶನ ವರದಿ
ಶಿಗ್ಗಾವಿ 19: ಕ್ಷೇತ್ರದಲ್ಲಿ ಕಾಂಗ್ರೆಸ್ ಸೋಲಿಗೆ ಕಾರಣರಾದವರನ್ನ ನಿದ್ರರ್ಾಕ್ಷಿಣ್ಯವಾಗಿ ಪಕ್ಷದಿಂದ ಕಿತ್ತೊಗೆಯಬೇಕು ಮತ್ತು ಮುಂಬರುವ ದಿನಗಳಲ್ಲಿ ಪಕ್ಷಕ್ಕೆ ನಿಷ್ಠೆಯಿಂದ ದುಡಿಯವಂತರಿಗೆ ಹೆಚ್ಚಿನ ಸ್ಥಾನಮಾನ ನೀಡಬೇಕು ಎಂದು ಕಾಂಗ್ರೆಸ್ ಪಕ್ಷದ ಚುನಾವಣೆಯ ಆತ್ಮಾವಲೋಕನ ಸಭೆಯಲ್ಲಿ ಮುಖಂಡರು ಮತ್ತು ಕಾರ್ಯಕರ್ತರು ಒಮ್ಮತದಿಂದ ನಿರ್ಣಯ ತೆಗೆದುಕೊಂಡರು.
ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಕ್ಷೇತ್ರದ ಕಾಂಗ್ರೆಸ್ನ ಸೋಲಿಗೆ ಆತ್ಮಾವಲೋಕನ ಸಭೆಯಲ್ಲಿ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಯಾಸೀರ್ಖಾನ್ ಪಠಾಣ್ ಮಾತನಾಡಿ ಕೊನೆಯ ಗಳಿಗೆಯಲ್ಲಿ ಟಿಕೆಟ್ ಸಿಕ್ಕ ಪರಿಣಾಮ ಹೆೆಚ್ಚಿನ ಮುಖಂಡರನ್ನು ಹಾಗೂ ಕಾರ್ಯಕರ್ತರನ್ನು ಸಂಪರ್ಕ ಮಾಡಲಾಗಲಿಲ್ಲ, ಪಕ್ಷದ ಎಲ್ಲ ಕಾರ್ಯಕರ್ತರನ್ನು ಕರೆಯಿಸಿ ಮಾತನಾಡಲು ಆಗದೇ ಇರುವುದರಿಂದ ವಿಷಾದ ವ್ಯಕ್ತಪಡಿಸುತ್ತೇನೆ. ಆದರೆ ನಮ್ಮ ಸೋಲಿನ ಬಗ್ಗೆ ಆತ್ಮಾವಲೋಕನ ಸಭೆಯಲ್ಲಿ ಎಲ್ಲರಿಗೂ ಮುಕ್ತ ಅವಕಾಶವಿದೆ ಯಾರದೇ ತಪ್ಪಿದ್ದರೂ ಕ್ರಮಕ್ಕೆ ಮುಂದಾಗೋಣ ಎಂದರು.
ಕ್ಷೇತ್ರದಲ್ಲಿ ನಮ್ಮ ಸೋಲು ನಮ್ಮ ಪಕ್ಷದಲ್ಲಿ ಇರುವ ಮೀರಸಾದೀಕನಂತವರಿಂದ ಮತ್ತು ಹಣದ ಆಸೆ ಆಮೀಷಿಗೆ ಬಲಿಯಾಗಿ ಪಕ್ಷಕ್ಕೆ ದ್ರೋಹ ಬಗೆದಿದ್ದಾರೆ ಇವರ ಸಮಯ ಸಾಧಕತನದಿಂದ ನಮ್ಮ ಸೋಲಾಗಿದೆ ಮುಂದೆ ಬರುವ ಚುನಾವಣೆಯಲ್ಲಿ ಕಾಂಗ್ರೆಸನಲ್ಲಿ ಇರುವ ಇಂತಹವರ ಮೇಲೆ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲು ಹೈಕಮಾಂಡಗೆ ಸೂಚಿಸಲಾಗುವುದು ಎಂದರು.
ಕಾಂಗ್ರೇಸ್ ಮುಖಂಡರಾದ ಸೋಮಣ್ಣ ಬೇವಿನಮರದ, ಎಸ್.ವಿ. ಪಾಟೀಲ, ಮಹೇಶ ತಳವಾರ, ಬಾಬರ ಭುವಾಜಿ, ಕರೀಂ ಮೊಗಲಲ್ಲಿ, ಇನ್ನೂ ಹಲವಾರು ಕಾಂಗ್ರೇಸ್ ಮುಖಂಡರು ಮಾತನಾಡಿದರು.
ಗುರುನಗೌಡ ಪಾಟೀಲ, ಶಿವಾನಂದ ರಾಮಗೇರಿ, ಮಲ್ಲಿಕಾರ್ಜುನಗೌಡ ಪಾಟೀಲ, ಪ್ರಕಾಶ ಹಾದಿಮನಿ, ಶಂಬೂ ಆಜೂರ, ಎಂ ಎಂ ಮುಲ್ಲಾ, ಎಸ್. ವಿ ಪಾಟೀಲ, ಮಂಜುನಾಥ ಮಣ್ಣಣ್ಣವರ, ಬಿ.ಜಿ ರಾಗಿ, ಗುಡ್ಡಪ್ಪ ಜಲ್ದಿ, ಎಫ್.ಸಿ ಪಾಟಿಲ್, ಶಿವಣ್ಣ ಅಂಗಡಿ, ಚಂದ್ರು ಕಂಕಣವಾಡ ಸೇರಿದಂತೆ ಕಾಂಗ್ರೇಸ್ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು