ಅಂತಾರಾಷ್ಟ್ರೀಯ ಪ್ರಕೃತಿ ವಿಕೋಪ ದಿನ ಮನುಷ್ಯನ ದುರಾಸೆ ನಿಸರ್ಗದ ಮುನಿಸು ಅಬ್ದುಲ್ ನಬಿ
ಸಿರುಗುಪ್ಪ - ನಮ್ಮ ನೆನಪುಗಳು ಹಾಗೆ ನಾವು ದುಃಖಿಸಿದ ದಿನಗಳನ್ನು ನೆನೆದು ನಗುತ್ತೆವೆ ನಕ್ಕ ದಿನಗಳನ್ನು ಮರೆತು ದುಃಖಿಸುತ್ತೆವೆ ಎಲ್ಲ ನೆನಪುಗಳೊಂದಿಗೆ ಸಾಗುತ್ತಿರೋಣ ಎಂದು ರಾಷ್ಟ್ರೀಯ ವಯಸ್ಕರ ಶಿಕ್ಷಣ ಸೆಂಟ್ರಲ್ ಕೌನ್ಸಿಲ್ ಮೈಸೂರು ಲೋಕ ಶಿಕ್ಷಣ ನಿರ್ದೇಶನಾಲಯ ಸಾಕ್ಷರತಾ ಮಿಷನ್ ಪ್ರಾಧಿಕಾರ ಬೆಂಗಳೂರು ಮಾನವ ಸಂಪನ್ಮೂಲ ಕೇಂದ್ರ ಅಭಿವೃದ್ಧಿ ಸಚಿವಾಲಯ ಪ್ರಕೃತಿ ವಿಕೋಪ ಸಮಿತಿಯ ಸದಸ್ಯ ಜನಾಭಿಪ್ರಾಯ ಮುಖಂಡ ಸಾಮಾಜಿಕ ಸುಧಾರಕ ಎ ಅಬ್ದುಲ್ ನಬಿ ಅಭಿಪ್ರಾಯಪಟ್ಟರು .ನಗರದ ಇಬ್ರಾಹಿಂ ಮಂಜಿಲ್ ನಲ್ಲಿ 34ನೇ ಅಂತರ ರಾಷ್ಟ್ರೀಯ ಪ್ರಕೃತಿ ವಿಕೋಪ ದಿನವನ್ನು ನೆನಪಿಸಿ ಅವರು ಮಾತನಾಡುತ್ತಾ ತಜ್ಞರ ಮಾಹಿತಿಯ ಪ್ರಕಾರ ಹವಾಮಾನ ಬದಲಾವಣೆಯಿಂದ ಶತ ಮಾನದಿಂದಲೂ ಕಂಡು ಕೇಳರಿಯದಿದ್ದ ಜಲ ಪ್ರಳಯ ಕರ್ನಾಟಕ ಸೇರಿ ದೇಶದಲ್ಲಿ ಬಾಧಿಸುತ್ತಿದೆ ಮಳೆಗಾಲದಲ್ಲಿ ಇಡೀ ಭಾರತವೇ ಪ್ರವಾಹದಿಂದ ತತ್ತರಿಸಿದೆ ಮಳೆಯನ್ನೇ ಕಾಣದಿದ್ದ ಪ್ರದೇಶಗಳು ದ್ವಿಪಗಳಾಗಿ ಮಾರ್ಪಟ್ಟು ಬರಡಾಗಿದ್ದ ಪ್ರದೇಶವು ನಿಂತ ನೀರಿನ ಹೊಂಡಗಳ ಭವಿಷ್ಯದ ಬಗ್ಗೆ ಆತಂಕ ಮೂಡಿಸಿದೆ ವರ್ಷದಿಂದ ವರ್ಷಕ್ಕೆ ಭೂ ಕುಸಿತ ಭೂಕಂಪ ಜ್ವಾಲಾಮುಖಿ ಪ್ರವಾಹ ಮೇಘ ಸ್ಫೋಟ ಸುನಾಮಿ ಗುಡುಗು ಸಿಡಿಲು ಮತ್ತು ಚಂಡಮಾರುತದಿಂದ ಹೆಚ್ಚು ಹಾನಿಯಾಗುತ್ತಿದೆ ಇದರಿಂದ ಸಾವಿರಾರು ಮಂದಿ ಸಾವನ್ನಪ್ಪಿರುವ ಜತೆಗೆ ಲಕ್ಷಾಂತರ ಆಕಳು ಎಮ್ಮೆ ಸೇರಿದಂತೆ ಪ್ರಾಣಿಗಳು ಬಲಿಯಾಗಿವೆ ಪ್ರಕೃತಿ ವಿಕೋಪದಿಂದ ದೇಶದ ಆರ್ಥಿ ಕತೆ ಮೇಲೂ ದುಷ್ಪರಿಣಾಮ ಬೀರಿದೆ ಆದ್ದರಿಂದ ವಿಕೋಪ ತಡೆಗೆ ಕೇಂದ್ರ ಹಾಗೂ ರಾಜ್ಯ ಸಕರ್ಾರಗಳು ಬಿಗಿ ಕ್ರಮ ಕೈಗೊಳ್ಳದಿದ್ದರೆ ಭವಿಷ್ಯದಲ್ಲಿ ಮನುಕುಲವೇ ನಾಶವಾಗುವ ಸಾಧ್ಯತೆ ಇದೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ನೀಡಿದ ಕರೆಯ ಮೇರೆಗೆ 1989ರಿಂದ ಪ್ರತಿವರ್ಷ ಈ ದಿನವನ್ನು ಪ್ರಕೃತಿ ವಿಕೋಪ ದಿನವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ ಎಂದು ಅಬ್ದುಲ್ ನಬಿ ಹೇಳಿದರು .ಗುಡುಗು ಸಿಡಿಲು ಹಲವು ಚಂಡಮಾರುತ ಪ್ರವಾಹ ಮೇಘ ಸ್ಫೋಟ ಭೂಕಂಪ ಭೂಕುಸಿತ ದಿಂದ ಭೀಕರ ವಿಕೋಪಗಳಿವು ಭಾರತೀಯ ಕ್ಷಾಮ 60 ಲಕ್ಷ ಸಾವು, ಬಂಗಾಳ ಕ್ಷಾಮ 30 ಲಕ್ಷ ಸಾವು, ಡೆಕ್ಕನ್ ಕ್ಷಾಮ 20 ಲಕ್ಷ ಸಾವು, ಕೋಲ್ಕತ್ತಾ ಚಂಡಮಾರುತ 3ಲಕ್ಷ ಸಾವು ,ಗುಜರಾತ್ ಭೂಕಂಪ 20.023ಲಕ್ಷ ಸಾವು ,ಹಿಂದೂ ಮಹಾಸಾಗರದ ಸುನಾಮಿ 12.269ಲಕ್ಷ ಸಾವು ,ಮಹಾರಾಷ್ಟ್ರದ ಲಾತೂರ್ ಭೂಕಂಪ 10 ಸಾವಿರ ಸಾವು ಪ್ರತಿವರ್ಷ ಪ್ರಪಂಚದಾದ್ಯಂತ 80 ಚಂಡಮಾರುತಗಳು ರೂಪುಗೊಳ್ಳುತ್ತವೆ 2011ರಿಂದ 2020ರವರೆಗೆ ರಾಜ್ಯದಲ್ಲಿ 25ಬಾರಿ ಅರಬ್ಬಿ ಸಮುದ್ರದಲ್ಲಿ ಹಾಗೂ 15ಬಾರಿ ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ರೂಪುಗೊಂಡಿವೆ ಅಕ್ಟೋಬರ್ ನಿಂದ ಡಿಸೆಂಬರ್ ಅವಧಿಯಲ್ಲಿ 26ಬಾರಿ ಸೈಕ್ಲೋನ್ ಉಂಟಾಗಿದೆ ದೇಶದ ಒಟ್ಟು ಜನಸಂಖ್ಯೆಯಲ್ಲಿ ಅಂದಾಜು 32ಕೋಟಿ ಜನರು ಸೈಕ್ಲೋನ್ ಸಂಬಂಧಿತ ಅಪಾಯಗಳಿಗೆ ತುತ್ತಾಗು ತ್ತಿದ್ದಾರೆ ಎಂದು ಅಬ್ದುಲ್ ನಬಿ ನುಡಿದರು .ಧಾರ್ಮಿಕ ಗುರುಗಳು ಖಲೀಫಾ ಸರ್ಕಾರಿ ಸರ್ ಖಾಜಿ ಸೈಯದ್ ಅಬ್ದುಲ್ ರಜಾಕ್ ಖಾದ್ರಿ ಅಶ್ರಫಿ, ಸೌದಾಗರ್ ಜುಮ್ಮಾ ಮಸೀದಿ ನಿಕಟ ಪೂರ್ವ ಅಧ್ಯಕ್ಷ ಹಾಜಿ ಹಂಡಿ ಹುಸೇನ್ ಬಾಷಾ, ಈದ್ಗಾ ಮತ್ತು ಕಬರಸ್ತಾನ್ ಕಮಿಟಿ ಅಧ್ಯಕ್ಷ ಹಂಡಿ ಹಾಶಿಮ್ ಮತ್ತು ಸದಸ್ಯರು, ಹಾಜಿ ಎ ಮೊಹಮ್ಮದ್ ಇಬ್ರಾಹಿಂ, ಮೊಹಮ್ಮದ್ ರಫಿ ,ಮೊಹಮ್ಮದ್ ನೌಶಾದ್ ಅಲಿ , ಅಲ್ಪಸಂಖ್ಯಾತರ ಅಭಿವೃದ್ದಿ ಸಂಘದ ತಾಲ್ಲೂಕು ಅಧ್ಯಕ್ಷ ಬಿ ಕೆ ಅಲ್ಲಾಭಕ್ಷಿ ,ಹಾಜಿ ಅಬ್ದುಲ್ ಹಮೀದ್ ಫಾರೂಕಿ, ಹಾಜಿ ಖಾಲಿ ಚೀಲ ಹುಸೇನ್ ಸಾಬ್,ಡಬಲ್ ಬಾಂಡ್ ಹಾಜಿ ಟಿ ಜಿ ಅಬ್ದುಲ್ ಗನಿ, ಡಾ ಮೊಹಮ್ಮದ್ ಅಲಿ, ಖತೀಬ್ ಜಹಿರುದ್ದೀನ್ ಬಾಬು, ಕ್ಷೇತ್ರ ಸಾಕ್ಷರತಾ ಗೌರವ ಸಂಯೋಜಕ ಜೆ ನಾಗೇಂದ್ರ ಗೌಡ ಮತ್ತಿತರರು ಇದ್ದರು.