ರಾಣೆಬೆನ್ನೂರ

ವಿಶ್ವಕ್ಕೆ ಯೋಗ ಸಂಸ್ಕೃತಿ ಪರಿಚಯಿಸಿದ ಕೀರ್ತಿ ಭಾರತಕ್ಕಿದೆ: ಪ್ರಕಾಶಾನಂದ ಶ್ರೀ

ವಿಶ್ವಕ್ಕೆ ಯೋಗ ಸಂಸ್ಕೃತಿ ಪರಿಚಯಿಸಿದ ಕೀರ್ತಿ  ಭಾರತಕ್ಕಿದೆ: ಪ್ರಕಾಶಾನಂದ ಶ್ರೀ

ರಾಣೇಬೆನ್ನೂರು 24:  ಭಾರತ ದೇಶವು ಯೋಗ ಸಂಸ್ಕೃತಿಯನ್ನು ತನ್ನ ಒಡಲಲ್ಲಿ ಅಳವಡಿಸಿಕೊಂಡು ಇಡೀ ವಿಶ್ವಕ್ಕೆ ಕೊಡುಗೆಯಾಗಿ ನೀಡಿದ ಕೀರ್ತಿ ನಮ್ಮದಾಗಿದೆ ಎಂದು ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ಶ್ರೀ ಪ್ರಕಾಶಾನಂದಜಿ ಮಹಾರಾಜ್ ನುಡಿದರು.   

ಅವರು ಬುಧವಾರ ಮುಂಜಾನೆ ಕೆ. ಎಲ್. ಇ ಶಿಕ್ಷಣ ಸಂಸ್ಥೆಯ ರಾಜರಾಜೇಶ್ವರಿ ಕಾಲೇಜು ಆವರಣದಲ್ಲಿ, ಜಿಲ್ಲಾ ಪತಂಜಲಿ ಯೋಗ ಸಮಿತಿ, ಭಾರತ್ ಸ್ವಾಭಿಮಾನ ಟ್ರಸ್ಟ್ ಆಯೋಜಿಸಿದ್ದ, 9ನೇ ಅಂತರಾಷ್ಟ್ರೀಯ  ಯೋಗ ದಿನಾಚರಣೆ ಸಮಾರಂಭದ ದಿವ್ಯ ನಾನಿದ್ದೆ ವಹಿಸಿ  ಮಾತನಾಡಿದರು.          ಇತಿಹಾಸದಲ್ಲಿ ನಮ್ಮ ಋಷಿಮುನಿಗಳು ತಮ್ಮ ನಿತ್ಯದ ಜೀವನದಲ್ಲಿ ಯೋಗ, ಧ್ಯಾನ,ಪ್ರಾಣಾಯಾಮ ಸಂಸ್ಕೃತಿಯನ್ನು ಅಳವಡಿಸಿಕೊಂಡಿದ್ದರಿಂದಲೇ, ದೀರ್ಘಾಯುಷ್ಯಗಳಾಗಿ ಬದುಕಿ ಬಾಳಿದ್ದಾರೆ ಎಂದರು.        

ಮೋದಿಜಿ ಅವರು, ಬಾಬಾ ರಾಮದೇವ್ ಜಿ ಅವರ ಈ ಸಂಸ್ಕೃತಿಯನ್ನು, ಅಪ್ಪಿಕೊಂಡು, ಒಪ್ಪಿಕೊಂಡಿದ್ದರಿಂದ ಇಂದು ವಿಶ್ವದ 177  ರಾಷ್ಟ್ರಗಳು ಯೋಗ ಸಂಸ್ಕೃತಿಯಿಂದ ನಿರೋಗಿಗಳಾಗಿ, ಭಾವೈಕ್ಯತೆಯ ಬದುಕನ್ನು ಸಾಗಿಸುವಂಥಾಗಿದೆ ಎಂದರು.          ಅಧ್ಯಕ್ಷತೆ ವಹಿಸಿದ್ದ ಸಮಿತಿಯ ಜಿಲ್ಲಾ ಅಧ್ಯಕ್ಷ ರವೀಂದ್ರ ಬಿಜಾಪುರ್ ಅವರು, ಕಳೆದ 15 ವರ್ಷಗಳಿಂದ ಪತಂಜಲಿ ಯೋಗ ಸಮಿತಿಯು, ನಗರವು ಸೇರಿದಂತೆ  ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿ,, ಯೋಗ ಕೇಂದ್ರಗಳ ಮೂಲಕ ನಿತ್ಯವೋ ತರಗತಿಗಳು ನಡೆಸಲಾಗುತ್ತಿದೆ, ಯೋಗ ಗುರುಗಳು, ಯೋಗ ಸಾಧಕರು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ, ಸ್ವಾಸ್ಥ ಮತ್ತು ಆರೋಗ್ಯವಂತ ಸಮಾಜ ನಿಮರ್ಾಣಕ್ಕಾಗಿ ನಿತ್ಯವೂ ಶ್ರಮಿಸುತ್ತಿದ್ದಾರೆ ಎಂದರು.             

ದಿನಾಚರಣೆ ಉದ್ಘಾಟಿಸಿ ಮಾತನಾಡಿದ, ಶಾಸಕ ಪ್ರಕಾಶ್ ಕೋಳಿವಾಡ ಅವರು, ಭವಿಷ್ಯದ ದಿನಗಳಲ್ಲಿ, ತಾವು ಸಹ ಯೋಗ ಶಿಕ್ಷಣ ಕಲಿಯಬೇಕೆನ್ನುವ ಆಸೆ ಹೊಂದಿದ್ದೇನೆ. ಸ್ವಾಸ್ತ ಸಮಾಜ ನಿರ್ಮಾಣಕ್ಕೆ ನಾವೆಲ್ಲರೂ ಯೋಗ ಸಾಧಕರಾಗಿ, ಯೋಗ ಗುರುಗಳ ಮಾರ್ಗದರ್ಶನ ಪಡೆಯಬೇಕಾದ ಇಂದಿನ ಅಗತ್ಯವಿದೆ ಎಂದರು. ಪಾಲ್ಗೊಂಡ ಸಾವಿರಾರು ಮಕ್ಕಳಿಗೆ ಯೋಗ ಸಾಧಕ ಕೆ. ಸಿ. ಕೋಮಲಾಚಾರ್ ಅವರು ಯೋಗದ ಮಹತ್ವ ಮತ್ತು ಅದರಿಂದಾಗುವ ಪರಿಣಾಮಗಳ ಕುರಿತು ಪ್ರಾತ್ಯಕ್ಷತೆಯ ಮೂಲಕ ತರಬೇತಿ ನೀಡಿದರು ಬಿಕೆ ಮಾಲತಿಜಿ ಅಕ್ಕ, ಸ್ಥಾನಿಕ ಆಡಳಿತ  ಕಾರ್ಯಾಧ್ಯಕ್ಷ ವ್ಹಿಪಿ. ಲಿಂಗನಗೌಡ್ರ,ತಹಸಿಲ್ದಾರ್ ಕೆ, ಗುರುಬಸವರಾಜ್ . ಡಿವೈಎಸ್ಪಿ ಶ್ರೀಧರ್ ಕೆ.ವಿ, ಬಿಇಓ ಎಮ್, ಎಚ್. ಪಾಟೀಲ್ ಬಿಎಸ್ಟಿ ಅಧ್ಯಕ್ಷ , ಆರ್.ಎನ್. ರಾಠೋಡ್, ನಾಗಪ್ಪ ಲಮಾಣಿ, ಮಹಿಳಾ.ಮಂಡಲ ಪ್ರಭಾರಿ ವಜ್ರೇಶ್ವರಿ ಲದ್ವಾ,  ಮೊದಲಾದವರು ಮಾತನಾಡಿದರು. ಸಮಿತಿಯ ಸದಸ್ಯರು, ಯೋಗ ಗುರುಗಳು  ಯೋಗ ಸಾಧಕರು ಮತ್ತಿತರ ಗಣ್ಯರು  ಪಾಲ್ಗೊಂಡಿದ್ದರು. ಶಶಿಕಲಾ ಭಡೆಂಕಲ್ ಪ್ರಾರ್ಥಿಸಿದರು, ಆರ್ ಬಿ ಪಾಟೀಲ್, ನಿರೂಪಿಸಿ, ಕೆ ಜಿ ದಿವಾಕರಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಸರೋಜಾ ಹೊಲಿಹಳ್ಳಿ ವಂದಿಸಿದರು 

ಸುದ್ದಿ ಓದಿ