ಭಾರತ ಸ್ವಾತಂತ್ರ್ಯೋತ್ಸವ : ರಕ್ತದಾನ ಶಿಬಿರ
ರಾಣೇಬೆನ್ನೂರು೨೧: ನಗರ ಹೊರವಲಯ ಹಲಗೇರಿ ರಸ್ತೆಯ ಜೆ ಪಿ ಟವರ್ ಇ ಎಂ ಡಬ್ಲ್ಯೂ ಪಿ ಮಾರ್ಕೆಟಿಂಗ್ ಪ್ರೈವೇಟ್ ಲಿಮಿಟೆಡ್ ಮತ್ತು ವೆಲ್ ಪವರ್ ವೆಲ್ನೆಸ್ ಟ್ರೈನಿಂಗ್ ಸೆಂಟರ್ ಹಾಗೂ ವೀರಭದ್ರೇಶ್ವರ ಸಾಂಸ್ಕೃತಿಕ ಸೇವಾ ಸಮಿತಿಯು, 77 ಸ್ವಾತಂತ್ರ್ಯೋತ್ಸವದ ನಿಮಿತ್ತ ಸಾರ್ವಜನಿಕವಾಗಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರವು ಆಯೋಜಿಸಿತ್ತು. ರಾಣೇಬೆನ್ನೂರು ಬ್ಲಡ್ ಬ್ಯಾಂಕ್ ವೈದ್ಯರು ಹಾಗೂ ಸಿಬ್ಬಂದಿಗಳು ಮತ್ತು ರಕ್ತದಾನಿಗಳು ಮತ್ತು ದೇವಸ್ಥಾನ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು ಮುಖ್ಯಸ್ಥರು ಗಣ್ಯರು ಸಿಬ್ಬಂದಿಗಳು ಉಪಸ್ಥಿತರಿದ್ದರು.