ವಿಶೇಷ ಅಗತ್ಯತೆವುಳ್ಳ ಮಕ್ಕಳ ವೈದ್ಯಕೀಯ ಮೌಲ್ಯಾಂಕನ ಶಿಬಿರ ಉದ್ಘಾಟನೆ
ವಿಶೇಷ ಅಗತ್ಯತೆವುಳ್ಳ ಮಕ್ಕಳ ವೈದ್ಯಕೀಯ ಮೌಲ್ಯಾಂಕನ ಶಿಬಿರ ಉದ್ಘಾಟನೆ
ಧಾರವಾಡ 3 ;ವಿವಿಧ ಬಗೆಯ ದೋಷಗಳನ್ನು ಹೊಂದಿದ ಮಕ್ಕಳನ್ನು ಗುರುತಿಸಿ ಸರಕಾರ ವೈದ್ಯಕೀಯ ತಪಾಸಣಾ ಶಿಬಿರ ನಡೆಸುವ ಮೂಲಕ ಇಂಥ ಮಕ್ಕಳಿಗೆ ಚಿಕಿತ್ಸೆ ನೀಡುವುದೇ ಮೌಲ್ಯಾಂಕನ ಶಿಬಿರ ಶಿಬಿರ ಉದ್ದೇಶವಾಗಿದೆ ಎಂದು ಡಿವಾಯ್ಪಿಸಿ ಎಸ್ ಎಮ್ ಹುಡೇದಮನಿ ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯ ಕ್ಷೇತ್ರ ಸಂಪನ್ಮೂಲ ಕೇಂದ್ರ, ಧಾರವಾಡ ಶಹರ, ಧಾರವಾಡ ಗ್ರಾಮೀಣ, ಕಲಘಟಗಿ ಮೂರು ಶೈಕ್ಷಣಿಕ ತಾಲೂಕಿನ ಸಂಯಕ್ತ ಆಶ್ರಯದಲ್ಲಿ ಸರಕಾರಿ ಶಿಕ್ಷಕಿಯರ ತರಬೇತಿ ಸಂಸ್ಥೆ ಧಾರವಾಡ ಶಹರದಲ್ಲಿ ಹಮ್ಮಿಕೊಳ್ಳಲಾದ ವಿಶೇಷ ಅಗತ್ಯತೆವುಳ್ಳ ಮಕ್ಕಳ ವೈದ್ಯಕೀಯ ಮೌಲ್ಯಾಂಕನ ಶಿಬಿರ ಉದ್ಘಾಟಿಸಿ ಮಾತನಾಡಿದರು. ಪ್ರತಿವರ್ಷವೂ ವೈದ್ಯಕೀಯ ತಪಾಸಣಾ ಶಿಬಿರವನ್ನು ಶಾಲಾ ಶಿಕ್ಷಣ ಇಲಾಖೆಯಿಂದ ಆಯೋಜಿಸಲಾಗುತ್ತಿದ್ದು. ವೈದ್ಯರ ತಂಡ ಬರುವ ಮೂಲಕ. ಮಕ್ಕಳಿಗೆ ವೈದ್ಯರು ಸೂಚಿಸುವ ಅಗತ್ಯವುಳ್ಳ ಸಾಧನ ಸಲಕರಣೆಗಳನ್ನು ಪೂರೈಸುವ ಕಾರ್ಯ ಆದ್ಯತೆಯ ಮೇಲೆ ಯೋಜನೆಯ ಮಿತಿಗೆ ಒಳಪಟ್ಟು ಸಲಕರಣೆಗಳ ಪೂರೈಕೆಗೆ ಕ್ರಮ ಜರುಗಿಸಲಾಗುತ್ತಿದೆ ಎಂದರು.
ಸಮಾರಂಭ ಅಧ್ಯಕ್ಷರು ಹಾಗೂ ಧಾರವಾಡ ಶಹರ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಅಶೋಕಕುಮಾರ ಸಿಂದಗಿ ಮಾತನಾಡುತ್ತಾ ‘ಎಲ್ಲರಂತೆ ಅಂಗವಿಕಲ ಮಕ್ಕಳು ಕೂಡ ಎಲ್ಲ ಚಟುವಟಿಕೆ ಯಲ್ಲಿ ಸಾಮಾನ್ಯ ಮಕ್ಕಳಂತೆ ತೊಡಗಲು ತೊಂದರೆ ಅನುಭವಿಸುತ್ತಾರೆ. ಅವರಿಗೆ ಅಗತ್ಯ ಚಟುವಟಿಕೆ ಹಮ್ಮಿಕೊಂಡು ನೀರೀಕ್ಷಿತ ಮಟ್ಟಕ್ಕೆ ತಲುಪುವಂತೆ ಮಾಡುವುದೇ ಸಮನ್ವಯ ಶಿಕ್ಷಣದ ಆಶಯ ವಾಗಿದೆ ಎಂದರು. ಧಾರವಾಡ ಶಹರ ಕ್ಷೇತ್ರ ಸಮನ್ವಯಾಧಿಕಾರಿಯಾದ ಮಂಜುನಾಥ ಅಡಿವೇರ ಪ್ರಸ್ಥಾವಿಕವಾಗಿ ಮಾತನಾಡುತ್ತಾ ವಿಶೇಷ ಅಗತ್ಯವುಳ್ಳ ಮಕ್ಕಳಲ್ಲಿ ವಿಶೇಷ ಪ್ರತಿಭೆ ಇರುತ್ತದೆ. ಅದನ್ನು ಗುರುತಿಸಿ, ಪ್ರೋತ್ಸಾಹಿಸುವುದು ಶಿಕ್ಷಕರು ಮತ್ತು ಪೋಷಕರ ಜವಾಬ್ದಾರಿ. ಸಾಮಾನ್ಯ ಮಕ್ಕಳೊಂದಿಗೆ ಕಲಿಯುವಾಗ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಯಲ್ಲಿ ಸಕ್ರಿಯವಾಗಿ ಭಾಗವಹಿಸುವಲ್ಲಿ ಅವರು ಕೆಲಸಮಸ್ಯೆ ಎದುರಿಸುತ್ತಾರೆ. ಅವುಗಳ ನಿವಾರಣೆಗೆ ನಾವು ಮುಂದಾಗಬೇಕು ಎಂದರು.ಸರಕಾರಿ ಶಿಕ್ಷಕಿಯರ ತರಬೇತಿ ಸಂಸ್ಥೆ ಧಾರವಾಡದ ರವಿಕುಮಾರ ಬಾರಾಟಕ್ಕೆ, ಸಹಾಯಕ ಯೋಜನಾ ಉಪಸಮನ್ವಯಾಧಿಕಾರಿಯಾದ ಪ್ರಕಾಶ ಭೂತಾಳಿ,ಧಾರವಾಡ ಗ್ರಾಮೀಣ ಕ್ಷೇತ್ರ ಸಮನ್ವಯಾಧಿಕಾರಿಗಳಾದ ಕುಮಾರ ಕೆ ಎಫ್, ನನಗೂ ಶಾಲೆ ಕಾರ್ಯಕ್ರಮದ ಮುಖ್ಯಸ್ಥರಾದ ಬಸವರಾಜ ಮ್ಯಾಗೇರಿ, ವೈದ್ಯರಾದ ವಿಕ್ರಮಕುಮಾರ,ಅಶೋಕ ಕೊರಿ,ಅಲ್ಲಾಭಕ್ಷ ಯಾದವಾಡ,ಇಓಖಿ ಖಠಿಟ, ಮಾರುತಿ ಕರಡಿ, ಇಥಿಜ ಖಠಿಟ, ಅಂಜನಾ ನಾಮದಾರ, ಇಥಿಜ ಖಠಿಟ ಮೇಘಶ್ರೀ ಂಣಜಠಠಣ, ಬಸವರಾಜ್ ನಿಡುಗುಂದಿ, ಮನ:ಶಾಸ್ತ್ರಜ್ಞರು, ಮಲ್ಲಿಕಾ ಬಿ ಎನ್, ಮನ:ಶಾಸ್ತ್ರಜ್ಞರು,ಸುಷ್ಮಾ ಮನ:ಶಾಸ್ತ್ರಜ್ಞರು, ಫಿಜಿಯೋಥೆರಪಿಸ್ಟ್ ಸುಜಾತಾ ನಾಯಕ,್ ಮೋಹನ್ ತಂಬದ, ಹಾಗೂ ಬಿ.ಆಯ್.ಇ.ಆರ್,ಟಿ ಗೋಪಾಲ ಸೊನ್ನಹಳ್ಳಿ ,ಲಲಿತಾ ಹೊನ್ನವಾಡ , ಮಂಜುಳಾ ಕದಂ, ಪ್ರಭಾ ಸವಣೂರು , ಎ ಬಿ ಬೇಟಗೇರಿ ಮಂಜುಳಾ ಚನ್ನಪ್ಪ ಗೌಡರ, ,ಬಸವರಾಜ ಹೊಸಮನಿ,ನಬಿಸಾಬ್ ಮುದ್ದೆಬಿಹಾಳ,ಸಂತೋಷಿ ಕನ್ನೋಳ್ಳಿ ,ಮೂರು ತಾಲುಕಿನ ಬಿಅರಪಿ,ಸಿಅರಪಿ ಗಳುನನಗೂ ಶಾಲೆ ಸಿಬ್ಬಂದಿಗಳು, ವಿಕಲಚೇತನ ವಿದ್ಯಾರ್ಥಿಗಳು, ಪಾಲಕರು, ಪೋಷಕರು ಉಪಸ್ಥಿತರಿದ್ದರು.
ಧಾರವಾಡ ಶಹರ ಕ್ಷೇತ್ರ ಸಮನ್ವಯಾಧಿಕಾರಿಯಾದ ಮಂಜುನಾಥ ಅಡಿವೇರ ಸ್ವಾಗತಿಸಿದರೆ, ಬಿಆರಪಿ ಜಯಲಕ್ಷ್ಮೀ,ಎಚ್ ನಿರೂಪಿಸದರು, ಧಾರವಾಡ ಗ್ರಾಮೀಣ ಕ್ಷೇತ್ರ ಸಮನ್ವಯಾಧಿಕಾರಿಗಳಾದ ಕುಮಾರ ಕೆ ಎಫ್, ವಂದಿಸಿದರು.
ವಿವಿಧ ಭಾಗದಿಂದ ಬಂದ 282 ಮಕ್ಕಳು ಶಿಬಿರದಲ್ಲಿದ್ದರು. ಮಕ್ಕಳನ್ನು ಸಾಧನ- ಸಲಕರಣೆ ಪಡೆಯಲು ಅರ್ಹರೆಂದು ಗುರುತಿಸಲಾಯಿತು. ದೃಷ್ಟಿ ದೋಷವುಳ್ಳ , ಬಹುವಿಕಲತೆ ಉಳ್ಳ, ಮಾತು ಮತ್ತು ಶ್ರವಣ ದೋಷವುಳ್ಳ, ದೈಹಿಕ ಮತ್ತು ಚಲನ ದೋಷವುಳ್ಳ, ಬುದ್ಧಿ ದೋಷವುಳ್ಳ ಮಕ್ಕಳನ್ನು ಗುರುತಿಸಿ ಚಿಕಿತ್ಸೆ ನೀಡಲಾಯಿತು.
ವಿಶೇಷ ಅಗತ್ಯವುಳ್ಳ ಮಕ್ಕಳ ದೋಷ ನಿವಾರಣಾ ಶಸ್ತ್ರ ಚಿಕಿತ್ಸೆ ಮತ್ತು ಸಾಧನ- ಸಲಕರಣೆ ಪೂರೈಕೆಯಲ್ಲಿ ಮುಂತಾದ ದೋಷಗಳಿರುವ ಮಕ್ಕಳನ್ನು ಗುರುತಿಸಿ ಅವರಿಗೆ ದೋಷ ನಿವಾರಣಾ ಚಿಕಿತ್ಸೆ ನಡೆಸಿ ಶಾಲಾ ಚಟುವಟಿಕೆಯಲ್ಲಿ ಪಾಲ್ಗೊಳ್ಳುವಂತೆ ಮಾಡುವುದು ಈ ಯೋಜನೆಯ ಉದ್ದೇಶವಾಗಿದೆ. ತಜ್ಞ ವೈದ್ಯರ ತಂಡದವರು ಮಕ್ಕಳನ್ನು ತಪಾಸಣೆಗೆ ಒಳಪಡಿಸಿ ಸಲಕರಣೆ ವಿತರಣೆ ಅಥವಾ ಶಸ್ತ್ರ ಚಿಕಿತ್ಸೆಗೆ ಶಿಫಾರಸುಮಾಡುತ್ತಾರೆ. ಮಕ್ಕಳಿಗೆ ಅವಶ್ಯವಿರುವ ತ್ರಿಚಕ್ರ ಸೈಕಲ್, ಶ್ರವಣ ದೋಷಕ್ಕೆ ಕಿವಿಗೆ ಅಳವಡಿಸಿಕೊಳ್ಳುವ ಸಾಧನ, ದೃಷ್ಠಿ ದೋಷದ ಮಕ್ಕಳಿಗೆ ಕನ್ನಡಕಗಳ ವಿತರಣೆ ಹೀಗೆ ಹಲವಾರು ಸಲಕರಣೆಗಳನ್ನು ನೀಡಲಾಗುತ್ತಿದೆ.
ವಿವಿಧ ಬಗೆಯ ದೋಷಗಳನ್ನು ಹೊಂದಿದ ಮಕ್ಕಳನ್ನು ಗುರುತಿಸಿ ಸರಕಾರ ವೈದ್ಯಕೀಯ ತಪಾಸಣಾ ಶಿಬಿರ ನಡೆಸುವ ಮೂಲಕ ಇಂಥ ಮಕ್ಕಳಿಗೆ ಚಿಕಿತ್ಸೆ ನೀಡುವುದೇ ಮೌಲ್ಯಾಂಕನ ಶಿಬಿರ ಶಿಬಿರ ಉದ್ದೇಶವಾಗಿದೆ ಎಂದು ಡಿವಾಯ್ಪಿಸಿ ಎಸ್ ಎಮ್ ಹುಡೇದಮನಿ ಉದ್ಘಾಟನಾ ಮಾತು ಹೇಳಿದರು. ವಿಶೇಷ ಅಗತ್ಯತೆವುಳ್ಳ ಮಗು ಓಂ ಸಾಯಿ ದೊಡ್ಮನಿ ಉತ್ತಮ ಹಾಡು ಹೇಳಿದ್ದಕ್ಕೆ ಅಭಿನಂದಿಸಿದರು.ಸಮಾರಂಭ ಅಧ್ಯಕ್ಷರು ಹಾಗೂ ಧಾರವಾಡ ಶಹರ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಅಶೋಕಕುಮಾರ ಸಿಂದಗಿ ಮಾತನಾಡುತ್ತಾ ‘ಎಲ್ಲರಂತೆ ಅಂಗವಿಕಲ ಮಕ್ಕಳು ಕೂಡ ಎಲ್ಲ ಚಟುವಟಿಕೆ ಯಲ್ಲಿ ಸಾಮಾನ್ಯ ಮಕ್ಕಳಂತೆ ತೊಡಗಲು ತೊಂದರೆ ಅನುಭವಿಸುತ್ತಾರೆ. ಅವರಿಗೆ ಅಗತ್ಯ ಚಟುವಟಿಕೆ ಹಮ್ಮಿಕೊಂಡು ನೀರೀಕ್ಷಿತ ಮಟ್ಟಕ್ಕೆ ತಲುಪುವಂತೆ ಮಾಡುವುದೇ ಸಮನ್ವಯ ಶಿಕ್ಷಣದ ಆಶಯ ವಾಗಿದೆ ಎಂದರು. ಧಾರವಾಡ ಶಹರ ಕ್ಷೇತ್ರ ಸಮನ್ವಯಾಧಿಕಾರಿಯಾದ ಮಂಜುನಾಥ ಅಡಿವೇರ ಪ್ರಸ್ಥಾವಿಕವಾಗಿ ಮಾತನಾಡುತ್ತಾ ವಿಶೇಷ ಅಗತ್ಯವುಳ್ಳ ಮಕ್ಕಳಲ್ಲಿ ವಿಶೇಷ ಪ್ರತಿಭೆ ಇರುತ್ತದೆ ಎಂದರು. ವಿಕಲಚೇತನ ವಿದ್ಯಾರ್ಥಿಗಳು, ಪಾಲಕರು, ಪೋಷಕರು ಉಪಸ್ಥಿತರಿದ್ದರು.