ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಕಾರ್ಯಾಗಾರ ಉದ್ಘಾಟನೆ
ಲೋಕದರ್ಶನ ವರದಿ
ಸಿಂದಗಿ 24: 350 ಪುಟದ ಈ ಶಿಕ್ಷಣ ನೀತಿ ಮಾಹಿತಿಯನ್ನು ಸರಳೀಕರಣಗೊಳಿಸಿ 64 ಪುಟದಲ್ಲಿ ಸಾರಾಂಶ ನೀಡಲಾಗಿದೆ. ಇದು ಭರವಸೆ ನೀಡುವ ಶಿಕ್ಷಣ ನೀತಿಯಾಗಿ ಹೊರಹೊಮ್ಮಿದೆ. ಗ್ರಾಮ ಪಂಚಾಯಿತಿಯಿಂದ ರಾμÀ್ಟ್ರ ಮಟ್ಟದವರೆಗೆ ಮಾಹಿತಿ ಸಂಗ್ರಹಿಸಿ ಕ್ರೋಢೀಕರಿಸಿ ಸಿದ್ಧಪಡಿಸಲಾಗಿದೆ. ದೇಶದಲ್ಲಿ ಎರಡು ಶಿಕ್ಷಣ ನೀತಿಗಳು ಅನುμÁ್ಠನಗೊಳ್ಳಲೇ ಇಲ್ಲ ಎಂದು ವಿದ್ಯಾಭಾರತಿ ಕರ್ನಾಟಕದ ಕ್ಷೇತ್ರೀಯ ಸಹ-ಸಂಘಟನಾ ಕಾರ್ಯದರ್ಶಿ ಜಿ.ಆರ್.ಜಗದೀಶ ವಿಷಾದಿಸಿದರು.
ಪಟ್ಟಣದ ಜ್ಞಾನ ಭಾರತಿ ವಿದ್ಯಾಕೇಂದ್ರದಲ್ಲಿ ಸಭಾಭವನದಲ್ಲಿ ಜರುಗಿದ ವಿದ್ಯಾಭಾರತಿ ಕರ್ನಾಟಕ ಹಮ್ಮಿಕೊಂಡಿದ್ದ ನೂತನ ರಾಷ್ಟ್ರೀಯ ಶಿಕ್ಷಣ ನೀತಿ-2020 ಕಾರ್ಯಾಗಾರದಲ್ಲಿ ವಿಶೇμÀ ಉಪನ್ಯಾಸ ನೀಡಿ ಅವರು ಮಾತನಾಡಿದರು.
ಶಿಕ್ಷಣದಲ್ಲಿ ಭಾರತೀಯತೆ ಇಲ್ಲದಿರುವುದು ದುರದೃμÀ್ಟಕರ ಸಂಗತಿ. ಆದರೆ ಈಗ ಅನುμÁ್ಠನಗೊಳ್ಳಲಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಭಾರತ ದೇಶ ಭಾರತವಾಗಿ ಉಳಿಸುವಂಥ ಶಿಕ್ಷಣ ನೀತಿಯಾಗಿದೆ ಪ್ರಸ್ತುತ ಶಿಕ್ಷಣ ನೀತಿಯು ಪುರಾತನ ಶಿಕ್ಷಣ ಪದ್ಧತಿಗೆ ಆಧುನಿಕ ಸ್ಪರ್ಶ ಕೊಟ್ಟಿದೆ. ಇದು ವಿದ್ಯಾರ್ಥಿ ಕೇಂದ್ರೀತ ಶಿಕ್ಷಣ ನೀತಿಯಾಗಿದೆ. ನಾಲ್ಕು ವμರ್Àದ ಪದವಿ ಶಿಕ್ಷಣ. ಎರಡು ವμರ್Àಕ್ಕೊಮ್ಮೆ ಪರೀಕ್ಷಾ ಪದ್ಧತಿ ಒಳಗೊಂಡಿದೆ. ವಿಜ್ಞಾನ ಸಂಯೋಜನೆ ಜೊತೆಗೆ ಕಲಾ ವಿμÀಯವನ್ನು ಕೂಡ ವಿದ್ಯಾರ್ಥಿಗಳು ಅಧ್ಯಯನ ಮಾಡಬಹುದಾಗಿದೆ. ಹೀಗಾಗಿ ಯುವಕರಿಗೆ ಇದೊಂದು ವಿಶೇμÀ ಕೊಡುಗೆ ಎನ್ನಬಹುದು ಎಂದರು.
ಪಟ್ಟಣದ ಬಿ.ಇಡಿ ಕಾಲೇಜುಗಳ ಪ್ರಶಿಕ್ಷಣಾರ್ಥಿಗಳ ಜೊತೆ ಸಂವಾದ ನಡೆಯಿತು. ಪ್ರಾಚಾರ್ಯರು, ಪ್ರಾಧ್ಯಾಪಕರು, ಶಿಕ್ಷಕರು, ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ವೇದಿಕೆಯಲ್ಲಿ ವಿದ್ಯಾಭಾರತಿ ವಿಜಯಪುರ ಜಿಲ್ಲಾ ಘಟಕದ ಅಧ್ಯಕ್ಷ ಪ್ರಭು ಕಡಿ, ಕಾರ್ಯದರ್ಶಿ ರಾಜಶೇಖರ ಪಾಟೀಲ, ಜ್ಞಾನಭಾರತಿ ವಿದ್ಯಾಮಂದಿರದ ಕಾರ್ಯದರ್ಶಿ ಸತೀಶ ಹಿರೇಮಠ ಮುಖ್ಯ ಶಿಕ್ಷಕ ಜಗದೀಶ ಪಾಟೀಲ ಇನ್ನಿತರರು ಇದ್ದರು.
24ಎಸ್ಎನ್ಡಿ4
ಫೋಟೋ ಕ್ಯಾಫ್ಸನ್
ಸಿಂದಗಿ : ಪಟ್ಟಣದ ಜ್ಞಾನ ಭಾರತಿ ವಿದ್ಯಾಕೇಂದ್ರದಲ್ಲಿ ಸಭಾಭವನದಲ್ಲಿ ಜರುಗಿದ ವಿದ್ಯಾಭಾರತಿ ಕರ್ನಾಟಕ ಹಮ್ಮಿಕೊಂಡಿದ್ದ ನೂತನ ರಾಷ್ಟ್ರೀಯ ಶಿಕ್ಷಣ ನೀತಿ-2020 ಕಾರ್ಯಾಗಾರವನ್ನು ವಿದ್ಯಾಭಾರತಿ ಕರ್ನಾಟಕದ ಕ್ಷೇತ್ರೀಯ ಸಹ-ಸಂಘಟನಾ ಕಾರ್ಯದರ್ಶಿ ಜಿ.ಆರ್.ಜಗದೀಶ ಉದ್ಘಾಟಿಸಿದರು.