ಧಾರವಾಡ - ಹುಬ್ಬಳ್ಳಿ

27 ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಅಂತರ್ ವಿಭಾಗೀಯ ಕ್ರೀಡಾ ಮತ್ತು ಕಲಾ ಚಟುವಟಿಕೆಗಳ ಉದ್ಘಾಟನಾ ಸಮಾರಂಬ

27 ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಅಂತರ್ ವಿಭಾಗೀಯ ಕ್ರೀಡಾ ಮತ್ತು ಕಲಾ ಚಟುವಟಿಕೆಗಳ ಉದ್ಘಾಟನಾ ಸಮಾರಂಬ

27 ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಅಂತರ್ ವಿಭಾಗೀಯ ಕ್ರೀಡಾ ಮತ್ತು ಕಲಾ ಚಟುವಟಿಕೆಗಳ ಉದ್ಘಾಟನಾ ಸಮಾರಂಬ 

ಹುಬ್ಬಳ್ಳಿ 11 : ದಿನಾಂಕ:09-11-2024 ರಂದು ವಾ.ಕ.ರ.ಸಾ.ಸಂಸ್ಥೆಯ 27 ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಧಾರವಾಡದ ಡಾ.ಆರ್‌.ಎನ್‌.ಶೆಟ್ಟಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಅಂತರ್ ವಿಭಾಗೀಯ ಕ್ರೀಡಾ ಮತ್ತು ಕಲಾ ಚಟುವಟಿಕೆಗಳ ಉದ್ಘಾಟನಾ ಸಮಾರಂಭವನ್ನು ಸಂಸ್ಥೆಯ ಮಾನ್ಯ ಅಧ್ಯಕ್ಷರಾದ ಶ್ರೀ ಭರಮಗೌಡ (ರಾಜು) ಅ. ಕಾಗೆ, ಮಾನ್ಯ ಶಾಸಕರು ಕಾಗವಾಡ ವಿಧಾನಸಭಾ ಕ್ಷೇತ್ರ.ರವರು ಕ್ರೀಡಾ ಧ್ವಜಾರೋಹಣ ಮಾಡಿ ಉದ್ಘಾಟಿಸಿದರು.   

ಧ್ವಜಾರೋಹಣ ಮಾಡಿ ಮಾತನಾಡಿದ ಅಧ್ಯಕ್ಷರು ಸಂಸ್ಥಯೆ ಸಿಬ್ಬಂದಿಗಳು ಒತ್ತಡದ ನಡುವೆ ಕೆಲಸ ನಿರ್ವಹಿಸುತ್ತಿರುತ್ತಾರೆ, ಅವರಿಗೆ ಇಂತಹ ಕ್ರೀಡೆಗಳನ್ನು ಏರಿ​‍್ಡಸುವದರಿಂದ ಅವರಲ್ಲಿನ ಸೂಪ್ತವಾಗಿದ್ದ ಪ್ರತಿಭೆ ಬೆಳಕಿಗೆ ಬರುತ್ತದೆ ಹಾಗೇಯೆ ಅವರು ಇನ್ನಷ್ಟು ಉತ್ಸಾಹದಿಂದ ಕರ್ತವ್ಯ ನಿರ್ವಹಿಸಲು ಸಾದ್ಯವಾಗುತ್ತದೆ. ಗಂಡು-ಹೆಣ್ಣೆಂಬ ಭೇದವಿಲ್ಲದೇ ಎಲ್ಲರೂ ಸಕ್ರಿಯವಾಗಿ ಎಲ್ಲ ಕ್ರೀಡೆ ಹಾಗೂ ಕಲಾ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಸದೃಢವಾದ ಆರೋಗ್ಯಕರ ಶರೀರ ಹೊಂದುವುದು ಇಂದಿನ ಕಾಲದಲ್ಲಿ ಅತ್ಯವಶ್ಯವಾಗಿದೆ. ನೂರು ಕೋಟಿ ಗಳಿಸುವುದಕ್ಕಿಂತ ನೂರು ವರ್ಷ ಬದುಕುವುದು ಮಹತ್ವದ್ದಾಗಿದೆ. ಸಂಸ್ಥೆಯ ಏಳಿಗಗೆ ಎಲ್ಲರೂ ಪ್ರಾಮಾಣಿಕತೆಯಿಂದ ಮತ್ತು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸೋಣ ಎಂದು ತಿಳಿಸಿ ಕ್ರೀಡೆಗಳಲ್ಲಿ ಭಾಗವಹಿಸಿದ ಎಲ್ಲ ಅಧಿಕಾರಿ/ಸಿಬ್ಬಂದಿಗಳಿಗೆ ಶುಭ ಕೋರಿದರು.   

ಸಂಸ್ಥೆಯ ಮಾನ್ಯ ಉಪಾಧ್ಯಕ್ಷರಾದ ಶ್ರೀ ಪೀರಸಾಬ ಅ.ಕೌತಾಳ ಮಾತನಾಡಿ ದಿನನಿತ್ಯ ತಮ್ಮ ಬೇರೆ ಬೇರೆ ಕೆಲಸಗಳಲ್ಲಿ ನಿರತರಾಗಿರುವ ಸಿಬ್ಬಂದಿಗಳು ಇಲ್ಲಿ ಎಲ್ಲರೂ ಒಟ್ಟಿಗೆ ಸೇರಿ ಕ್ರೀಡೆ ಮತ್ತು ಕಲಾ ಚಟುವಟಿಕೆಗಳಲ್ಲಿ ಭಾಗವಹಿಸಿರುವುದು ಸಂತೋಷದ ವಿಷಯವಾಗಿದೆ. ಇಂತಹ ಪಂದ್ಯಾವಳಿಗಳಿಂದ ನೌಕರರಲ್ಲಿ ಪರಸ್ಪರ ಸೌಹಾರ್ದತೆ ಮೂಡಲು ಸಾದ್ಯವಾಗುತ್ತದೆ ಎಂದು ತಿಳಿಸಿದರು.   

ಅಧ್ಯಕ್ಷತೆಯನ್ನು ವಹಿಸಿದ್ದ ಮಾನ್ಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಮತಿ ಪ್ರಿಯಾಂಗಾ.ಎಂ, ಭಾ.ಆ.ಸೇ.ರವರು ಮಾತನಾಡುತ್ತಾ  ಸಂಸ್ಥೆಯಲ್ಲಿ ಈಗ ಹೊಸ ಬಸ್ಸುಗಳ ಖರೀದಿ, ಸಿಬ್ಬಂದಿಗಳ ನೇಮಕಾತಿ ಹಾಗೂ ಕಾರ್ಮಿಕ ಸ್ನೇಹಿ ಯೋಜನೆಗಳನ್ನು ತರಲಾಗುತ್ತಿದೆ. ಸಂಸ್ಥೆಯ ಸಿಬ್ಬಂದಿಗಳು ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅತೀ ಅವಶ್ಯಕವಾಗಿದೆ. ಸಮಯದ ಸರಿಯಾದ ಬಳಕೆ ಮಾಡಿ ನಾವು ಯಾವುದಕ್ಕೆ ಆದ್ಯತೆ ನೀಡುತ್ತಿದ್ದೇವೆ ಎಂದು ತಿಳಿದುಕೊಂಡು, ಕರ್ತವ್ಯದ ಹೊರತಾಗಿ ಬೇರೆ ಬೇರೆ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು ಅವಶ್ಯವಾಗಿದೆ ಎಂದು ತಿಳಿಸಿ ಕ್ರೀಡೆಗಳಲ್ಲಿ ಭಾಗವಹಿಸಿದ ಎಲ್ಲ ಅಧಿಕಾರಿ/ಸಿಬ್ಬಂದಿಗಳಿಗೆ ಶುಭ ಹಾರೈಸಿದರು.   

ಸಮಾರಂಭಕ್ಕೆ ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ಅಂತರಾಷ್ಟ್ರೀಯ ಕುಸ್ತಿ ಪಟು ಆದ ಕುಮಾರಿ ಪ್ರೇಮಾ ಹುಚ್ಚಣ್ಣವರ.ರವರು   

ಕ್ರೀಡಾಪಟುಗಳಿಗೆ ಕ್ರೀಡಾ ಪ್ರತಿಜ್ಞಾ ವಿಧಿ ಭೋಧಿಸಿದರು. ನಂತರ ಮಾತನಾಡಿ ಈ ಕ್ರೀಡಾಕೂಟವು ತುಂಬಾ ಅಚ್ಚುಕಟ್ಟಾಗಿ ನಡೆಯುತ್ತಿದೆ ಕ್ರೀಡೆಗಳಲ್ಲಿ ಭಾಗವಹಿಸಿದ ಎಲ್ಲ ಅಧಿಕಾರಿ/ಸಿಬ್ಬಂದಿಗಳಿಗೆ ಶುಭ ಹಾರೈಸಿ ತಮ್ಮ ಕ್ರೀಡಾ ಜೀವನದ ಅನುಭವಗಳನ್ನು ಹಂಚಿಕೊಂಡರು.   

ಈ ಅಂತರ್ ವಿಭಾಗೀಯ ಕ್ರೀಡಾ ಮತ್ತು ಕಲಾ ಚಟುವಟಿಕೆಗಳಲ್ಲಿ ಸಂಸ್ಥೆಯ ವ್ಯಾಪ್ತಿಯ ಹುಬ್ಬಳ್ಳಿ ಗ್ರಾಮಾಂತರ, ಹು-ಧಾ ನಗರ ಸಾರಿಗೆ, ಧಾರವಾಡ ಗ್ರಾಮಾಂತರ, ಬೆಳಗಾವಿ, ಗದಗ, ಹಾವೇರಿ, ಬಾಗಲಕೋಟೆ, ಚಿಕ್ಕೋಡಿ, ಉತ್ತರ ಕನ್ನಡ, ಪ್ರಾದೇಶಿಕ ಕಾರ್ಯಾಗಾರ ಮತ್ತು ಕೇಂದ್ರ ಕಛೇರಿಯ ಅಧಿಕಾರಿ/ಸಿಬ್ಬಂದಿಗಳು ಭಾಗವಹಿಸಿದ್ದರು. ಸಮಾರಂಭದಲ್ಲಿ ಭದ್ರತಾ ಸಿಬ್ಬಂದಿಗಳು ಹಾಗೂ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಸಿಬ್ಬಂದಿಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು.  

ಕಾರ್ಯಕ್ರಮದಲ್ಲಿ ಇಲಾಖಾ ಮುಖ್ಯಸ್ಥರಾದ ವಿವೇಕಾನಂದ ವಿಶ್ವಜ್ಞ, ಪಿ.ವೈ.ನಾಯಕ್, ಗಣೇಶ ರಾಠೋಡ,  ವಿಜಯಶ್ರೀ ನರಗುಂದ, ಪ್ರಸನ್ನಕುಮಾರ ಕೆ.ಬಾಳಾನಾಯಕ್, ಬಸವರಾಜ ಅಮ್ಮನ್ನವರ, ಬಿ.ಬೋರಯ್ಯ, ಮಾಲತಿ ಎಸ್‌.ಎಸ್, ಜಗದಂಬಾ ಕೋಪರ್ಡೆ, ಇಸ್ಮಾಯಿಲ್ ಕಂದಗಲ್, ವಿವಿಧ ವಿಭಾಗಗಳ ಹಿರಿಯ/ವಿಭಾಗೀಯ ನಿಯಂತ್ರಣಾಧಿಕಾರಿಗಳು ಹಾಗೂ ಅಧಿಕಾರಿಗಳಾದ ಜಿ.ವಿಜಯಕುಮಾರ, ಶ್ರೀನಾಥ.ಜಿ, ಎಂ.ಬಿ.ಕಪಲಿ, ದಶರಥ ಕೆಳಗೇರಿ, ಪಿ.ಆರಿ​‍್ಕರಣಗಿ, ಜಿ.ಹನುಮೇಗೌಡ ಮತ್ತು ಸಂಸ್ಥೆಯ ವ್ಯಾಪ್ತಿಯ 09 ವಿಭಾಗಗಳ ಅಧಿಕಾರಿ/ಸಿಬ್ಬಂದಿಗಳು, ಕಾರ್ಮಿಕ ಮುಖಂಡರು ಉಪಸ್ಥಿತರಿದ್ದರು. ಮುಖ್ಯ ಕಾರ್ಮಿಕ ಕಲ್ಯಾಣಾಧಿಕಾರಿಗಳಾದ ಪಿ.ವೈ.ನಾಯಕ ರವರು ಸ್ವಾಗತಿಸಿದರು. ಮುಖ್ಯ ಸಂಚಾರ ವ್ಯವಸ್ಥಾಪಕರಾದ ವಿವೇಕಾನಂದ ವಿಶ್ವಜ್ಞ ರವರು ವಂದನಾರೆ​‍್ಣ ಮಾಡಿದರು. ಸುನೀಲ ಪತ್ರಿ ರವರು ಕಾರ್ಯಕ್ರಮವನ್ನು ನಿರೂಪಿಸಿದರು ಎಂದು ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ಶಿವಾನಂದ ನಾಗವಿ ರವರು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.  ಸದರಿ ಸುದ್ಧಿಯನ್ನು ಸಾರ್ವಜನಿಕರ ಗಮನಕ್ಕೆ ಬರುವಂತೆ ಜಿಲ್ಲೆಯ ಎಲ್ಲಾ ಜನಪ್ರಿಯ ದೃಶ್ಯ ಹಾಗೂ ಮುದ್ರಣ ಮಾಧ್ಯಮಗಳಲ್ಲಿ ಸಾರ್ವಜನಿಕ ಸುದ್ಧಿ ಎಂದು ಪ್ರಕಟಿಸಲು ಈ ಮೂಲಕ ಕೋರಲಾಗಿದೆ. 


ಸುದ್ದಿ ಓದಿ