ಡಿಜಿಟಲ್ ಮೀಡಿಯಾ, ಪತ್ರಿಕಾ ಮಾಧ್ಯಮ ಸಂಘದ ಉದ್ಘಾಟನೆ
ರಾಣೆಬೆನ್ನೂರು 24: ಸ್ವಾತಂತ್ರ ಬಂದು ಎಪ್ಪತ್ತೈದು ವರ್ಷ ಕಳೆದರೂ, ಸಮಾನತೆಯ ಹರಿಕಾರ ಡಾ :ಬಿ..ಆರ್.ಅಂಬೇಡ್ಕರ್ ಸಾಂವಿಧಾನಿಕವಾಗಿ ಕೊಟ್ಟ ಸಮಾನತೆ ಅವಕಾಶಗಳು ದಕ್ಕಿಲ್ಲ ಎಂದು ಸಾಮಾಜಿಕ ಹೋರಾಟಗಾರ್ತಿ ಹಾವೇರಿಯ, ಅಕ್ಷತಾ ಕೆ.ಸಿ. ಕಿಡಿಕಾರಿದರು. ಅವರು ಇಲ್ಲಿನ ಲಲಿತ ಭವನದಲ್ಲಿ ನಡೆದ ಡಿಜಿಟಲ್ ಮೀಡಿಯಾ ಮತ್ತು ಪತ್ರಿಕಾ ಮಾಧ್ಯಮ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಕಾಯರ್ಾಂಗ, ನ್ಯಾಯಾಂಗ, ಶಾಸಕಾಂಗ, ತಪ್ಪಿ ನಡೆದರೆ ಅದನ್ನು ತಿದ್ದಿ ಸರಿದಾರಿಗೆ ತರುವ ಬಹುದೊಡ್ಡ ಜವಾಬ್ದಾರಿ ನಾಲ್ಕನೇ ಅಂಗವಾಗಿರುವ ಪತ್ರಿಕಾರಂಗಕ್ಕಿದೆ, ಆದರೆ ಪತ್ರಿಕೆಗಳು, ಬಂಡವಾಳಶಾಹಿಗಳ ಮಾಲಿಕತ್ವದಲ್ಲಿ ಸಿಲುಕಿ, ಪಾವಿತ್ರತೆ ಮರೆಯುತ್ತೇವೆ ಇದರಿಂದ ದೇಶಕ್ಕೆ ಬಹುದೊಡ್ಡ ಅನಾಹುತ ತಪ್ಪಿದ್ದಲ್ಲ ಎಂದು ಅಕ್ಷತಾ ವಿಷಾದಿಸಿದರು. ಸಂಘದ ಅಧ್ಯಕ್ಷ ಬಿರೇಶ ಪೂಜಾರ್, ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವಕೀಲರ ಸಂಘದ ಅಧ್ಯಕ್ಷ, ಬಿ.ಹೆಚ್. ಬುರಡಿಕಟ್ಟಿ ಒಂದೇ ಮಾತರಂ ಸ್ವಯಂ ಸೇವಾ ಸಂಸ್ಥೆ ಅಧ್ಯಕ್ಷ ಪ್ರಕಾಶ್ ಬುರಡಿಕಟ್ಟಿ, ಡಾ: ಬಸವರಾಜ ಕೇಲಗಾರ, ಡಾ. ಪರಮೇಶ್ ಹುಬ್ಬಳ್ಳಿ, ಡಾ. ರಾಜೇಶ್ವರಿ ಕದರಮಂಡಲಗಿ, ಯುವ ಮುಖಂಡ ಮಂಜುನಾಥ ಗೌಡ ಶಿವಣ್ಣನವರ, ನ್ಯಾಯವಾದಿ ನಾಗರಾಜ ಕುಡುಪಲಿ, ಗೌರವಾಧ್ಯಕ್ಷ ಗಣೇಶ ನಂದಿಗಾವಿ,ರೈತಮುಖಂಡ ಹನುಮಂತಪ್ಪ ಕಬ್ಬಾರ, ನಿತ್ಯಾನಂದ ಕುಂದಾಪುರ, ಕೊಟ್ರೇಶಪ್ಪ ಎಮ್ಮೆ,, ರವೀಂದ್ರ ಗೌಡ ಪಾಟೀಲ್, ಡಿಹಿರೇಮಠ, ಪತ್ರಕರ್ತರಾದ ಹಾಲೇಶ ಶಿವಪ್ಪನವರ, ಮುತ್ತೇಶ್ ಕೂರಗುಂದ ಮಠ, ಕೆ.ಎಸ್. ನಾಗರಾಜ, ಶಿವಕುಮಾರ್ ಓಲೆಕಾರ್, ನಾಗರಾಜ ಹಾವನೂರ ಸೇರಿದಂತೆ ಮತ್ತಿತರರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದುದ್ದಕ್ಕೂ ನಡೆದ ಜೂನಿಯರ್ ವಿಷ್ಣುವರ್ಧನ್ ಮತ್ತು ತಂಡದವರು ಸಾದರಪಡಿಸಿದ ವಿಷ್ಣು ಚಲನಚಿತ್ರದ ಅಭಿನಯದ ದೃಶ್ಯಗಳು ಮತ್ತು ನಾಡಿನ ಸುಗಮ ಸಂಗೀತ ಕಲಾವಿದರಾದ ಪ್ರಕಾಶ್ ಗಚ್ಚಿನಮಠ, ಅನಸೂಯಾ ರಾಥೋಡ, ವೀಣಾ ಕಾಮಟೆ ಇವರ ಸಂಗೀತ ಕಾರ್ಯಕ್ರಮವೂ ಸೇರಿದ ಸಹಸ್ರಾರು ನಾಗರಿಕರ ಗಮನ ಸೆಳೆದವು. ವೇದಿಕೆಯಲ್ಲಿ ಸಂಘದ ಸದಸ್ಯರಾದ, ಅನಿಲ್ ಶಾಸ್ತ್ರಿ, ಮಾರುತಿ ಮುಂಡರಗಿ, ನಿಂಗಪ್ಪ ಗುದ ಗೇರ್, ಮಾಲತೇಶ್ ಕನಕಪ್ಪನವರ, ಮಂಜುನಾಥಸ್ವಾಮಿ ಮನಿಮಠ, ರುದ್ರಗೌಡ ಪಾಟೀಲ್, ಮಂಜುನಾಥ ಬಾಕರ್ಿ, ರಮೇಶ ಮಲ್ಲಾಡದ, ನಾಗರಾಜ್ ಪಾಟೀಲ್ ಉಪಸ್ಥಿತರಿದ್ದರು. ಅನಸೂಯಾ ಸಂಗಡಿಗರು ಪ್ರಾರ್ಥಿ ಸಿದರು. ಉಪಾಧ್ಯಕ್ಷ ವಾಗೀಶ ಹುಲ್ಲತ್ತಿ ಸ್ವಾಗತಿಸಿದರು. ಕಾರ್ಯದರ್ಶ ರಾಜು ತಳವಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ರೋಹಿಣಿ ಕೊಪ್ಪದ ನಿರೂಪಿಸಿ, ರುದ್ರಗೌಡ ಪಾಟೀಲ್ ವಂದಿಸಿದರು