ಕಾಗವಾಡ

ಬೌದ್ಧಿಕ ಆಸ್ತಿಯ ಹಕ್ಕಿನ ಅನುಕರಣೆ ಅಸಾಧ್ಯ: ಪಾಟೀಲ

ಬೌದ್ಧಿಕ ಆಸ್ತಿಯ ಹಕ್ಕಿನ ಅನುಕರಣೆ ಅಸಾಧ್ಯ: ಪಾಟೀಲ

ಶೇಡಬಾಳ 11: ಮಾನವನ ಬುದ್ಧಿ ಶಕ್ತಿಯ ಅಮೂರ್ತ ಸೃಷ್ಠಿಯನ್ನು ಒಳಗೊಂಡಿರುವ ಆಸ್ತಿಯ ಒಂದು ವರ್ಗವಾಗಿ ಬೌದ್ಧಿಕ ಆಸ್ತಿಯ ಹಕ್ಕು ಬೆಳೆದು ಬಂದಿವೆ. ಇದು ಸ್ವಂತಿಕೆಯನ್ನು ಮೈಗೂಡಿಸಿ ಕೊಂಡಿದ್ದು, ಸುಲಭವಾಗಿ ಯಾರು ಇದನ್ನು ಅನುಕರಣೆ ಅಥವಾ ಕದಿಯಲು ಸಾಧ್ಯವಿಲ್ಲ ಎಂದು ಸಂಕೇಶ್ವರ ಎಸ್ಎಸ್ಎಸ್ಎನ್ ಮಹಾವಿದ್ಯಾಲಯದ ರಾಜ್ಯಶಾಸ್ತ್ರ ಪ್ರಾಧ್ಯಾಪಕರಾದ ಪ್ರೊ. ಬಿ.ಜಿ. ಪಾಟೀಲ ಹೇಳಿದರು.

ಅವರು ಮಂಗಳವಾರ ದಿ. 11ರಂದು ಕಾಗವಾಡ ಶಿವಾನಂದ ಮಹಾವಿದ್ಯಾಲಯದಲ್ಲಿ ಆಯ್ಕ್ಯುಎಸಿ, ರಾಜ್ಯಶಾಸ್ತ್ರ ವಿಭಾಗ ಹಾಗೂ ಸಮಾಜ ವಿಜ್ಞಾನ ಸಂಘಗಳ ಸಹಯೋಗದಲ್ಲಿ ಜರುಗಿದ ಬೌದ್ಧಿಕ ಆಸ್ತಿಯ ಹಕ್ಕಿನ ಸಂರಕ್ಷಣೆ ಕುರಿತು ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡುತ್ತಿದ್ದರು. 

 ಕೃತಿಸ್ವಾಮ್ಯ, ಪೇಟೇಂಟ್, ಟ್ರೆಡ್ಮಾಕರ್್ಗಳು, ಕೈಗಾರಿಕಾ ವಿನ್ಯಾಸಗಳು, ಭೌಗೋಳಿಕ ಸೂಚನೆಗಳು ವ್ಯಾಪಾರ ರಹಸ್ಯಗಳು ವಿವಿಧ ರೀತಿಯ ಬೌದ್ಧಿಕ ಆಸ್ತಿಗಳು ಪ್ರಚಲಿತದಲ್ಲಿದ್ದು, ಅವುಗಳ ಕುರಿತು ತಿಳುವಳಿಕೆ ಹಾಗೂ ಸಂರಕ್ಷಣೆ ಕುರಿತು ಪ್ರಸ್ತುತ ಸಂದರ್ಭದಲ್ಲಿ ಅವಶ್ಯಕವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ಪ್ರೊ. ವ್ಹಿ.ಎಸ್. ತುಗಶೆಟ್ಟಿ ಭಾರತದಲ್ಲಿ ಆಯ್ಪಿಗಳನ್ನು ವಿವಿಧ ಕಾನೂನುಗಳ ಅಡಿಯಲ್ಲಿ ರಕ್ಷಿಸಲಾಗಿದೆ ಅವುಗಳಲ್ಲಿ ಕೆಲವು ಕೃತಿಸ್ವಾಮ್ಯ ಕಾಯ್ದೆ 1957 ಇದು 2012 ರಲ್ಲಿ ಅಗತ್ಯ ತಿದ್ದುಪಡಿಗಳೊಂದಿಗೆ ಇದೆ. ಜೊತೆಗೆ ಟ್ರೆಡ್ ಮಾಕರ್್ ಆಕ್ಟ್ 1999, ಡಿಸೈನ್ ಆಕ್ಟ್ 2000, ಪೇಟೇಂಟ್ ಆಕ್ಟ್ 2005 ಇವು ಆಯ್ಪಿಆರ್ನ್ನು ಸಂರಕ್ಷಿಸುವ ಕಾಯ್ದೆಗಳಾಗಿವೆ ಎಂದರು. ಕಾವೇರಿ ಬ್ಯಾಕೂಡ ಪ್ರಾಥರ್ಿಸಿದರು. ಆಯ್ಕ್ಯುಎಸಿ ಸಂಯೋಜಕ ಡಾ.ಎಸ್.ಪಿ. ತಳವಾರ ಸ್ವಾಗತಿಸಿ, ಪರಿಚಯಿಸಿದರು. ಡಾ. ಎಸ್.ಎ.ಕಕರ್ಿ ವಂದಿಸಿದರು. ಪ್ರೊ.ಎಸ್.ಎಂ. ಘೋರ್ಪಡೆ ನಿರೂಪಿಸಿದರು. ಮಹಾವಿದ್ಯಾಲಯದ ವಿದ್ಯಾಥರ್ಿಗಳು ಹಾಗೂ ಬೋಧಕ-ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು 

ಸುದ್ದಿ ಓದಿ