ಶಾಸಕ ಪಿಟಿಪಿ ವಿರುದ್ಧ ಅಕ್ರಮ ಆಸ್ತಿ ಗಳಿಕೆ : ಕೊಂಡಯ್ಯ ಆರೋಪ
ಲೋಕದರ್ಶನ ವರದಿ
ಹೂವಿನಹಡಗಲಿ05: ನಾಲ್ಕು ಬಾರಿ ಶಾಸಕರಾದ ಪಿ.ಟಿ.ಪರಮೇಶ್ವರನಾಯ್ಕ ಈವರೆಗೂ ಸರ್ಕಾರ ನೀಡಿದ ಸಂಬಳ 5ರಿಂದ 6ಕೋಟಿ ಆಗಬಹುದು ಆದರೆ ಕ್ಷೇತ್ರದ ಅಭಿವೃದ್ಧಿ ಮಾಡದೇ ಕೋಟಿ ಕೋಟಿ ಹಣವನ್ನು 22ಜನರ ಬೇನಾಮಿ ಹೆಸರಿನಲ್ಲಿ ಅಕ್ರಮ ಆಸ್ತಿಗಳಿಕೆ,ಅನೈತಿಕ ಸಂಬಂಧಗಳೇ ಹೆಚ್ಚಾಗಿವೆ ಎಂದು ಎಂದು ದಾಖಲೆ ಸಮೇತವಾಗಿ ಶಾಸಕರ ವಿರುದ್ಧ ಸ್ವಪಕ್ಷದ ಮಾಜಿ ಸಂಸದ ಕೆ.ಸಿ.ಕೊಂಡಯ್ಯ ಆರೋಪಿಸಿದ್ದಾರೆ.
ಪಟ್ಟಣದಲ್ಲಿ ಶನಿವಾರ ಕಾಯಕ ಭವನದಲ್ಲಿ ಬೇನಾಮಿ ಹೆಸರಿನಲ್ಲಿ ಅಕ್ರಮ ಆಸ್ತಿ,ಅನೈತಿಕ ಸಂಬಂಧ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಅಕ್ರಮ ಆಸ್ತಿ ಬಗ್ಗೆ ದಾಖಲೆ ಸಂಗ್ರಹ ಮಾಡಿದ್ದಾನೆ ಎಂದ ಅವರು ಅಕ್ರಮ ಆಸ್ತಿಯನ್ನು ಬೇನಾಮಿ ಹೆಸರಿನಲ್ಲಿರುವವರು ಯಾರು ಸಹ ತಮ್ಮ ಆಸ್ತಿಯನ್ನು ವಾಪಾಸ್ಸು ಕೊಡಬೇಡಿ ಎಂದು ಪತ್ರಿಕೆ ಮೂಲಕ ಅವರಿಗೆ ಮನವಿ ಮಾಡಿದ ಅವರು ಲೋಕಾಯುಕ್ತ ಹಾಗೂ ಸಿಬಿಐ ಯಾಕೆ ಸುಮ್ಮನೆ ಬಿಟ್ಟಿದೆಯೋ ಗೊತ್ತಿಲ್ಲ.ಇವರ ಎಲ್ಲ ಅಕ್ರಮ ಆಸ್ತಿ ಸೇರಿದಂತೆ ದಾಖಲೆ ಸಮೇತ ಸಂಬಂಧಪಟ್ಟವರಿಗೆ ಸಲ್ಲಿಸುವುದಾಗಿ ತಿಳಿಸಿದರು.
ನಾಲ್ಕು ಬಾರಿ ಶಾಸಕರಾಗಿದ್ದ ಪಿ.ಟಿ.ಪರಮೇಶ್ವರನಾಯ್ಕ ಅಕ್ರಮ ಆಸ್ತಿಯಲ್ಲಿ ಬೇನಾಮಿ ಹೆಸರಿನಲ್ಲಿರುವ ಚಂದ್ರನಾಯ್ಕ, ಮಂಜುಳಾ ಕೋಮಿನಾಯ್ಕ, ಕುಮಾರ ನಾಯ್ಕ, ಉಮೇಶನಾಯ್ಕ, ಐಗೋಳ ಚಿದಾನಂದ, ಆನಂದನಾಯ್ಕ ಸೇರಿದಂತೆ 22ಜನರ ಹೆಸರಿನಲ್ಲಿ ಅಕ್ರಮ ಆಸ್ತಿ ಗಳಿಕೆ ಮಾಡಿದ್ದಾನೆ ಜತೆಗೆ ಹೂವಿನಹಡಗಲಿ,ಹರಪನಹಳ್ಳಿ,ದಾವಣಗೆರೆ,ಬೆಂಗಳೂರು ಸೇರಿ ನಾನಾ ಕಡೆಗಳಲ್ಲಿ ಬಂಗಾಲೆ,ನಿವೇಶನ,ಕಲ್ಯಾಣ ಮಂಟಪ,ಕ್ರಶರ್,ಖಾಲಿ ನಿವೇಶನ ಹೊಂದಿರುವ ಶಾಸಕರ ಎಲ್ಲ ವಿಚಾರಗಳನ್ನು ನಾನು ಕಾಂಗ್ರೆಸ್ಗೆ ಸಲ್ಲಿಸಿದ್ದಾನೆ.ಇಂತಹ ವ್ಯಕ್ತಿಗೆ ಜನ ಹಾಗೂ ಪಕ್ಷ ಪ್ರೋತ್ಸಾಹಿಸಬಾರದು. ದೌರ್ಜನ್ಯ,ದಬ್ಬಾಳಿಕೆ ಮುಂದಿನ ಚುನಾವಣೆಯಲ್ಲಿ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಶಾಸಕರ ವಿರುದ್ಧ ಕ್ಷೇತ್ರದಲ್ಲಿ ಪಕ್ಷದಿಂದ ಟಿಕೆಟ್ ಕೇಳುವ ಗಂಡು ಯಾರೂ ಇಲ್ಲ ಎಂದಿದ್ದರು. ಇಂದು ಏಳು ಜನ ಚುನಾವಣೆಯಲ್ಲಿ ಸ್ಪರ್ಧಿಸಲು ಮುಂದಾಗಿದ್ದಾರೆ.ಆದರೆ ಹೊಸಬರಿಗೆ ಪಕ್ಷ ಅವಕಾಶ ಕಲ್ಪಿಸಬೇಕು.ಕ್ಷೇತ್ರದಲ್ಲಿ ಹಿಂದುಳಿದ ಜನಾಂಗದ ವ್ಯಕ್ತಿಗೆ ಅವಕಾಶಗಳು ಲಭಿಸಲಿ ಎಂದ ಅವರು 15ವರ್ಷದಲ್ಲಿ ಒಂದು ಉದ್ಯೋಗ ಮೇಳ ಮಾಡದ ಶಾಸಕ ಪಿಟಿ.ಪರಮೇಶ್ವರನಾಯ್ಕ ಅಕ್ರಮ ಆಸ್ತಿ ಮಾಡಿದ್ದಾನೆ, ಕೃಷ್ಣನಾಯ್ಕ ಅವರ ಸಮಾಜ ಸೇವೆ, ಉದ್ಯೋಗ ಮೇಳ ಮಾಡುವ ಮೂಲಕ ಇಂತಹ ನಾಯಕರು ಬೇಕಾಗಿದೆ.ಈಗಾಗಲೇ ಕಾಂಗ್ರೆಸ್ ಹೈಕಮಾಂಡಗೆ ಕಾಂಗ್ರೆಸ್ ಟಿಕೆಟ್ ಕೊಡಬಾರದು ಎಂದು ವರಿಷ್ಠರಿಗೆ ಮನವಿ ಮಾಡಲಾಗಿದೆ ಎಂದ ಅವರು ಮಲ್ಲಿಗೆ ಹೂವಿನ ಸಸಿ ಬೆಳೆಸಿದರೇ ಅದು ಕಾಂಗ್ರೆಸ್ ಕಸವಾಗಿದೆ ಎಂದು ಟೀಕಿಸಿದರು.
ಶೆಣೈ ಪ್ರಕರಣ : ಪಿಟಿ.ಪರಮೇಶ್ವರನಾಯ್ಕ ಬಳ್ಳಾರ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಅವಧೀಯಲ್ಲಿ ಕೂಡ್ಲಿಗಿ ಡಿವೈಎಸ್ಪಿ ಯಾಗಿ ಅನುಪಮಾ ಶಣೈ ಕರ್ತವ್ಯ ನಿರ್ವಹಿಸುತ್ತಿದ್ದರು.ತಮಗೆ ಪಿ.ಟಿ.ಪರಮೇಶ್ವರನಾಯ್ಕ ಅವರು ಕಿರುಕುಳ ನೀಡುತ್ತಿದ್ದಾರೆ ಅನಗತ್ಯ ಪ್ರಕರಣದಲ್ಲಿ ಒತ್ತಡ ಹಾಕುತ್ತಿದ್ದರು ಎಂದು ಶೆಣೈ ಅವರು ದೂರಿದ್ದರು. ನಾಯ್ಕ ವರ್ತನೆ ಬೇಸತ್ತ ಶೆಣೈ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು ನಂತರ ಸಚಿವ ಸ್ಥಾನವನ್ನು ಕಳೆದುಕೊಂಡರು ಎಂದು ಕೊಂಡಯ್ಯನವರು ಆರೋಪಿಸಿದ ಅವರು ಹರಪನಹಳ್ಳಿಯಲ್ಲಿ ಆರ್.ಟಿ.ಐ ಕಾರ್ಯಕರ್ತರಾದ ಹತ್ಯೆ ಬಗ್ಗೆ ತನಿಖೆಯಾಗಬೇಕೆಂದು ಒತ್ತಾಯಿಸಲಾಗುವುದು ಎಂದರು. ಈ ವೇಳೆ ಮಾಜಿ ಶಾಸಕ,ಮಹಾತ್ಮಗಾಂಧಿ ನಗರ ಮತ್ತು ಗ್ರಾಮೀಣಾಧಿವೃದ್ದಿ ಸೇವಾ ಟ್ರಸ್ಟ್ ಅಧ್ಯಕ್ಷ ನಂದಿಹಳ್ಳಿ ಹಾಲಪ್ಪ,ಪ್ರಧಾನ ಕಾರ್ಯದರ್ಶಿ ಕೃಷ್ಣನಾಯ್ಕ ಇದ್ದರು.