ಕಾಗವಾಡ

ವಿದ್ಯಾರ್ಥಿಗಳಿಗೆ ಯಶಸ್ಸು ಕಾಣಬೇಕಾದರೆ ಛಲವಿರಬೇಕು: ಮಾಜಿ ಶಾಸಕ ರಾಜು

ವಿದ್ಯಾರ್ಥಿಗಳಿಗೆ ಯಶಸ್ಸು ಕಾಣಬೇಕಾದರೆ ಛಲವಿರಬೇಕು: ಮಾಜಿ ಶಾಸಕ ರಾಜು

ಕಾಗವಾಡ೨೫ : ಇಂದಿನ ದಿನಮಾನಗಳಲ್ಲಿ ವಿದ್ಯಾರ್ಥಿಗಳಿಗೆ ಯಶಸ್ಸು ಕಾಣಬೇಕಾದರೆ ಛಲವಿರಬೇಕು ಎಂದು ಮಾಜಿ ಶಾಸಕ ರಾಜು ಕಾಗೆ ಹೇಳಿದರು.

ಸಿದ್ಧೇಶ್ವರ ದೇವಾಲಯ ಸಭಾ ಭವನದಲ್ಲಿ  ಅ.23ರಂದು ನಳಠದ ಕೋಚಿಂಗ್ ಸೆಂಟರ್,  ಹಾಗೂ ರಾಜು ಅಣ್ಣಾ ಕಾಗೆ ಪೌಂಡೇಶನ್, ಕಾಗವಾಡ ಇವರ ವತಿಯಿಂದ ಮುಕ್ತ ಸ್ಪಧರ್ಾತ್ಮಕ ಪರೀಕ್ಷೆ ಹಾಗೂ ಬಹುಮಾನ ವಿತರಣೆ ಸಮಾರಂಭವು ಜರುಗಿತು.

ಪ್ರಸ್ತುತ ದಿನಮಾನಗಳು ಹೆಚ್ಚು ತಂತ್ರಜ್ಞಾನದಿಂದ ಕೂಡಿದೆ ಇದರಿಂದಾಗಿ ಜಗತ್ತಿನಲ್ಲಿ ಸ್ಫರ್ಧೆಗಳು ನಡೆಯುತ್ತಿವೆ ಅದರಂತೆ ವಿದ್ಯಾರ್ಥಿಗಳು ಯಶಸ್ವಿಯಾಗಿ ತಮ್ಮ ಜೀವನವನ್ನು ರೂಪಿಸಿಕೊಳ್ಳಬೇಕು ಎಂದರು.

ಮುಖಂಡರಾದ ಧರೆಪ್ಪ ಠಕ್ಕಣ್ಣವರ, ಸಿಪಿಐ ಬಸವರಾಜ್ ಬಿಸನಕೊಪ್ಪ, ರಾಜುಗೌಡ ಪಾಟೀಲ ಅರುಣ ಗಾಣಿಗೇರ, ಸಂಜಯ ಕುಚನೂರೆ,  ಪುಣ್ಯಕೋಟಿ ಪೌಂಡೇಶನ್ ಅಧ್ಯಕ್ಷರಾದ ಪ್ರವೀಣ ನಾಯಿಕ, ನಾಗರಾಜ ಮಜ್ಜಗಿ ಹಾಗೂ ಎಲ್ಲ ವಿದ್ಯಾರ್ಥಿಗಳು, ಪಾಲಕರು, ಶಿಕ್ಷಕರು  ಉಪಸ್ಥಿತರಿದ್ದರು.

 

ಸುದ್ದಿ ಓದಿ