ಧಾರವಾಡ - ಹುಬ್ಬಳ್ಳಿ

ಐಎಂಎ ಅಧ್ಯಕ್ಷರಾಗಿ ಡಾ. ಬಿರಾದಾರ ಉಪಾಧ್ಯಕ್ಷರಾಗಿ ಡಾ. ಸಜ್ಜನರ ಆಯ್ಕೆ

ಐಎಂಎ ಅಧ್ಯಕ್ಷರಾಗಿ ಡಾ. ಬಿರಾದಾರ ಉಪಾಧ್ಯಕ್ಷರಾಗಿ ಡಾ. ಸಜ್ಜನರ ಆಯ್ಕೆ

ಐಎಂಎ ಅಧ್ಯಕ್ಷರಾಗಿ ಡಾ. ಬಿರಾದಾರ ಉಪಾಧ್ಯಕ್ಷರಾಗಿ ಡಾ. ಸಜ್ಜನರ ಆಯ್ಕೆ  

ಹುಬ್ಬಳ್ಳಿ 04: ಭಾರತೀಯ ವೈದ್ಯಕೀಯ ಸಂಸ್ಥೆಯ (ಐಎಂಎ) ಹುಬ್ಬಳ್ಳಿ ಘಟಕಕ್ಕೆ ಹೊಸದಾಗಿ ಪದಾಧಿಕಾರಿಗಳನ್ನು ಐಎಂಎ ಸಭೆಯಲ್ಲಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. 2024-25ನೇ ಸಾಲಿನ ಅಧ್ಯಕ್ಷರಾಗಿ ಪಾಲಿಕೆ ನಿವೃತ್ ಆರೋಗ್ಯ ಅಧಿಕಾರಿ  ಡಾ. ಪಿ. ಎನ್‌. ಬಿರಾದಾರ ಹಾಗೂ ಉಪಾಧ್ಯಕ್ಷರಾಗಿ ಡಾ. ಬಸವರಾಜ ಸಜ್ಜನರ ಆಯ್ಕೆ ಆಗಿದ್ದಕ್ಕೆ ಖ್ಯಾತ ವೈದ್ಯರುಗಳಾದ ಡಾ.  ಪಿ. ಎನ್‌. ಬಿರಾದಾರ ಹಾಗೂ ಡಾ. ಬಸವರಾಜ ಸಜ್ಜನರ ಅವರಿಗೆ ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ, ಬಸವ ಪರಿಸರ ಸಂರಕ್ಷಣಾ ಸಮಿತಿಯ ವತಿಯಿಂದ ಶಾಲು, ಮಾಲಾರೆ​‍್ಣ ಮಾಡಿ, ಗ್ರಂಥಗಳನ್ನು, ಹಣ್ಣುಗಳನ್ನು ನೀಡಿ ಆತ್ಮೀಯವಾಗಿ ಗೌರವದಿಂದ ಹುತ್ಪೂರ್ವಕವಾಗಿ  ಸನ್ಮಾನಿಸಲಾಯಿತು. ಪ್ರೀತಿಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು.  

ಭಾರತೀಯ ವೈದ್ಯಕೀಯ ಸಂಸ್ಥೆ (ಐಎಂಎ) ರಾಜ್ಯ ಘಟಕದ ಮಾಜಿ ಉಪಾಧ್ಯಕ್ಷ, ಪಾಲಿಕೆ ನಿವೃತ್ ಆರೋಗ್ಯ ಅಧಿಕಾರಿ ಡಾ.ವಿ.ಬಿ.ನಿಟಾಲಿ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ‌್ಯದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ,  ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಅಧ್ಯಕ್ಷ, ನಿವೃತ್ ಪ್ರಾಚಾರ್ಯ ಪ್ರೊ ಎಸ್‌.ಎಂ.ಸಾತ್ಮಾರ, ಉಪಾಧ್ಯಕ್ಷ ಚನ್ನಬಸಪ್ಪ ಧಾರವಾಡಶೆಟ್ಟರ, ಮುಂತಾದವರು ಭಾಗವಹಿಸಿದ್ದರು.  

ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ ಅವರು ಮಾತನಾಡಿ ಡಾ.  ಪಿ. ಎನ್‌. ಬಿರಾದಾರ ಅವರ ಅವಧಿಯಲ್ಲಿ ಐಎಂಎ ಹುಬ್ಬಳ್ಳಿ ಘಟಕ ಸಾರ್ವಜನಿಕರ ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಹೆಚ್ಚು ರಚನಾತ್ಮಕ ಕಾರ್ಯಗಳು ಜರುಗಲಿ ಹಾಗೂ ಜನರಿಗೆ ಉತ್ತಮ ಆರೋಗ್ಯ ಸೇವೆಗಳು ಲಭ್ಯವಾಗಲಿ ಎಂದು ಅಭಿನಂದನೆಗಳನ್ನು ಸಲ್ಲಿಸಿದರು. ಶುಭ ಕೋರಿದರು. ಡಾ.ವಿ.ಬಿ.ನಿಟಾಲಿ, ಪ್ರೊ ಎಸ್‌.ಎಂ.ಸಾತ್ಮಾರ,ಡಾ.  ಪಿ. ಎನ್‌. ಬಿರಾದಾರ, ಡಾ. ಬಸವರಾಜ ಸಜ್ಜನರ ಅವರು ಮಾತನಾಡಿದರು. ಸರೋಜಾ, ಮುಂತಾದವರು ಇದ್ದರು. 


ಸುದ್ದಿ ಓದಿ