ರಾಣೆಬೆನ್ನೂರ

ಹುಬ್ಬಳ್ಳಿಯ ಸಿದ್ಧಾರೂಢರು ಸ್ವಯಂ ದೇವಿಯ ಸ್ವರೂಪವೇ: ಗುರು ನಾಗರಾಜಾನಂದ ಶ್ರೀ

ಹುಬ್ಬಳ್ಳಿಯ ಸಿದ್ಧಾರೂಢರು ಸ್ವಯಂ ದೇವಿಯ ಸ್ವರೂಪವೇ: ಗುರು ನಾಗರಾಜಾನಂದ ಶ್ರೀ

ರಾಣಿಬೆನ್ನೂರ25: ಹುಬ್ಬಳ್ಳಿಯ ಸಿದ್ಧಾರೂಢರು ಸ್ವಯಂ ದೇವಿಯ ಸ್ವರೂಪವೇ ಆಗಿದ್ದು, ಮನುಷ್ಯರಲ್ಲಿರುವ ದುರ್ಗುಣಗಳನ್ನು ದೂರ ಮಾಡಿ ಸಾತ್ವಿಕ ಗುಣಗಳನ್ನು ಮೈಗೂಡಿಸಿ ಕೊಳ್ಳುವ ಶಕ್ತಿ ತುಂಬಿದವರು, ದೇವಿಯ ಆರಾಧನೆಯಿಂದ ದುಷ್ಟಗುಣಗಳು ನಾಶವಾಗಿ ಸುಗುಣವಂತರಾಗಲು ಸಾಧ್ಯ ಎಂದು ಗುರು ನಾಗರಾಜಾನಂದ ಮಹಾಸ್ವಾಮಿಜಿಗಳವರು ಹೇಳಿದರು.

    ರವಿವಾರ ತಾಲೂಕಿನ ಸುಕ್ಷೇತ್ರ ಖಂಡೇರಾಯನಹಳ್ಳಿಯ ಸಿದ್ಧಾರೂಢ ಮಠದಲ್ಲಿ ಲೋಕ ಕಲ್ಯಾಣಾರ್ಥವಾಗಿ ಏರ್ಪಡಿಸಲಾಗಿದ್ದ 28ನೇ ವರ್ಷದ ದೇವಿ ಪುರಾಣ ಪ್ರವಚನದ ಮಂಗಲ ಮತ್ತು ಗಾಯತ್ರಿ ಹೋಮ, ಹವನ ಹಾಗೂ ಪೂಜಾ ವಿಧಿವಿಧಾನಗಳು ನಡೆದ ನಂತರ ಹೋಮಕ್ಕೆ ಪೂರ್ಣಾಹುತಿ ಸಲ್ಲಿಸಿ ಆಶೀರ್ವಚನ ನೀಡಿದ ಅವರು, ಆರೂಢ ಪರಂಪರೆಯ ಮಠಗಳು ತನ್ನನ್ನು ತಾನು ಮೊದಲು ತಿಳಿಯಲು ಜ್ಞಾನದ ಅಮೃತ ಧಾರೆಯನ್ನ ಉಣಿಸುತ್ತಾ ಬಂದಿವೆ ಎಂದು ನುಡಿದರು.

   ಅದ್ವೈತ ಜ್ಞಾನದಿಂದ ಜನಸಾಮಾನ್ಯರು ಮುಕ್ತಿಯ ಮಾರ್ಗವನ್ನು ಪಡೆಯಲು ಸದಾ ಗುರುಚಿಂತನೆ ಹಾಗೂ ಗುರುಮಾರ್ಗದಲ್ಲಿ ನಡೆದರೆ ಮಾತ್ರ ಸಾಧ್ಯ. ಎಲ್ಲ ನದಿಗಳು ಸಮುದ್ರವನ್ನು ಸೇರುವಂತೆ ಎಲ್ಲಾ ಮಠಗಳ ಉದ್ದೇಶ ಜನರನ್ನು ಮುಕ್ತಿ ಮಾರ್ಗದೆಡೆಗೆ ಕೊಂಡೊಯ್ಯುವುದೇ ಆಗಿದೆ ಎಂದರು.

    ತೇತ್ರಾಯುಗದಲ್ಲಿ ಶ್ರೀರಾಮಚಂದ್ರನು ನಾರದ ಮುನಿಗಳ ಮಾರ್ಗ ದರ್ಶನದಂತೆ ನವರಾತ್ರಿ ವೃತವನ್ನು ಆಚರಿಸಿ ರಾವಣನನ್ನು ಸಂಹರಿಸಲು ಹಾಗೂ ದ್ವಾಪರ ಯುಗದಲ್ಲಿ ಶ್ರೀ ದೇವತೆಯನ್ನು ಪೂಜಿಸಿ ಆರ್ಶಿವಾದ ಪಡೆದಿದ್ದುದರಿಂದ ಪಾಂಡವರು ದುಷ್ಟರಿಂದ ಬಿಡುಗಡೆ ಹೊಂದಿದರೆಂದು ಮಹಾಭಾರತದಲ್ಲಿ ನಾವು ನೋಡುತ್ತೇವೆ. ಆ ಸಂಕೇತವಾಗಿ ಇಂದು ನಾವು ದಸರಾ ಉತ್ಸವವನ್ನು ಆಚರಿಸುತ್ತಿದ್ದೇವೆ ಎಂದು ಶ್ರೀಗಳು ತಿಳಿಸಿದರು. 

      ಚಳಗೇರಿಯ ವೇ. ಚನ್ನಯ್ಯ ಶಾಸ್ತ್ರಿಗಳು ಹಾಗೂ ಸಂಗಡಿಗರು ಸಿದ್ಧಾರೂಢ ಮೂರ್ತಿ ಹಾಗೂ ಗಾಯತ್ರಿ ದೇವಿ ಮೂರ್ತಿಗೆ ಬ್ರಹ್ಮಿಮೂರ್ತದಲ್ಲಿ ಅಭಿಷೇಕ್, ಬಿಲ್ವಾರ್ಚನೆ, ವಿವಿಧ ಹೂವುಗಳ ಅಲಾಂಕಾರದೊಂದಿಗೆ ಗಾಯತ್ರಿ ಹೋಮ, ಹವನ ಹಾಗೂ ನವಗ್ರಹ ಪೂಜಾ ವಿಧಿ ವಿಧಾನಗಳನ್ನು ಶತತ 3 ಗಂಟೆಗಳ ಕಾಲ ನಡೆಸಿ ಕೊಟ್ಟರು.

    ವಿಧಾಸಭಾ ಉಪಸಭಾ ಅಧ್ಯಕ್ಷ ಹಾಗೂ ಶ್ರೀಮಠದ ಕಾರ್ಯದರ್ಶಿ ರುದ್ರಪ್ಪ ಮಾನಪ್ಪ ಲಮಾಣಿ, ಶ್ರೀಮಠದ ಅಧ್ಯಕ್ಷ  ಫಕ್ಕೀರಪ್ಪ ಗೌಡ್ರ, ಡಾ. ಮೋಹನ ಹಂಡೆ,  ನ್ಯಾಯವಾದಿ ಎಂ.ಬಿ. ಚಿನ್ನಪ್ಪನವರ, ಗ್ರಾಪಂ ಮಾಜಿ ಅಧ್ಯಕ್ಷ ಜನಾರ್ಧನ ಕಡೂರು, ಅರುಣಸ್ವಾಮಿ ಹಿರೇಮಠ, ಗೋಪಾಲ ಕೊಡ್ಲೇರ, ಮಹೇಶ ಹನಗೋಡಿ, ಕರಬಸಪ್ಪ ಮಾಕನೂರ, ಡಾಕೇಶ ಲಮಾಣಿ, ಶಿವಪ್ಪ ಬಣಕಾರ, ಗುಡ್ಡಪ್ಪ ಹೆಡಿಯಾಲ, ಮಹಾದೇವಪ್ಪ ಬಣಕಾರ, ಗಂಗಾಧರ ಬಣಕಾರ, ಬಸನಗೌಡ ಮುದಿಗೌಡ್ರ, ಶಿವು ಗುತ್ತೂರ, ವಿಶ್ವನಾಥ ಕುಂಬಳೂರ, ಮೈಲಾರಪ್ಪ ಸೋಮಲಾಪುರ, ಮಲ್ಲಿಕಾಜುನ ಹಲಗೇರಿ ಸೇರಿದಂತೆ ಸಾವಿರಕ್ಕೂ ಅಧಿಕ ಭಕ್ತರು ಮತ್ತು ಮಹಿಳೆಯರು ಹೋಮದಲ್ಲಿ ಪಾಲ್ಗೊಂಡಿದ್ದರು.


ಸುದ್ದಿ ಓದಿ