ಶಿಗ್ಗಾವ್

ಮನೆಯ ಮೇಲ್ಛಾವಣಿ ಕುಸಿತ: ಪರಿಹಾರಕ್ಕೆ ಅಧಿಕಾರಿಗಳಿಗೆ ಸೂಚನೆ

ಮನೆಯ ಮೇಲ್ಛಾವಣಿ ಕುಸಿತ: ಪರಿಹಾರಕ್ಕೆ ಅಧಿಕಾರಿಗಳಿಗೆ ಸೂಚನೆ

ಲೋಕದರ್ಶನ ವರದಿ

ಶಿಗ್ಗಾವಿ 01: ಮನೆಯ ಮೇಲ್ಛಾವಣಿ ಕುಸಿದು ಭಾಗಶ ಮನೆಯು ಗೋಡೆಗಳು ಕುಸಿದು ಸಂಪೂರ್ಣ ಹಾನಿಯಾಗಿ ಅದೃಷ್ಟವಶಾತ್ ಭಾರಿ ಅನಾಹುತ ತಪ್ಪಿದಂತಾದ ಘಟನೆ ತಾಲೂಕಿನ ಬನ್ನೂರ ಗ್ರಾಮದಲ್ಲಿ ಬುಧವಾರ ನಡೆದಿದೆ.

ಗ್ರಾಮದ ಕುಟುಂಬಗಳಾದ ಸುಭಾಸಗೌಡ ದುಂಡಿಗೌಡ್ರ, ಸಿದ್ಲಿಂಗಗೌಡ ದುಂಡಿಗೌಡ್ರ, ಶಿವನಗೌಡ ದುಂಡಿಗೌಡ್ರ, ಬಸವಂತಗೌಡ ದುಂಡಿಗೌಡ್ರ ಹಾಗೂ ದ್ರಾಕ್ಷೇಡೆಪ್ಪ ದುಂಡಿಗೌಡ್ರ ಎಂಬ ಸುಮಾರ ಐದು ಕೂಡಿದ ಕುಟುಂಬಗಳು ಒಂದೇ ಮನೆಯಲ್ಲಿ ವಾಸಿಸುತ್ತಿದ್ದವು ಎನ್ನಲಾಗಿದ್ದು, ಕಳೆದ ಎರಡು ದಿನಗಳ ಹಿಂದೆ ಸುರಿದ ಮಳೆಗೆ ಮನೆಯು ಬೀಳುವ ಹಂತದಲ್ಲಿತ್ತು ಬುಧವಾರ ಬೆಳಿಗ್ಗೆ 12 ಘಂಟೆಗೆ ಮನೆಯ ಮೇಲ್ಚಾವಣಿ ಏಕಾಏಕಿ ಕುಸಿದಿದ್ದು ಆ ವೇಳೆಯಲ್ಲಿ ಮನೆಯಲ್ಲಿ ಹೆಚ್ಚಿನ ಜನರು ಇರಲಿಲ್ಲ, ಶಿವಗಂಗವ್ವ ಎಂಬುವ ಅಜ್ಜಿಗೆ ಗಾಯವಾಗಿದ್ದು ಉಸಿರಾಟದ ತೊಂದರೆಗೆ ಒಳಗಾಗಿದ್ದಾರೆ ಎನ್ನಲಾಗಿದೆ ಜೊತೆಗೆ ರೇವನಗೌಡ ದುಂಡಿಗೌಡ್ರ ಎಂಬುವವರಿಗೆ ಸೇರಿದ ಆಕಳು ಘಟನೆಯಲ್ಲಿ ಮೇಲ್ಛಾವಣಿ ಅಡಿಯಲ್ಲಿ ಸಿಲುಕಿ ಸಾವನ್ನಪ್ಪಿದೆ, ರಾಮನಗೌಡ ಎಂಬುವವರಿಗೆ ಸೇರಿದ ಆಕಳು ಕರು ಹಾಗೂ ರೇವಣಗೌಡ ಎಂಬುವವರಿಗೆ ಸೇರಿದ ಎಮ್ಮೆ ಕರುಗಳಿಗೆ ಗಂಭೀರ ಗಾಯಗಳಾಗಿವೆ.

ಮಾಜಿ ಸಿಎಂ ಬೊಮ್ಮಾಯಿ ಭೇಟಿ : ಕ್ಷೇತ್ರದ ಪ್ರವಾಸದಲ್ಲಿದ್ದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿಯವರು ಮಾಹಿತಿ ತಿಳಿದು ಬನ್ನೂರ ಗ್ರಾಮಕ್ಕೆ ಬೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು ಕೂಡಲೇ ಅಧಿಕಾರಿಗಳನ್ನು ಕರೆದು ಪ್ರತಿ ಮನೆಗೆ ಮನೆ ಕಟ್ಟಿಕೊಳ್ಳಲು ಐದು ಲಕ್ಷಗಳ ವಸತಿ ಪರಿಹಾರ ಹಾಗೂ ಸಾವನ್ನಪ್ಪಿದ ಆಕಳಿಗೆ ಪರಿಹಾರವಾಗಿ 37500 ರೂಗಳನ್ನು 24 ಘಂಟೆಗಳಲ್ಲಿ ಮಾಲೀಕನಿಗೆ ತಲುಪಿಸುವಂತೆ ಸೂಚಿಸಿದರು.

ಸೂಚನೆ ಮೇರೆಗೆ ಅಧಿಕಾರಿಗಳು ಭೇಟಿ : ಮಾಜಿ ಸಿಎಂ ಬೊಮ್ಮಾಯಿಯವರ ಸೂಚನೆಯ ಮೇರೆಗೆ ಸ್ಥಳಕ್ಕೆ ಸವಣೂರ ಎಸಿ ರಾಯಪ್ಪ ಹುಣಸಗಿ, ತಹಶೀಲ್ದಾರ ಸಂತೋಷ ಹಿರೇಮಠ, ಇಓ, ಆರ್ ಐ ಸೇರಿದಂತೆ ಪಶು ಆಸ್ಪತ್ರೆಯ ಸಿಬ್ಬಂದಿಗಳು ಬೇಟಿ ನೀಡಿ ಪರಿಹಾರಕ್ಕೆ ಕ್ರಮ ಜರುಗಿಸಿದರು. 

 ಮುಖಂಡರಾದ ಶ್ರೀಕಾಂತ ದುಂಡಿಗೌಡ್ರ, ತಿಪ್ಪಣ್ಣ ಸಾತಣ್ಣವರ, ಶಶಿಧರ ಹೊನ್ನಣ್ಣವರ, ಟಾಕನಗೌಡ ಪಾಟೀಲ, ಉಮೇಶ ಅಂಗಡಿ, ಸೇರಿದಂತೆ ಸ್ಥಳೀಯ ಮುಖಂಡರು ಹಾಗೂ ಅಧಿಕಾರಿಗಳು ಇದ್ದರು.

** ಇಂತಹ ಮನೆಗಳು ತಾಲೂಕಿನಾದ್ಯಂತ ಬಹಳಷ್ಟು ಇದ್ದು, ಅಧಿಕಾರಿಗಳು ಗುರುತಿಸಿ ಮನೆ ಕಟ್ಟಿಕೊಳ್ಳಲು ಪರಿಹಾರದ ಅನುಕೂಲ ಮಾಡಬೇಕು ಅಂದಾಗ ಇಂತಹ ಘಟನೆಗಳು ಮರುಕಳಿಸದಂತೆ ಹೆಚ್ಚರ ವಹಿಸಬಹುದು.

 -ಶ್ರೀಕಾಂತ ದುಂಡಿಗೌಡ 

ಸುದ್ದಿ ಓದಿ