ಕಾಗವಾಡ

ಕಟ್ಟಡ ಕಾರ್ಮಿಕ ರ ಶ್ರಮ ಅತ್ಯಂತ ಮಹತ್ವದ್ದು: ಶ್ರೀಮಂತ ಪಾಟೀಲ

ಕಟ್ಟಡ ಕಾರ್ಮಿಕ ರ ಶ್ರಮ ಅತ್ಯಂತ ಮಹತ್ವದ್ದು: ಶ್ರೀಮಂತ ಪಾಟೀಲ

ಲೋಕದರ್ಶನ ವರದಿ

ಶೇಡಬಾಳ 30: ನಗರ ಪ್ರದೇಶವಾಗಿರಲಿ, ಗ್ರಾಮೀಣ ಪ್ರದೇಶದಲ್ಲಿನ ಯಾವುದೇ ಒಂದು ಸುಂದರವಾದ ಕಟ್ಟಡ ನಿರ್ಮಾಣವಾಗಬೇಕಾದರೆ ಕಟ್ಟಡ ಕಾರ್ಮಿಕರ ಶ್ರಮ ಅತ್ಯಂತ ಮಹತ್ವದ್ದಾಗಿದೆ ಎಂದು ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಹೇಳಿದರು.

ಅವರು ಗುರುವಾರ ದಿ. 29ರಂದು ಉಗಾರ ಬುದ್ರುಕ ಗ್ರಾಮದಲ್ಲಿ ನೂತನ ಡಾ. ಬಿ.ಆರ್.ಅಂಬೇಡಕರ ಕಟ್ಟಡ ಕಾರ್ಮಿಕ ಹಾಗೂ ಅಸಂಘಟಿತ ಕಾರ್ಮಿಕರ ಸಂಘವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. 

 ಒಂದು ಸುಂದರವಾದ ಮನೆ ನಿರ್ಮಾಣವಾಗಬೇಕಾದರೆ ಮನೆಯ ಮಾಲೀಕ ಹಣ ಖರ್ಚು  ಮಾಡಬಹುದು. ಆದರೆ ಆ ಕಟ್ಟಡ ನಿರ್ಮಾಣಕ್ಕೆ ಬಿಸಿಲು, ಮಳೆ, ಗಾಳಿಯನ್ನು ಲೆಕ್ಕಿಸದೇ  ಬೆವರು ಹನಿ ಸುರಿಸಿ ಶ್ರಮ ವಹಿಸಿ ಕಟ್ಟಡ ಕಾರ್ಮಿಕ ದುಡಿದಾಗ ಮಾತ್ರ ಸುಸಜ್ಜಿತ ಸುಂದರವಾದ ಕಟ್ಟಡ ನಿರ್ಮಾಣ ವಾಗಲು ಸಾಧ್ಯವೆಂದು ಹೇಳಿದರು. 

ಆ ಮನೆಯಲ್ಲಿ ಜೀವನ ಪೂರ್ತಿ  ಐಷಾರಾಯಿ ಜೀವನ ಸಾಗಿಸುವ ಮಾಲೀಕರು ಆ ಕಾರ್ಮಿಕ ರ ಶ್ರಮವನ್ನು ಗೌರವಿಸುವುದು ಅತ್ಯವಶ್ಯವಾಗಿದೆ. ಆ ಕಾರಣದಿಂದಲೇ ಸರ್ಕಾರ ಕಾರ್ಮಿಕರ ಒಳಿತಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು ಅದರ ಸದುಪಯೋಗವನ್ನು ಕಾರ್ಮಿಕರು ಪಡೆದುಕೊಳ್ಳುವಂತೆ ಕರೆ ನೀಡಿದರು. 

ಬೆಳಗಾವಿ ಉಪವಿಭಾಗದ ಕಾರ್ಮಿಕ ಅಧಿಕಾರಿಗಳಾಗಿ ಮಹೇಶ ಕುಳಲಿ ಹಾಗೂ ಅಥಣಿ ಹಿರಿಯ ಕಾರ್ಮಿಕರ ನಿರೀಕ್ಷಕರಾದ ಸಂಜು ಬೋಸಲೆ ಕಾರ್ಮಿಕರಿಗಾಗಿ ಸರ್ಕಾರ ದಿಂದ ಸಿಗುವ ಸೌಲಭ್ಯಗಳ ಕುರಿತು ವಿವರವಾಗಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಗಾರ ಗ್ರಾಪಂ ಅಧ್ಯಕ್ಷರಾದ ಅಣ್ಣಾಗೌಡ ಪಾಟೀಲ ವಹಿಸಿದ್ದರು. ಅತಿಥಿಗಳಾಗಿ ಗ್ರಾಪಂ ಉಪಾಧ್ಯಕ್ಷ ಆಶಾ ಸಾಗರ ಪೂಜಾರಿ, ವಿಜಯ ಅಸೂದೆ, ರವಿ ಕಾಂಬಳೆ ಆಗಮಿಸಿದ್ದರು. 

ಸಂಘದ ಅಧ್ಯಕ್ಷ ಶ್ರಾವಣ ಕಾಂಬಳೆ, ಉಪಾಧ್ಯಕ್ಷ ಪಿಂಟು ಸಮಗಾರ, ಅಂಬೇಡಕರ ಭವನದ ಅಧ್ಯಕ್ಷರು ವಸಂತ ಕೃಷ್ಣಾ ಕಾಂಬಳೆ, ಅಪ್ಪಾಸಾಬ ಚೌಗಲೆ, ತಮ್ಮಣ್ಣ ಪಾರಶೆಟ್ಟಿ, ರವಿ ಕಾಂಬಳೆ, ವಿಜಯ ಅಸೋದೆ, ಆಶಾ ಸಾಗರ ಪೂಜಾರಿ, ಸಾಗರ ಪೂಜಾರಿ, ಸಚೀನ ಕಾಂಬಳೆ, ಶ್ರಾವಣಿ ಗೋಂಧಳಿ, ಮುನಾಫ ಚೌಧರಿ, ಗುಣವಂತಿ ಶ್ರಾವಣ ಗೊಂಧಳಿ, ಪ್ರಶಾಂತ ವಸವಾಡೆ, ಸಂಗಪ್ಪ ಪಡಗಾನೂರ,  ಹೈದರ ಚೌಧರಿ, ಸಂಘದ ಪದಾಧಿಕಾರಿಗಳಾದ ಸಂಜು ಕೋರೆ, ಶ್ರೀಧರ ಬಿರಣಗಿ, ಶೇಖರ ಕಾಟಕರ, ಸಾಗರ ಕಾಟಕರ, ಸಾರಿಕಾ ಕಾಂಬಳೆ, ರೇಖಾ ಪೂಜೆಪ್ಪಗೋಳ, ಲಲಿತಾ ಸಮಗಾರ, ಸುಂಧಾಬಾಯಿ ಸಮಗಾರ, ಶಾಂತಾ ಕಾಂಬಳೆ ಸೇರಿದಂತೆ ಸಂಘದ ಅನೇಕ ಸದಸ್ಯರು ಇದ್ದರು.

ಶ್ರಾವಣ ಕಾಂಬಳೆ ಸ್ವಾಗತಿಸಿ ವಂದಿಸಿದರು. ಅಮೀನ ಶೇಖ ಕಾರ್ಯಕ್ರಮ ನಿರೂಪಿಸಿದರು 

ಸುದ್ದಿ ಓದಿ