ಹರ್ ಘರ್ ತಿರಂಗಾ: ಸಂಭ್ರಮದಿಂದ ಬೈಕ್ ರ್ಯಾಲಿ
ಇಂಡಿ: ಇಂಡಿ ತಾಲೂಕಾ ಛಾಯಾಗ್ರಾಹಕರು ಹಾಗೂ ವೀಡಿಯೋಗ್ರಾಫರ್‌ಗಳ ಸಂಘದ ಸದಸ್ಯರು ರವಿವಾರ ಸ್ವಾತಂತ್ರ್ಯ ಮಹೋತ್ಸವದ ಅಮೃತಮಹೋತ್ಸವದ ಹರ್ ಘರ್ ತಿರಂಗಾ ಕಾರ್ಯಕ್ರಮದ ಅಂಗವಾಗಿ ಬೈಕ್‌ಗಳಿಗೆ ಧ್ವಜ ಕಟ್ಟಿಕೊಂಡು ಸಂಭ್ರಮದಿಂದ ಬೈಕ್ ರಾ್ಯಲಿ ನಡೆಸಿದರು.
ಪಟ್ಟಣದ ಪ್ರವಾಸಿಮಂದಿರದಿಂದ ಬೈಕ್ರಾ್ಯಲಿ ಪ್ರಾರಂಭವಾಗಿ ಬಸವೇಶ್ವರ ವೃತ್ತ, ಅಂಬೇಡ್ಕರ್ ವೃತ್ತ ಮುಖಾಂತರ ಮಹಾವೀರ ವೃತ್ತಕ್ಕೆ ತೆರಳಿ ಅಲ್ಲಿಂದ ಮತ್ತೆ ಅಂಬೇಡ್ಕರ್ ಬೃತ್ತ ಬಸವೇಶ್ವರ ವೃತ್ತದ ಮೂಲಕ ತಾಲೂಕು ಆಡಳಿತಸೌಧ (ಮಿನಿವಿಧಾನಸೌಧ) ವನ್ನು ತಲುಪಿತು.
ಸಂಘದ ಅಧ್ಯಕ್ಷ ಸಿದ್ದಪ್ಪ ಕುದುರೆ, ಕಾರ್ಯದರ್ಶಿ ಬಸವರಾಜ ಪಾಟೀಲ, ಭೀಮಾಶಂಕರ ಗೋಳಗಿ, ಮಾಂತೇಶ ಹುಣಸಗಿ, ರಮೇಶ ಗೋಳಸಾರ, ಪ್ರವೀಣ ಮಠ, ಶಂಕರ್ ನಾಟೀಕಾರ, ಅಂಬರೀಶ ಕೋರಳ್ಳಿ, ಪ್ರವೀಣ ಕೋರಳ್ಳಿ, ಅಶೋಕ ಜಾಧವ, ಇಸಾಕ್ ಲಾಳಸಂಗಿ, ಶಿವಾನಂಸದ ಬೀಳೂರ ಸೇರಿದಂತೆ ತಾಲೂಕಿ ನ 50 ಕ್ಕೂ ಹೆಚ್ಚುಜನ ಛಾಯಾಗ್ರಾಹಕರು ಹಾಗೂ ವೀಡಿಯೋ ಗ್ರಾಫರ್‌ಗಳು ಭಾಗವಹಿಸಿದ್ದರು.