125 ಕೆಜಿ ಜೋಳದ ಚೀಲ ಹೊತ್ತು ಭಕ್ತಿ ಸಮರ್ಪಿಸಿದ ಹನಮಂತ
ಲೋಕದರ್ಶನ ವರದಿ,
ಜಮಖಂಡಿ 12: ಶ್ರವಣ ಬೆಳಗೋಳದ ಪುರಾಣ ಪ್ರಸಿದ್ಧ ಗೊಮ್ಮಟೇಶ್ವರನ ಬೆಟ್ಟವನ್ನು 125 ಕೆಜಿ ಜೋಳದ ಚೀಲವನ್ನು ಬೆನ್ನ ಮೇಲೆ ಹೊತ್ತು ಹತ್ತುವ ಮೂಲಕ ಸಾಹಸಿ ಭಕ್ತರೊಬ್ಬರು ನೋಡುಗರನ್ನು ಬೆರಗುಗೊಳಿಸಿದ್ದಾರೆ.
ಜಮಖಂಡಿ ತಾಲೂಕಿನ ಹುನ್ನೂರು ಗ್ರಾಮದ 43 ವರ್ಷದ ಹನಮಂತ ಪರಸಪ್ಪ ಸರಪಳಿ ಆ ಸಾಹಸಿ. 700 ಮೆಟ್ಟಿಲುಗಳನ್ನು ಕೇವಲ 41 ನಿಮಿಷಗಳಲ್ಲಿ ಹತ್ತಿ, 125 ಕೆಜಿ ಜೋಳದ ಚೀಲವನ್ನು ಬೆಳಗೋಳದ ಗೊಮ್ಮಟೇಶ್ವರ ದಿಗಂಬರ ಜೈನ ಮಂದಿರ ಮಠಕ್ಕೆ ಸಮರ್ಪಿಸಿ ಭಕ್ತಿ ಮೆರೆದಿದ್ದಾರೆ.
ವ್ಯವಸಾಯ ನಿರತ ಹನಮಂತ ಅವರ ಈ ಸಾಹಸಕ್ಕೆ ಸ್ನೇಹಿತರು, ನೋಡುಗರು, ಗೊಮ್ಮಟೇಶ್ವರನ ಸಮೀತಿಯವರು ಅಚ್ಚರಿಗೊಂಡಿದ್ದಾರೆ. ಬೆಟ್ಟದ ಮೇಲಿನ ಆವರಣದಲ್ಲಿ ಸಾಹಸಿ ಹನಮಂತ ಅವರನ್ನು ಸ್ನೇಹಿತರು ಹಾಗೂ ಸಾರ್ವಜನಿಕರು ಸನ್ಮಾನಿಸಿ ಗೌರವಿಸಿದ್ದಾರೆ.
ಉಮೇಶ ಜೋತ್ಯಪ್ಪನವರ, ಸಿದ್ರಾಮ ಇಟ್ಟಿ, ಸೈದು ಕಡಪಟ್ಟಿ, ಹನಮಂತ ಜಕ್ಕನ್ನವರ, ಭುಜಬಲಿ ಪಟ್ಟನವರ,ಮುರಗಯ್ಯ ಪಾಲಭಾವಿಮಠ, ರಾಜು ಕವಟಗಿ, ಅನೀಲ ಮಾದರ, ಅಭೀಷೇಕ ಸರಪಳಿ, ರಾಕೇಶ ಸರಪಳಿ, ಮಹಮ್ಮದ ಪೆಂಡಾರಿ ಸೇರಿದಂತೆ ಇತರರಿದ್ದರು.
** 125 ಕೆಜಿ ಜೋಳದ ಚೀಲ ಹೊತ್ತು ನಮ್ಮ ರಾಜ್ಯದ ಅತೀ ಎತ್ತರದ ಬೆಟ್ಟ ಹತ್ತಬೇಕೆಂಬ ನನ್ನ ಜೀವನದ ಕನಸಿತ್ತು ಆದ ಕಾರಣ ನನಗೆ ನೆನಪಾಗಿದ್ದು ಹಾಸನ ಜಿಲ್ಲೆಯ ಶ್ರವಣ ಬೆಳಗೋಳದ ಗೊಮ್ಮಟೇಶ್ವರನ ಬೆಟ್ಟ ಹತ್ತಿ ಕನಸನ್ನು ಈಡೆರಿಸಿಕೊಂಡಿದ್ದೆನೆ.
-ಹನಮಂತ ಪರಸಪ್ಪ ಸರಪಳಿ
ಹುನ್ನೂರು ಗ್ರಾಮಸ್ಥ.