ರಾಣೆಬೆನ್ನೂರ

ಕೈ ಕೊಟ್ಟ ಮಳೆ: ಕಂಗಾಲಾಗಿರುವ ತಾಲೂಕಿನ ರೈತರು, ಕುರಿಬಿಟ್ಟು ಹರಗುತ್ತಿರುವ ರೈತ

ಕೈ ಕೊಟ್ಟ ಮಳೆ: ಕಂಗಾಲಾಗಿರುವ ತಾಲೂಕಿನ ರೈತರು, ಕುರಿಬಿಟ್ಟು ಹರಗುತ್ತಿರುವ ರೈತ

ರಾಣೇಬೆನ್ನೂರು:ಅ 29 ತಾಲೂಕಿನಲ್ಲಿ ಮಳೆರಾಯ ಮುನಿಸಿಕೊಂಡಿದ್ದಾನೆ. ಕಳೆದ ತಿಂಗಳು ಸತತ ಸುರಿದ ಮಳೆ ಆಗಸ್ಟ್ ತಿಂಗಳಿನಲ್ಲಿ ಕೈಕೊಟ್ಟಿದೆ. ರೈತರು ಬೆಳೆದ ಗೋವಿನಜೋಳ, ಹತ್ತಿ, ಶೇಂಗಾ, ಸೋಯಾಬಿನ್ ಸೇರಿದಂತೆ ವಿವಿಧ ಬೆಳೆಗಳು ಒಣಗಲಾರಂಭಿಸಿವೆ.ಈ ಮಧ್ಯೆ ಕೆಲ ರೈತರು ಹಿಂಗಾರು ಬಿತ್ತನೆಗೆ ಅಡ್ಡಿಯಾಗುತ್ತದೆ ಎಂದು ಒಣಗುತ್ತಿರುವ ಬೆಳೆಗಳನ್ನು ನಾಶ ಮಾಡುತ್ತಿರುವುದು ಅನೇಕ ಭಾಗಗಳಲ್ಲಿ. ಕಂಡು ಬರುತ್ತಿದೆ. ತಾಲೂಕಿನ ಹುಣಸಿಕಟ್ಟಿ ಗ್ರಾಮದ ರೈತ ಸಿದ್ದಪ್ಪ ಮಲ್ಲಪ್ಪ ಮುದ್ದಿ,ಅವರು ತಮ್ಮ ಜಮೀನಿನಲ್ಲಿ  ನಾಲ್ಕು ಎಕರೆಯಲ್ಲಿ ಬೆಳೆದು ನಿಂತಿದ್ದ ಮೆಕ್ಕೆಜೋಳವನ್ನು ನಾಶಪಡಿಸಿದ್ದಾರೆ.ಮಳೆರಾಯ ಅವಕೃಪೆ ಮತ್ತು ಬೆಳೆಗೆ ಕೆಂಪುರೋಗ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನಾಲ್ಕು ಎಕರೆಯಲ್ಲಿ ಬೆಳೆದಿದ್ದ ಮೆಕ್ಕೆಜೋಳವನ್ನು ಸಿದ್ದಪ್ಪ ಅವರು ಕುರಿಗಾರರಿಂದ ಕುರಿಗಳನ್ನು ಬಿಟ್ಟು ನಾಶಪಡಿಸಿದರು. ಮೊದಲು ಅತಿವೃಷ್ಠಿಯಿಂದ ಬೆಳೆ ಹಾಳಾಯಿತು. ಈಗ ಮಳೆ ಇಲ್ಲದೆ ಬೆಳೆ ಹಾಳಾಗುತ್ತಿದೆ.ಬೆಳೆದ ಬೆಳೆಗೆ ರೋಗ ಹಾಗೂ ಮಳೆ ಕೊರತೆ: ಒಂದು ಲಕ್ಷಕ್ಕೂ ಅಧಿಕ ರೂಪಾಯಿ ಖರ್ಚು ಮಾಡಿ ಬೆಳೆದ ಬೆಳೆಗೆ ರೋಗ ಮತ್ತು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ನಾಶಪಡಿಸುತ್ತಿರುವುದಾಗಿ ಸಿದ್ದಪ್ಪ ಮುದ್ದಿ ತಿಳಿಸಿದ್ದಾರೆ. ಹಿಂಗಾರು ಮಳೆಯಾದರೂ ಚೆನ್ನಾಗಿ ಬಂದರೆ ಉತ್ತಮ ಫಸಲು ಬರಬಹುದು ಎಂದು ಸಿದ್ದಪ್ಪ ಮುದ್ದಿ ಮಾಹಿತಿ ನೀಡಿದ್ದಾರೆ. ಹುಣಸಿಕಟ್ಟಿ ಗ್ರಾಮದ ಮತ್ತೊಬ್ಬ ರೈತ ಸಣ್ಣಸಿದ್ದಪ್ಪ ರಾಮಪ್ಪ ಗೌಡ್ರು ತಮ್ಮ  ಎರಡು ಎಕರೆ ಜಮೀನಿನಲ್ಲಿ ಮೆಕ್ಕೆಜೋಳ ಬೆಳೆದಿದ್ದರೂ ಮಳೆ ಬಾರದೆ ಹಿನ್ನೆಲೆಯಲ್ಲಿ ಮೆಕ್ಕೆಜೋಳಕ್ಕೆ ಕೆಂಪು ರೋಗ ತಗುಲಿ ಬೆಳೆಗಳು ಸಂಪೂರ್ಣವಾಗಿ ನಾಶವಾಗಿದ್ದು, ಬಹುತೇಕ ಅಕ್ಕಪಕ್ಕ ಜಮೀನುಗಳಲ್ಲಿ ಇದೇ ರೀತಿ ಆಗಿದೆ. ಇದನ್ನು ಕಂಡು ಇಂದು ಕುರಿಗಾರರ ಜೊತೆ ಮಾತನಾಡಿ ತಮ್ಮ ಜಮೀನಿನಲ್ಲಿ ಕುರಿಗಳ ಹಿಂಡನ್ನು ಬಿಟ್ಟು ಸಂಪೂರ್ಣವಾಗಿ ನಾಶಪಡಿಸಿದ್ದಾರೆ. ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಇಂತಹ ಮೆಕ್ಕೆಜೋಳ   ದಿನಗಳಲ್ಲಿ ರೈತರು ಒಗ್ಗಟ್ಟಾಗಿ ಪ್ರತಿಭಟಿಸಬೇಕಾಗುತ್ತದೆ. ಹಾಗಾಗಿ ಆದಷ್ಟು ತಾಲೂಕ ದಂಡಾಧಿಕಾರಿಗಳು, ಕೃಷಿ ಅಧಿಕಾರಿಗಳು ತಾಲೂಕಿನ ರೈತರ ಜಮೀನುಗಳಿಗೆ ತೆರಳಿ ಸಮೀಕ್ಷೆಯನ್ನು ನಡೆಸಿ ಮೆಕ್ಕೆಜೋಳಕ್ಕೆ ಪರಿಹಾರ ನೀಡಬೇಕೆಂದು ಸಣ್ಣಸಿದ್ದಪ್ಪ ಗೌಡ್ರು ಆಗ್ರಹಿಸಿದರು

ಸುದ್ದಿ ಓದಿ