ಹೂವಿನ ಹಡಗಲಿ

ಹಡಗಲಿ: ಇಂಗ್ಲಿಷ್ ಭಾಷೆ ವೇದಿಕೆ ನೂತನ ಪದಾಧಿಕಾರಿಗಳು

ಹಡಗಲಿ: ಇಂಗ್ಲಿಷ್ ಭಾಷೆ ವೇದಿಕೆ ನೂತನ ಪದಾಧಿಕಾರಿಗಳು

ಲೋಕದರ್ಶನ ವರದಿ

ಹೂವಿನ ಹಡಗಲಿ: ಪಟ್ಟಣದ ಎಂ ಎಂ ಪಾಟೀಲ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಮಂಗಳವಾರ ನೂತನ ಇಂಗ್ಲೀಷ್ ಭಾಷಾ ಶಿಕ್ಷಕರ ವೇದಿಕೆ ಅಧ್ಯಕ್ಷರಾಗಿ ಸರ್ಕಾರಿ ಪ್ರೌಢಶಾಲೆ ಹ್ಯಾರಡದ ಎಸ್ ಚಂದ್ರಪ್ಪ ಆಯ್ಕೆ ಆಗಿದ್ದಾರೆ.ಉಪಾಧ್ಯಕ್ಷರಾಗಿ ಶಶಿಕಲಾ ಚೌಹಾನ್ ಕಾರ್ಯದರ್ಶಿಯಾಗಿ  ಸಹದೇವಪ್ಪ ನಿಗದಿ, ಎಂ ಎಂ ವಾಡ  ಖಜಾಂಚಿಯಾಗಿ ಶಾಮ್ ಸುಂದರ ಡಿ ಎಂ. ಹೊಳಲು,ಸಂಘಟನಾ ಕಾರ್ಯದರ್ಶಿಯಾಗಿ  ಪ್ರಕಾಶ್ ಆಚಾರ್ ಇಟಿಗಿಸಹ ಕಾರ್ಯದರ್ಶಿಯಾಗಿ ಶಿಲ್ಪ ಎಂಎಂ ಪಾಟೀಲ್ಎಂ ಎಂ ಪಾಟೀಲ್ ಪ್ರೌಢಶಾಲೆ ಹಡಗಲಿಇವರು ನೇಮಕಗೊಂಡರು.ಇದೇ ಸಂದರ್ಭದಲ್ಲಿ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ವಿ ಹನುಮಂತಪ್ಪ ಮಾತನಾಡಿ ಇಂಗ್ಲಿಷ್ ವಿಷಯ ನೂತನ ವೇದಿಕೆ ಪದಾಧಿಕಾರಿಗಳು ಆಂಗ್ಲ ಭಾಷೆಯನ್ನು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಸುಲಭವಾಗಿ ಓದಲು ಬರೆಯಲು ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಿರಿ ಎಂದು ಹೇಳಿದರು.ತಾಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಎಂ ಶಿವಲಿಂಗಪ್ಪ, ಬಡ್ತಿ ಶಿಕ್ಷಕರ ಸಂಘದ ಅಧ್ಯಕ್ಷ ಶೇಖ್ ಅಹಮದ್ ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.

ಸುದ್ದಿ ಓದಿ