ಉಗಾರ ಸಕ್ಕರೆ ಕಾರ್ಖಾನೆಯ ಜಿಮ್ಖಾನಾ ಡೇ ಕಾರ್ಯಕ್ರಮ
ಕಾಗವಾಡ04: ಇಂಡಿಯನ್ ಕ್ರಿಕೆಟ್ ಟೀಂ ಇಡೀ ವಿಶ್ವದಲ್ಲಿ ಒಳ್ಳೆಯ ಟೀಮವಾಗಿ ಹೊರಹೊಮ್ಮಿದೆ. ಬರುವ ವಿಶ್ವಕಪ್ ಭಾರತ ದೇಶಪಾಲಾಗಲಿದೆ ಎಂದು ರಾಷ್ಟ್ರೀಯ ಕ್ರಿಕೆಟ ಆಟಗಾರ ಜತಿನ ಪರಾಂಜಪೆ ಉಗಾರದಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.
ರವಿವಾರರಂದು ಉಗಾರ ಸಕ್ಕರೆ ಕಾರ್ಖಾನೆಯ 80ನೇ ಜಿಮ್ಖಾನಾ ಡೇ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ರಾಷ್ಟ್ರೀಯ ಕ್ರಿಕೆಟ್ ಆಟಗಾರ ಜತಿನ ಪರಾಂಜಪೆ ಇವರ ಮುಖ್ಯ ಉಪಸ್ಥಿತಿಯಲ್ಲಿ ವಿವಿಧ ಕಾರ್ಯಕ್ರಮಗಳು ಜರಗಿದವು.
ಜತಿನ ಪರಾಂಜಪೆ ಮಾತನಾಡಿ ನಾನೊಬ್ಬ ಲೆಫ್ಟ್ ಹ್ಯಾಂಡ್ ಆಟಗಾರನಾಗಿದ್ದು ನನಗೆ ಸ್ಪೂರ್ತಿ ಬ್ರೈನ್ ಲಾರಾ ಆಗಿದ್ದಾರೆ ಎಂದು ಸ್ಪಷ್ಟಪಡಿಸಿದರು. ಸನ್ 1999 ರಿಂದ 2002 ರವರೆಗೆ ಮುಂಬೈ ಕ್ರಿಕೆಟ್ ಟೀಮ್ನ ಆಟಗಾರರಾಗಿ ಹಾಗೂ 1999-1998 ರವರೆಗೆ ಭಾರತೀಯ ಕ್ರಿಕೆಟ್ ಆಟಗಾರರಾಗಿ ಆಟ ಆಡಿದ್ದೇನೆ. ಮತ್ತು ನಾಲ್ಕು ವರ್ಷ ತಂಡ ಆಯ್ಕೆಯಲ್ಲಿ ಕಾರ್ಯನಿರ್ವಹಿಸಿದ್ದೇನೆ.
ನನ್ನ ತಂದೆ ವಾಸುದೇವ ಪರಾಂಜಪೆ ಬಾಂಬೆ ಕ್ರಿಕೆಟಿಗರೂ ಸಹ, ಬಾಂಬೆ ಮತ್ತು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಎರಡಕ್ಕೂ ತರಬೇತುದಾರರಾಗಿ ಸೇವೆ ಸಲ್ಲಿಸಿದ್ದರು ಮತ್ತು ಸುನಿಲ್ ಗವಾಸ್ಕರ್ ಮತ್ತು ಸಂಜಯ್ ಮಂಜ್ರೇಕರ್ ಅವರಂತಹವರಿಗೆ ಮಾರ್ಗದರ್ಶನ ನೀಡಿದ್ದರು.
ವಿಹಾರ ಆಟದ ಮ್ಯೆದಾನದಲ್ಲಿ ಜತಿನ್ ಪರಾಂಜಪೆ ಅವರು ಕ್ರೀಡಾ ಧ್ವಜಾರೋಹಣ ನೆರವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಕ್ಕರೆ ಕಾರ್ಖಾನೆಯ ಎಂ.ಡಿ, ಜಿಮ್ಖಾನಾ ಚೇರ್ಮನ್ ಚಂದನ್ ಶಿರಗಾಂವಕರ ಇವರ ಅಧ್ಯಕ್ಷತೆಯಲ್ಲಿ ವಿವಿಧ ಕಾರ್ಯಕ್ರಮಗಳು ನೆರವೇರಿದವು.
ಸಕ್ಕರೆ ಕಾರ್ಖಾನೆಯ ಕಾರ್ಮಿಕರು, ಅಧಿಕಾರಿಗಳು ಹಾಗೂ ಸಾರ್ವಜನಿಕರ ಮುಖ್ಯ ಸಹ ಭಾಗಗಳಲ್ಲಿ ಬೇರೆ ಬೇರೆ ಕಾರ್ಯಕ್ರಮಗಳು ನೆರವೇರಿದವು. ಉಗಾರದ ಮ್ಯೇದಾನದಲ್ಲಿ ಸಕ್ಕರೆ ಕಾರ್ಖಾನೆಯ ಆಟಗಾರರೊಂದ್ದಿಗೆ ಜತಿನ ಪರಾಂಜಪೆ ಆಟಾಆಡಿ ಸಂತಸ ಹಂಚಿಕೊಂಡರು.
ಜಿಮ್ಖಾನಾ ಕಾರ್ಯದರ್ಶಿಗಳಾಗಿ ಬುಜ್ಜಿಬಲಿ ಅಕ್ಕಿವಾಟೆ, ಸಹಕಾರ್ಯದರ್ಶಿಗಳಾಗಿ ಸಚಿನ್ ಶಿಂದೆ, ಎಲ್ಲ ಸಂಚಾಲಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿದರು.