ಶಿಗ್ಗಾವ್

ಸಮತಾ ಸೈನಿಕ ದಳದಿಂದ ಗುರುಪೂರ್ಣಿಮೆ ಆಚರಣೆ

ಸಮತಾ ಸೈನಿಕ ದಳದಿಂದ ಗುರುಪೂರ್ಣಿಮೆ ಆಚರಣೆ

ಲೋಕದರ್ಶನ ವರದಿ 

ಶಿಗ್ಗಾವಿ 04:  ಪಟ್ಟಣದ ಸರಕಾರೇತರ ಸಂಸ್ಥೆಯಲ್ಲಿ ಸಮತಾಸೈನಿಕ ದಳದ ಉತ್ತರ ಕರ್ನಾಟಕ ರಾಜ್ಯಾಧ್ಯಕ್ಷ ಸಣ್ಣಕ್ಕಿ ಸರ್ರವರ ಆದೇಶದ ಮೇರೆಗೆ ಉತ್ತರ ಕರ್ನಾಟಕದ ಕಾರ್ಮಿಕ ಘಟಕದ ಅಧ್ಯಕ್ಷ  ಡಿ ಎಸ್ ಓಲೆಕಾರ್ರವರ ಅಧ್ಯಕ್ಷತೆಯಲ್ಲಿ ಗುರುಪೂರ್ಣಿಮೆಯನ್ನು ಆಚರಿಸಲಾಯಿತು.

ಈ ಕಾರ್ಯಕ್ರಮದ ಅಂಗವಾಗಿ ತಾಲೂಕ ಉಪತಹಶೀಲ್ದಾರ ರವಿ ಕೊರವರ್ರವರು ಬುದ್ಧ ಮತ್ತು ಅಂಬೇಡ್ಕರ್ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ನಮಿಸಿ ಮಾತನಾಡಿದರು. ನಂತರ ಕಾರ್ಮಿಕ ಘಟಕದ ರಾಜ್ಯಾಧ್ಯಕ್ಷ ಡಿಎಸ್ ಓಲೆಕಾರ್ ಮಾತನಾಡಿದರು.

ಸಮತಾ ಸೈನಿಕ ದಳದ ಜಿಲ್ಲಾಧ್ಯಕ್ಷ ಅಶೋಕ್ ಕಾಳೆ, ಜಿಲ್ಲಾ ಸಂಚಾಲಕ ಸುರೇಶ್ ಹರಿಜನ, ಸಂಘಟನೆಯ ಕಾರ್ಯದರ್ಶಿಗ ಮುಕ್ಬುಲ್ ಯಲ್ಲಾಪುರ,  ಪ್ರಶಾಂತ್ಕರೂರ್, ಶಿವಕುಮಾರ್ ಚಿಗರಿಮಠ, ಸಾಧಿಕ್ ಆಂಬೂರ್ ಎಲ್ಲರ ಉಪಸ್ಥಿತಿಯಲ್ಲಿ ಗುರು ಪೂರ್ಣಿಮೆಯನ್ನು ಆಚರಿಸಲಾಯಿತು. ಪ್ರಧಾನ ಕಾರ್ಯದರ್ಶಿ ಸುರೇಶ ಬಡಪ್ಪನವರ್ ನಿರೂಪಣೆ ಮಾಡಿದರು 

ಸುದ್ದಿ ಓದಿ