ಶಿಗ್ಗಾವ್

ಸಮೂಹ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ

ಸಮೂಹ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ

ಲೋಕದರ್ಶನ ವರದಿ 

ಶಿಗ್ಗಾವಿ 30: ಮಕ್ಕಳಲ್ಲಿ ವಿಶೇಷ ಪ್ರತಿಭೆಯನ್ನು ಹೊರತಂದು ಅಂತಹ ಮಕ್ಕಳನ್ನು ಮುಖ್ಯವಾಹಿನಿಗೆ ತೆಗೆದುಕೊಂಡು ಹೋಗುವ ಉದ್ದೇಶದಿಂದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಸರಕಾರ ಆಯೋಜಿಸಿದೆ ಎಂದು ಪ್ರಾಚಾರ್ಯ ಎಸ್.ಹೆಚ್.ಹಾವೇರಿ ಹೇಳಿದರು.

ಪಟ್ಟಣದ ಚನ್ನಪ್ಪ ಕುನ್ನೂರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಸಮೂಹ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಕೋವಿಡನಿಂದಾಗಿ ಮೂರು ವರ್ಷ ಪ್ರತಿಭಾ ಕಾರಂಜಿ ಕಾರ್ಯಕ್ರಮ ನಡೆದಿರಲಿಲ್ಲ ಆದ್ದರಿಂದ ಮಕ್ಕಳು ಪ್ರತಿಭಾ ಕಾರಂಜಿಯ ಉದ್ದೇಶ ಮತ್ತು ಅದರ ಮಹತ್ವವನ್ನು ತಿಳಿದು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಬಸವರಾಜ ಬಸರಿಕಟ್ಟಿ ಮಾತನಾಡಿ ಮಕ್ಕಳಲ್ಲಿ ವಿಶೇಷ ಪ್ರತಿಭೆಯನ್ನು ಯಾವುದೇ ತಾರತಮ್ಯವಿಲ್ಲದೇ ಅವರ ಭಾಗವಹಿಸುವಿಕೆ, ಗುರುತಿಸುವಿಕೆ, ಅವರ ಕೌಶಲ್ಯವನ್ನು ಹೊರತರಲು ಒಳ್ಳೆಯ ವೇದಿಕೆಯಾಗಿದೆ ಹಾಗೂ ಚೆನ್ನಪ್ಪ ಕುನ್ನೂರ ಸಂಸ್ಥೆ ಕಾರ್ಯಕ್ರಮವನ್ನು ಉತ್ತಮವಾಗಿ ಆಯೋಜನೆ ಮಾಡಿದೆ ಎಂದು ಪ್ರಶಂಸಿಸಿದರು.

ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಅನುಸೂಯಾ ಬಳ್ಳಾರಿ ಮಾತನಾಡಿ ಮಕ್ಕಳ್ಳಲ್ಲಿರುವ ಕೌಶಲ್ಯಗಳನ್ನು ಹೊರತೆಗೆಯಲು ಪ್ರತಿಭಾ ಕಾರಂಜಿ ಪ್ರಮುಖ ಹಾಗೂ ಅತ್ಯವಶ್ಯವಾಗಿದೆ ಮಕ್ಕಳ ಪ್ರತಿಭೆಯು ಉಜ್ವಲಿಸಿ ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಇವರ ಪ್ರತಿಭೆ ಪ್ರಸರಿಸುವಂತಾಗಲಿ ಎಂದರು.

ಸಂಸ್ಥೆಯ ನಿದರ್ೇಶಕ ವೀರಣ್ಣಾ ಬಡ್ಡಿ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು, ಅತ್ಯುತ್ತಮ ಪ್ರದರ್ಶನ ತೋರಿದ ಮಕ್ಕಳಿಗೆ ಪಾರಿತೋಷಕ ಹಾಗೂ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು.

 ಈ ಸಂದರ್ಭದಲ್ಲಿ ಶಿವಪುತ್ರಪ್ಪ ಜಕ್ಕಣ್ಣವರ, ಸಿದ್ದಪ್ಪ ಮಿಸಿ, ಶೇಖರ ಪರಸಾಪೂರ, ರವಿ ಸಂಕ್ಲಿಪೂರ, ಮಂಜುಳಾ ಪಾಟೀಲ, ಗಾಯತ್ರಿ ದೈವಜ್ಞ, ಶೃತಿ ನವರತ್ನ, ಲಾವಣ್ಯ, ಸುನೀತಾ, ಸಂಗೀತಾ, ಕೆ.ಎಸ್.ಅಶ್ವಿನಿ, ಮಂಜುಳಾ.ಪಿ.ಬಿ, ಶಾಲಿನಿ, ಉಮಾ, ರಂಜಿತಾ, ಸಬಾ, ಶರಾವತಿ, ದೀಪಾ, ಸಚಿನ, ಮಲ್ಲಿಕಾಜರ್ುನ ಸೇರಿದಂತೆ ತಾಲೂಕಿನ ಎಲ್ಲ ಶಾಲೆಯ ಶಿಕ್ಷಕರು, ಪಾಲಕರು, ಪೋಷಕರು, ಮಕ್ಕಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಪವಿತ್ರಾ ಕಿರೇಸೂರ ಸ್ವಾಗತಿಸಿದರು, ಮಾರುತಿ ತಳವಾರ ವಂದಿಸಿದರು, ವಿದ್ಯಾ ಹೆಸರೂರ ಕಾರ್ಯಕ್ರಮ ನಿರೂಪಿಸಿದರು 

ಸುದ್ದಿ ಓದಿ