ಹಿರೇಬಿದರಿ ಅರಣ್ಯ ಪ್ರದೇಶದ ನರೇಗಾ ಯೋಜನೆಯಲ್ಲಿ ಗೋಕಟ್ಟೆ ನಿರ್ಮಾಣಕ್ಕೆ ಚಾಲನೆ
ರಾಣೆಬೆನ್ನೂರು 16: ತಾಲೂಕಿನ ಹಿರೇಬಿದರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ನರೇಗಾ ಯೋಜನೆ ಅಡಿ ಸುಮಾರು 10 ಲಕ್ಷ ಮೊತ್ತದಲ್ಲಿ ಗೋಕಟ್ಟೆ ನಿರ್ಮಾಣ ಕಾಮಗಾರಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಪುತ್ರಗೌಡ ಪಾಟೀಲ್ ಚಾಲನೆ ನೀಡಿದರು.
ನರೇಗಾ ಕೂಲಿ ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿದರು.
ಅರಣ್ಯ ಪ್ರದೇಶದಲ್ಲಿರುವ ವನ್ಯ ಜೀವಿಗಳಿಗೆ ಕುಡಿಯಲು ನೀರಿನ ಅವಶ್ಯಕತೆ ಇದ್ದು ವನ್ಯಜೀವಿಗಳಿಗೆ ನೀರಿನ ದಾಹ ತೀರಿಸಲು ನರೇಗಾ ಆಸರೆ ಆಗಿದೆ ಎಂದು ತಿಳಿಸಿದರು.ನರೇಗಾ ಸಹಾಯಕ ನಿರ್ದೇಶಕ ಪರಶುರಾಮ್ ಪೂಜಾರ ಮಾತನಾಡಿ, ಸರ್ಕಾರ ತಾಲೂಕನ್ನು ಬರಗಾಲ ಎಂದು ಘೋಷಣೆ ಮಾಡಿದ್ದು ಕೂಲಿ ಕಾಮರ್ಿಕರು ತಾಲೂಕಿನ 40 ಗ್ರಾಮ್ ಪಂಚಾಯ್ತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆ ಅಡಿ ಕೂಲಿ ಕೆಲಸ ನಡೆಯುತ್ತಿದ್ದು ಯಾರೂ ವಲಸೆ ಹೋಗದೆ ಸ್ಥಳೀಯವಾಗಿ ಗ್ರಾಮ ಪಂಚಾಯಿತಿಗಳ ಮೂಲಕ ಕೂಲಿ ಕೆಲಸ ನೀಡಲಾಗುವುದು. ನರೇಗಾ ಯೋಜನೆ ಅಡಿ ಕೂಲಿ ಕಾರ್ಮಿಕರಿಗೆ ಪ್ರತಿದಿನ 316 ರೂಗಳನ್ನು ಕೂಲಿ ವೇತನವಾಗಿ ನೀಡುತ್ತಿದ್ದು ಸಮಾನ ಕೂಲಿ ಸಮಾನ ವೇತನ ನೀಡಲಾಗುವುದು ಎಂದರು. ಗ್ರಾಮ ಪಂಚಾಯಿತಿಯ ಮಾಜಿ ಉಪಾಧ್ಯಕ್ಷ ಕೆಂಚಪ್ಪ ಸಂಗಾನವರ್, ಗ್ರಾಮ ಪಂಚಾಯತಿ ಸದಸ್ಯರಾದ ನೀಲಪ್ಪ ಚಂದಾಪುರ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಶ್ವಥ್ ನಾರಾಯಣಸ್ವಾಮಿ,ತಾಲೂಕಿನ ತಾಂತ್ರಿಕ ಸಂಯೋಜಕ ರವಿಕುಮಾರ್ ಯಾಳಗಿ, ತಾಲೂಕು ಐಇಸಿ ಸಂಯೋಜಕ ದಿಂಗಾಲೇಶ್ವರ ಅಂಗೂರ, ತಾಂತ್ರಿಕ ಸಹಾಯಕ ಯೋಗೇಶ್ ಬಿ, ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗ, ಬಿ ಎಫ್ ಟಿ ಪರಶುರಾಮ ಅಂಬಿಗೇರ ಹಾಗೂ ನರೇಗಾ ಕೂಲಿ ಕಾರ್ಮಿಕರು ಭಾಗವಹಿಸಿದ್ದರು