ಮಲ್ಲಿಗವಾಡದಲ್ಲಿ ಗೌರಿ ಹುಣ್ಣಿಮೆ ಆಚರಣೆ
ಮಲ್ಲಿಗವಾಡದಲ್ಲಿ ಗೌರಿ ಹುಣ್ಣಿಮೆ ಆಚರಣೆ
ಹುಬ್ಬಳ್ಳಿ 15 : ತಾಲೂಕಿನ ಮಲ್ಲಿಗವಾಡ ಗ್ರಾಮದ ಧೂಪದ ಮನೆಯಲ್ಲಿ ಗೌರಿ ಮೂರ್ತಿ ಪ್ರತಿಷ್ಠಾಪಿಸಿ ಗೌರಿ ಹುಣ್ಣಿಮೆ ಆಚರಣೆ ಮಾಡಲಾಗುತ್ತದೆ. ಇಡೀ ಊರಿನ ಮಹಿಳೆಯರು ಆರತಿ ತಟ್ಟೆ ಹಿಡಿದು ದೇವರ ದರ್ಶನ ಪಡೆದುಕೊಳ್ಳುತ್ತಾರೆ. ಗೌರಿ ಮೂರ್ತಿ, ಪರಮೇಶ್ವರ, ಇಬ್ಬರ ಸುಪುತ್ರಿಯರ ಪೂರ್ತಿಯನ್ನು ಐದು ದಿವಸಗಳ ಕಾಲ ದರ್ಶನ ಪಡೆದುಕೊಳ್ಳಬಹುದು. ಪ್ರತಿವರ್ಷ ಗೌರಿ ಹುಣ್ಣಿಮೆ ದಿನ ಅದ್ಭುತವಾಗಿ ಆಚರಿಸುವ ಹಬ್ಬವಾಗಿದೆ.