ಶಿಶು ವಿಹಾರ ಮಹಿಳಾ ಸಮಾಜದಲ್ಲಿ ಗಾಂಧಿ ಜಯಂತಿ
ರಾಣೆಬೆನ್ನೂರು 05: ಅಹಿಂಸಾ ತತ್ವ ಪರಿಪಾಲನೇ ಅನುಸರಿಸಿ ದೇಶಕ್ಕೆ ಸ್ವಾತಂತ್ರ ತಂದುಕೊಟ್ಟ ಅಪರೂಪದ ಮಹಾನ್ ನಾಯಕ ಮಹಾತ್ಮ ಗಾಂಧೀಜಿ ಅವರಾಗಿದ್ದಾರೆ ಎಂದು ಶಿಶು ವಿಹಾರ ಮಹಿಳಾ ಸಮಾಜದ ಹಿರಿಯ ಸದಸ್ಯ ದ್ರಾಕ್ಷಾಯಣಮ್ಮ ಹರಪನಹಳ್ಳಿ ಹೇಳಿದರು. ಅವರು ಶಿಶು.ವಿಹಾರ ಭವನದಲ್ಲಿ ನಡೆದ ದೇಶಭಕ್ತ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಿ ಅವರ ಜನ್ಮದಿನಾಚರಣೆ ಸಮಾರಂಭದಲ್ಲಿ, "ಮಹಾತ್ಮ ಗಾಂಧೀಜಿ ಮತ್ತು ಯುವ.ಜನಾಂಗ " ವಿಷಯ ಕುರಿತು ಉಪನ್ಯಾಸ ನೀಡಿದರು.ದೇಶಪ್ರೇಮಿ ಗಾಂಧೀಜಿ ಅವರು ಅನುಸರಿಸಿದ ಆಚಾರ, ವಿಚಾರ, ಮತ್ತು ದೇಶದ ಸ್ವಾತಂತ್ರಕ್ಕಾಗಿ ಅವರು ಮಾಡಿದ ತ್ಯಾಗ, ಅಹಿಂಸಾ ಹೋರಾಟ ಇಂದಿನ ಯುವ ಜನಾಂಗಕ್ಕೆ ದಾರಿದೀಪವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಮಾಜದ ಅಧ್ಯಕ್ಷೆ ಅನ್ನಪೂರ್ಣಮ್ಮ ಧಾನಪ್ಪನವರ ಅವರು ಮಾತನಾಡಿ, ಶಿಶು ವಿಹಾರ. ತನ್ನ ಆರಂಭಿಕ ಹಂತದಿಂದಲೂ ಕಲೆ ಸಾಹಿತ್ಯ ಸಂಗೀತ ಸಂಸ್ಕೃತಿ ಚಟುವಟಿಕೆಗಳ ಜೊತೆಗೆ, ಮಹಿಳೆಯರ ಸಬಲೀಕರಣಕ್ಕಾಗಿ ಅನೇಕ ರೀತಿಯ ಕೌಶಲ್ಯಾಭಿವೃದ್ಧಿ ತರಬೇತಿ ಜೊತೆಗೆ ಉದ್ಯೋಗ ಮಾಹಿತಿ ಕೊಡುವ, ಸೇವಾಕಾರ್ಯದಲ್ಲಿ ತೊಡಗಿಸಿಕೊಂಡಿದೆ ಎಂದರು. ಸರ್ಕಾರಿ ಶಾಲೆ ನಂಬರ್ 15ರ ಮಕ್ಕಳಿಗಾಗಿ ಭಾಷಣ ಸ್ಫರ್ಧೆ ಆಯೋಜಿಸಿದ್ದರು, ಸ್ಪರ್ಧೆ ವಿಜೇತರಿಗೆ. ಬಹುಮಾನ ವಿತರಿಸಲಾಯಿತು. ವೇದಿಕೆಯಲ್ಲಿ ಕಾರ್ಯದರ್ಶ ಗಾಯಿತ್ರಮ್ಮ ಕುರುವತ್ತಿ,, ಸದಸ್ಯರಾದ ಶಕುಂತಲಮ್ಮ ಜಂಬಿಗಿ, ಸುನಂದಮ್ಮ ಕುರುವತ್ತಿ,, ಪುಷ್ಪ ಶಿವಲಿಂಗಪ್ಪ ಸೇರಿದಂತೆ ಮತ್ತಿತರ ಸದಸ್ಯರು ಉಪಸ್ಥಿತರಿದ್ದರು. ಸದಸ್ಯರಾದ, ಲಕ್ಷ್ಮಿ ದೇವಗಿರಿ ಸಂಗಡಿಗರು ಪ್ರಾರ್ಥಿ ಸಿದರು. ಗೀತಾ ಜಂಬಗಿ ಸ್ವಾಗತಿಸಿದರು, ಇನ್ನೋರ್ವ ಸದಸ್ಯ, ನ್ಯಾಯವಾದಿ ಅನುಪಮಾ ಕಣವಿ ಅವರು, ನಿರೂಪಿಸಿ, ವಂದಿಸಿದರು. ನಂತರ ನಡೆದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರೆದ ಜನರ ಗಮನ ಸೆಳೆದವು