ಉಚಿತ ಬಂಜೆತನ ನಿವಾರಣೆ, ಉಪಚಾರ ಶಿಬಿರ
ಲೋಕದರ್ಶನ ವರದಿ
ಶೇಡಬಾಳ 23: ಮಿರಜದ ಸಚಿನ ಆಸ್ಪತ್ರೆಯಲ್ಲಿ ಪ್ರತಿ ತಿಂಗಳು ಬಂಜೆತನ ನಿವಾರಣೆ ಹಾಗೂ ಮಹಿಳೆಯರ ಗುಪ್ತ ರೋಗಗಳ ಕುರಿತು ಉಚಿತ ಶಿಬಿರಗಳನ್ನು ಏರ್ಪಡಿಸಲಾಗುತ್ತಿದ್ದು, ಇದರ ಲಾಭವನ್ನು ಕರ್ನಾಟಕ ಗಡಿಭಾಗದ ಸಾರ್ವಜನಿಕರು ಪಡೆದುಕೊಳ್ಳುವಂತೆ ಡಾ. ಸಚಿನ ಸುಗಣ್ಣವರ ಹೇಳಿದರು.
ಅವರು ಇತ್ತೀಚಿಗೆ ಮಿರಜದ ಟೆಸ್ಟ್ ಟ್ಯೂಬ್ ಬೇಬಿ ಸೆಂಟರ್ನಲ್ಲಿ ಉಚಿತ ಬಂಜೆತನ ನಿವಾರಣೆ ಹಾಗೂ ಉಪಚಾರ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಬಂಜೆತನದ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ನಡೆದಿದೆ. ಮಿರಜದ ಸಚಿನ ಟೆಸ್ಟ್ ಟ್ಯೂಬ್ ಬೇಬಿ ಸೆಂಟರ್ನಲ್ಲಿ ಆಯ್ಯುಆಯ್, ಆಯ್ವಿಎಫ್, ಆಯ್ಸಿಎಸ್ಆಯ್, ಆಯ್ಎಂಎಸ್ಆಯ್, ಲೇಸರ್ ಹಚಿಂಗ್, ವಿಟ್ರಿಫಿಕೇಶನ್ ಮತ್ತು ಉನ್ನತ ತಂತ್ರಜ್ಞಾನದ ಮುಖಾಂತರ ಯೋಗ್ಯ ಚಿಕಿತ್ಸೆ ನೀಡಿ ಕಡಿಮೆ ಖರ್ಚಿನಲ್ಲಿ ಬಂಜೆತನವನ್ನು ಹೋಗಲಾಡಿಸಬಹುದೆಂದು ಹೇಳಿದರು.
ಈ ಉಚಿತ ಶಿಬಿರದಲ್ಲಿ ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ನೂರಾರು ದಂಪತಿಗಳು ಹಾಗೂ ಮಹಿಳೆಯರು ಭಾಗವಹಿಸಿ ಶಿಬಿರದ ಲಾಭವನ್ನು ಪಡೆದುಕೊಂಡರು