ಬೈಲಹೊಂಗಲ

ಪ್ರೌಢಶಾಲೆಯ ಮಕ್ಕಳಿಗೆ ಉಚಿತವಾಗಿ ನೋಟಬುಕ್ ಪುಸ್ತಕಗಳು ಯಡಳ್ಳಿ ವಿತರಣೆ

ಪ್ರೌಢಶಾಲೆಯ ಮಕ್ಕಳಿಗೆ ಉಚಿತವಾಗಿ ನೋಟಬುಕ್ ಪುಸ್ತಕಗಳು ಯಡಳ್ಳಿ ವಿತರಣೆ

ಲೋಕದರ್ಶನ ವರದಿ

ಬೈಲಹೊಂಗಲ 13: ಪಟ್ಟಣದ ಪುರಸಭೆ ಸಂಚಾಲಿತ ಶೂರ ಸಂಗೊಳ್ಳಿ ರಾಯಣ್ಣ ಪ್ರೌಢಶಾಲೆಯ ಮಕ್ಕಳಿಗೆ ಶನಿವಾರ ಉಚಿತವಾಗಿ ಸುಲೇಖಾ 1650 ನೋಟಬುಕ್ಗಳು, 20 ಸಾವಿರ ರೂ.ಮೌಲ್ಯದ ಸ್ಪಧರ್ಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ಪುಸ್ತಕಗಳು ಸೇರಿದಂತೆ ಒಟ್ಟು 81 ಸಾವಿರ ರೂ.ಮೌಲ್ಯದ ಬುಕ್ಗಳನ್ನು ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಹಾಗೂ ಸಮಾಜ ಸೇವಕ ಶ್ರೀಶೈಲ ಯಡಳ್ಳಿ ವಿತರಿಸಿದರು. 

ನಂತರ ಮಾತನಾಡಿದ ಅವರು, ವಿದ್ಯಾರ್ಥಿಗಳು ಒಳ್ಳೆಯ ರೀತಿ ಅಭ್ಯಾಸ ಮಾಡುತ್ತಿದ್ದು, ಅವರಿಗೆ ಪ್ರೋತ್ಸಾಹ ನೀಡುವ ಉದ್ಧೇಶದಿಂದ ಬುಕ್ಗಳನ್ನು, ಪುಸ್ತಕಗಳನ್ನು ವಿತರಿಸಿದ್ದಾಗಿ ತಿಳಿಸಿದರು. ಜನ್ಮದಿನಾಚರಣೆ ಹೆಸರಿನಲ್ಲಿ ದುಂದು ವೆಚ್ಚಗಳನ್ನು ಮಾಡುವುದರ ಬದಲು ಇಂತಹ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿರುವುದಾಗಿ ಹೇಳಿದರು. ಇಲ್ಲಿನ ಶಿಕ್ಷಕರು ನಿಸ್ವಾರ್ಥದಿಂದ ಸೇವೆ ಮಾಡುತ್ತಿರುವುದು ನಾಡಿನಲ್ಲಿ ಎಲ್ಲೆಡೆ ಪ್ರಶಂಸೆಗೆ ಒಳಗಾಗಿದೆ ಎಂದರು. 

ಮುಖ್ಯಾಧ್ಯಾಪಕ ಎಂ.ಸಿ.ಹಂಗರಕಿ ಅಧ್ಯಕ್ಷತೆವಹಿಸಿ ಮಾತನಾಡಿ, ಸದಾ ಸಮಾಜಕ್ಕಾಗಿ ಮಿಡಿಯುವ ಹೃದಯವಂತಿಕೆ ಕುಟುಂಬ ಶ್ರೀಶೈಲ ಯಡಳ್ಳಿ ಅವರದ್ದಾಗಿದೆ. ಹಿರಿಯರು ಹಾಕಿಕೊಟ್ಟಿರುವ ಮಾರ್ಗವನ್ನು ಶ್ರೀಶೈಲ ಯಡಳ್ಳಿ ಅವರು ಅನುಸರಿಸುತ್ತಿರುವುದು ಶ್ಲಾಘನೀಯ ಎಂದರು.

ಗಣಿತ ತಜ್ಞ ಈಶ್ವರ ಹೋಟಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ರಾಯಣ್ಣ ಸಮಿತಿ ಉಪಾಧ್ಯಕ್ಷ ಸೋಮನಾಥ ಸೊಪ್ಪಿಮಠ, ಹಿರಿಯ ಪತ್ರಕರ್ತ ಚಂದ್ರಯ್ಯ ಯರಗಟ್ಟಿಮಠ ಆಗಮಿಸಿದ್ದರು. 

ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಶ್ರೀಶೈಲ ಯಡಳ್ಳಿ ಮತ್ತು ರೂಪಾ ಯಡಳ್ಳಿ ದಂಪತಿಯನ್ನು ಹಾಗೂ ಅಬ್ಯಾಕಸ್ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದ ಆರಾಧ್ಯಾ ಯಡಳ್ಳಿ ಇವಳನ್ನು ಶಾಲೆ ವತಿಯಿಂದ ಸತ್ಕರಿಸಲಾಯಿತು. 

ಸಕಲೇಶ ಯಡಳ್ಳಿ, ಬಸವರಾಜ ಯಡಳ್ಳಿ, ಶಿಕ್ಷಕರಾದ ಪಿ.ಟಿ.ಹಸರಂಗಿ, ಬಾಳೇಶ್ ಬೋರಗಲ್, ಗೀತಾ ಸೊಲಬನ್ನವರ, ಮಂಜು ಗರಗದ, ಈರಣ್ಣಾ ದಿವಾಣದ, ವಿಜಯಾ ಕೇಂದ್ರಿ, ಗಂಗಮ್ಮ ತುರಮರಿ, ಶಿವಾನಂದ ಶಿರವಂತಿ, ಮುಖಂಡರಾದ ಸೋಮನಿಂಗ ತೋಟಗಿ, ಯೋಧ ತಮ್ಮಣ್ಣಾ ಬಂಡಿವಡ್ಡರ, ನಿಂಗರಾಜ ಈಟಿ, ಶಂಕರ ಮಾಸೆಟ್ಟಿ, ಚಂದ್ರು ಭರಮಣ್ಣವರ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 

**ಶಾಲೆಗಳು ದೇವಾಲಯವಿದ್ದಂತೆ. ಮಕ್ಕಳು ದೇವರ ಸಮಾನರು. ಮಕ್ಕಳಿಗೆ ನಿಸ್ವಾರ್ಥದಿಂದ ಸೇವೆ ಮಾಡಿದರೆ ಒಳ್ಳೆಯದಾಗುತ್ತದೆ. 

-ಶ್ರೀಶೈಲ ಯಡಳ್ಳಿ,

ಅಧ್ಯಕ್ಷರು,

ಪಿಎಲ್ಡಿ ಬ್ಯಾಂಕ್, ಬೈಲಹೊಂಗಲ  

ಸುದ್ದಿ ಓದಿ