ಮಹಿಳಾ ಫಲಾನುಭವಿಗಳಿಗೆ ಉಚಿತವಾಗಿ ಹೊಲಿಗೆ ಯಂತ್ರ ವಿತರಣೆ
ಗೋಕಾಕ 25: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ 2018-19 ಸಾಲಿನ ಹೊಲಿಗೆ ತರಬೇತಿಯನ್ನು ಪಡೆದ ಮಹಿಳಾ ಫಲಾನುಭವಿಗಳಿಗೆ ಉಚಿತವಾಗಿ ಹೊಲಿಗೆ ಯಂತ್ರಗಳನ್ನು ಜಲಸಂಪನ್ಮೂಲ ಹಾಗೂ ಬೆಳಗಾವಿ ಸಚಿವ ರಮೇಶ ಜಾರಕಿಹೊಳಿ ಅವರು ಸೋಮವಾರದಂದು ನಗರದ ತಮ್ಮ ಕಾರ್ಯಾಲಯದಲ್ಲಿ ವಿತರಿಸಿದರು.
ಈ ಸಂದರ್ಭದಲ್ಲಿ ಜಿ.ಪಂ ಸದಸ್ಯರಾದ ಟಿ.ಆರ್.ಕಾಗಲ, ಮಡ್ಡೆಪ್ಪ ತೋಳಿನವರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ತಾಲೂಕಾ ಅಧಿಕಾರಿ ಆರ್.ಕೆ.ಬಿಸಿರೊಟ್ಟಿ, ವಿಸ್ತರಣಾಧಿಕಾರಿ ಪಿ.ಆರ್.ಬೇವಿನಗಿಡದ, ಮೇಲ್ವಿಚಾರಕರಾದ ಬಿ.ಎ.ಮಾಲದಿನ್ನಿ, ಆರ್.ಎಸ್.ಬಿದರಿ, ಆರ್.ಟಿ.ಬಬಲೆನ್ನವರ, ತರಬೇತಿ ಶಿಕ್ಷಕಿ ಕೆ.ಕೆ.ಘಿವಾರಿ ಇದ್ದರು.