ರಾಣೆಬೆನ್ನೂರ

ಇಂದು ಉಚಿತ ಹೃದಯ ರೋಗ, ಆರೋಗ್ಯ ತಪಾಸಣಾ ಶಿಬಿರ

ಇಂದು ಉಚಿತ ಹೃದಯ ರೋಗ, ಆರೋಗ್ಯ ತಪಾಸಣಾ ಶಿಬಿರ

ರಾಣೆಬೆನ್ನೂರು 08:  ಗ್ರಾಮಾಂತರ ಪ್ರದೇಶದ ಜನ ಸಾಮಾನ್ಯರಿಗೆ ಹೃದಯ ಕಾಯಿಲೆ ಸೇರಿದಂತೆ ಮತ್ತಿತರ ಯಾವುದೇ ಕಾಯಿಲೆಗಳ ಕುರಿತಂತೆ ಅರಿವು ಇರಲಾರದು ಹೀಗಾಗಿ ಮಂಜುನಾಥ್ ಎಸ್. ಗೌಡ ಶಿವಣ್ಣನವರ ಅಭಿಮಾನಿ ಬಳಗವು ಆದಿಕವಿ  ಮಹರ್ಷಿವಾಲ್ಮೀಕಿ ಜಯಂತೋತ್ಸವದ ನಿಮಿತ್ತ, ಸಪ್ತಗಿರಿ ಆಸ್ಪತ್ರೆ ಸಂಯೋಗದಲ್ಲಿ, ತುಮ್ಮಿನಕಟ್ಟಿ  ಮತ್ತು ಮೇಡ್ಲೇರಿ ಗ್ರಾಮದಲ್ಲಿ ಸಂಪೂರ್ಣ ಉಚಿತ ಆರೋಗ್ಯ ತಪಾಸಣಾ ಶಿಬಿರವು ಆಯೋಜಿಸಲಾಗಿದೆ ಎಂದು ಮಂಜುನಾಥ ಗೌಡಶಿವಣ್ಣನವರ ಹೇಳಿದರು. ಅವರು ಶುಕ್ರವಾರ ಮುಂಜಾನೆ ಹಲಗೇರಿ ರಸ್ತೆಯ ಜನಸಂಪರ್ಕ ಕಾರ್ಯಾಲಯದಲ್ಲಿ, ಏರ್ಪಡಿಸಲಾಗಿದ್ದ, ಮಾಧ್ಯಮಗೋಷ್ಟಿಯಲ್ಲಿಮಾತನಾಡಿದರು. ಅಭಿಮಾನಿ ಬಳಗವು, ಸಾಮಾಜಿಕ, ಸಾಂಸ್ಕೃತಿಕ, ಸಾಹಿತಿಕ, ಧಾರ್ಮಿಕವೂ ಸೇರಿದಂತೆ ಜನಪರ ಕಾರ್ಯಗಳ ಮೂಲಕ ತನ್ನ ಸೇವಾ ಪರತೆ ಮೆರೆಯುತ್ತಲಿದೆ ಎಂದರು. 

ಅ.9ರಂದು ರವಿವಾರ ತುಮ್ಮಿನಕಟ್ಟಿ ಯಲ್ಲಿ ಮತ್ತು ಅ. 10ರಂದು ಸೋಮವಾರ ಮೇಡ್ಲೇರಿ ಗ್ರಾಮದಲ್ಲಿ ಮುಂಜಾನೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ  ಶಿಬಿರ ಆಯೋಜಿಸಲಾಗಿದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆಯುವುದರ ಮೂಲಕ  ರೋಗ ಮುಕ್ತರಾಗಬೇಕು ಎನ್ನುವ ಏಕೈಕ ಸದುದ್ದೇಶ ಬಳಗ ಹೊಂದಿದೆ ಎಂದು ಅವರು ವಿವರಿಸಿ ಮಾತನಾಡಿದರು. ಶಿಬಿರಾರ್ಥಿ ಗಳು  ಬರುವಾಗ ಬಿಪಿಎಲ್ ಕಾರ್ಡ್  ಆಧಾರ್ ಕಾರ್ಡ್   ತರಬೇಕು. ಹೃದಯ ಶಸ್ತ್ರಚಿಕಿತ್ಸೆ ಅಗತ್ಯವಿರುವವರಿಗೆ ಯಾವುದೇ ಖರ್ಚು  ವೆಚ್ಚವಿಲ್ಲದೆ ಉಚಿತವಾಗಿ  ಚಿಕಿತ್ಸೆ ನಡೆಸಿ, ಮರಳಿ  ಮನೆಗೆ ತರಲಾಗುವುದು ಎಂದರು. ಸಪ್ತಗಿರಿ ವ್ಯವಸ್ಥಾಪಕ ರಾಜೇಶ ಗೌಡ ಅವರು, ತಪಾಸಣೆ ಹೊಂದಿ, ನಂತರ ಇರುವ ರೋಗದ ಬಗ್ಗೆ  ಮಾಹಿತಿ ಲಭ್ಯವಾಗಲಿದೆ, ಅಗತ್ಯವಿದ್ದಲ್ಲಿ ವೆಚ್ಚವಿಲ್ಲದೆ, ಆರೋಗ್ಯ ರಕ್ಷಣೆ ಮಾಡಿಕೊಳ್ಳಬಹುದಾಗಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಕರಿಯಪ್ಪ ಸಿಡಗನಾಳ್, ಮಂಜಪ್ಪ ಗಡ್ಡದ ಗೂಳಿ,ಮಲ್ಲಿಕಾರ್ಜುನ  ಅಡಿವೆಪ್ಪ ನವರ, ಚೆನ್ನಪ್ಪ ಸಪ್ಪಣ್ಣನವರ,ಶಿವು ಕಡೂರು, ಸುಧಾ ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು 

ಸುದ್ದಿ ಓದಿ